ಆ್ಯಪ್ನಗರ

ಕಾರ್ಕಳ: 2 ಮಂಗಗಳಿಗೆ ಕೆಎಫ್‌ಡಿ ಸೋಂಕು ದೃಢ

ಕೆಎಫ್‌ಡಿ ಸೋಂಕು ಪತ್ತೆಯಾದಂದಿನಿಂದ ಈವರೆಗೆ ಕಾರ್ಕಳ ತಾಲೂಕಿನಲ್ಲಿ ಒಟ್ಟು 52 ಮಂಗಗಳು ಮೃತಪಟ್ಟಿದ್ದು, ಅವುಗಳ ಪೈಕಿ ಎರಡು ಮಂಗಗಳಿಗೆ ಮಂಗನಕಾಯಿಲೆ ಸೋಂಕು ಇತ್ತೆಂಬುದು ದೃಢಪಟ್ಟಿದೆ.

Vijaya Karnataka 16 Feb 2019, 5:00 am
ಕಾರ್ಕಳ: ಕೆಎಫ್‌ಡಿ ಸೋಂಕು ಪತ್ತೆಯಾದಂದಿನಿಂದ ಈವರೆಗೆ ಕಾರ್ಕಳ ತಾಲೂಕಿನಲ್ಲಿ ಒಟ್ಟು 52 ಮಂಗಗಳು ಮೃತಪಟ್ಟಿದ್ದು, ಅವುಗಳ ಪೈಕಿ ಎರಡು ಮಂಗಗಳಿಗೆ ಮಂಗನಕಾಯಿಲೆ ಸೋಂಕು ಇತ್ತೆಂಬುದು ದೃಢಪಟ್ಟಿದೆ.
Vijaya Karnataka Web karkala 2 monkeys have confirmed kfd infection
ಕಾರ್ಕಳ: 2 ಮಂಗಗಳಿಗೆ ಕೆಎಫ್‌ಡಿ ಸೋಂಕು ದೃಢ


ಕಳೆದೊಂದು ತಿಂಗಳಿನಲ್ಲಿ ದಾಖಲಾದ ಪ್ರಕರಣಗಳ ಪೈಕಿ 19 ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವುಗಳ ಪೈಕಿ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಮತ್ತು ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ಪತ್ತೆಯಾದ ಮಂಗಗಳ ಸ್ಯಾಂಪಲ್‌ನಲ್ಲಿ ಈ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಯೋ ಸಹಜ ಸಾವನ್ನು ಕಂಡ ಮಂಗಗಳ ಮೃತದೇಹಗಳನ್ನು ಕೂಡ ಪತ್ತೆ ಹಚ್ಚಿದ ಜನತೆ, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ. ಪರಿಣಾಮ ಮಂಗನಕಾಯಿಲೆ ಬಗ್ಗೆ ಜನತೆ ಜಾಗೃತರಾಗಿರುವುದು ಕಂಡು ಬಂದಿದೆ ಎಂದು ಕಾರ್ಕಳ ವಲಯಾರಣ್ಯಾಧಿಕಾರಿ ಜಿ.ಡಿ. ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ