ಆ್ಯಪ್ನಗರ

31ರಂದು ಮಲ್ಪೆ ಬೀಚ್‌ನಲ್ಲಿ ಗಾಳಿಪಟ ಉತ್ಸವ

ಮಲ್ಪೆ ಸಮುದ್ರ ತೀರದಲ್ಲಿ ಡಿ. 31ರಂದು ಬೀಚ್‌ ಗಾಳಿಪಟ ಉತ್ಸವ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

Vijaya Karnataka 23 Dec 2018, 5:00 am
ಉಡುಪಿ: ಮಲ್ಪೆ ಸಮುದ್ರ ತೀರದಲ್ಲಿ ಡಿ. 31ರಂದು ಬೀಚ್‌ ಗಾಳಿಪಟ ಉತ್ಸವ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.
Vijaya Karnataka Web 3


ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ, ಬೀಚ್‌ ಗಾಳಿಪಟ ಉತ್ಸವ ಏರ್ಪಡಿಸುವ ಕುರಿತು ಪೂರ್ವಬಾವಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಬೀಚ್‌ನಲ್ಲಿ ಡಿ.31ರಂದು ನಡೆಯುವ ಬೀಚ್‌ ಗಾಳಿಪಟ ಉತ್ಸವದಲ್ಲಿ ಸುಮಾರು 40 ಮಂದಿ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಅತ್ಯಾಕರ್ಷಕ ಮಾದರಿಯ ಗಾಳಿಪಟಗಳನ್ನು ಹಾರಿಸಲಿದ್ದು, ಸಂಜೆ 6 ರಿಂದ 8 ಗಂಟೆಯವರೆಗೆ ಎಲ್‌.ಇ.ಡಿ. ಬೆಲೂನ್‌ ಹಾರಾಟ ನಡೆಯಲಿದೆ. ಆಸಕ್ತರಿಗೆ ನಾನಾ ರೀತಿಯ ಗಾಳಿಪಟ ತಯಾರಿಸುವ ಕುರಿತು ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಸಹ ನಡೆಯಲಿದೆ. ಸಂಜೆ 6.30 ರಿಂದ ಪಂಚವಾದ್ಯ, ಕೋರಗ ಡೋಲು, ಹುಲಿ ವೇಷ ಬ್ಯಾಂಡ್‌, ನಾಸಿಕ್‌ ಬ್ಯಾಂಡ್‌, ನಗಾರಿ ಬ್ಯಾಂಡ್‌ ಮತ್ತು ವರ್ಲ್ಡ್‌ ಮ್ಯೂಸಿಕ್‌ ಬ್ಯಾಂಡ್‌ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 12 ಗಂಟೆಗೆ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೀಚ್‌ ಗಾಳಿಪಟ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಾನಾ ಅಧಿಕಾರಿಗಳನ್ನೊಂಡ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದರು. ನಗರಸಭೆ ಆಯುಕ್ತ ಆನಂದ್‌ ಚಿ.ಕಲ್ಲೋಳಿಕರ್‌, ಮಲ್ಪೆ ಬೀಚ್‌ ಅಭಿವೃದ್ಧಿಯ ಸುದೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ