ಆ್ಯಪ್ನಗರ

ಕೇರಳದ ಕಡೆಗೆ ಸಂಚರಿಸುವ ಕೊಂಕಣ ರೈಲು ಸೇವೆ ಆ20ರವರೆಗೆ ರದ್ದು

ಕೊಂಕಣ ರೈಲು ಮಾರ್ಗದಲ್ಲಿ ಕೇರಳದ ಕಡೆಗೆ ಸಂಚರಿಸುವ ರೈಲು ಸೇವೆಯನ್ನು ಆ20ರ ತನಕ ರದ್ದುಗೊಳಿಸಲಾಗಿದೆ. ಈ ಬೆಗೆಗಿನ ಸಮಗ್ರ ಮಾಹಿತಿ ಇಲ್ಲಿದೆ.

Vijaya Karnataka Web 10 Aug 2020, 4:57 pm
ಉಡುಪಿ: ಕೊಂಕಣ ರೈಲು ಮಾರ್ಗದಲ್ಲಿ ಕೇರಳದ ಕಡೆಗೆ ಸಂಚರಿಸುವ ರೈಲು ಸೇವೆಯನ್ನು ಆ.20ರ ತನಕ ರದ್ದುಗೊಳಿಸಲಾಗಿದೆ. ರೈಲು ಸಂಚರಿಸುವ ದಾರಿಯುದ್ದಕ್ಕೂ ಹಲವು ಕಡೆ ಭೂಕುಸಿತ ಸಂಭವಿಸಿರುವುದು ಇದಕ್ಕೆ ಕಾರಣ.
Vijaya Karnataka Web Railways


ಎರ್ನಾಕುಲಂ ಜಂಕ್ಷನ್‌, ಹಝ್ರತ್‌ ನಿಜಾಮುದ್ದೀನ್‌ ಡೈಲಿ ಸೂಪರ್‌ ಫಾಸ್ಟ್‌ ಸ್ಪೆಶಲ್‌ ರೈಲು ಆ.20ರ ತನಕ ಮಡಗಾಂವ್‌, ಲೋಂಡಾ ಜಂಕ್ಷನ್‌, ಮೀರಜ್‌ ಜಂಕ್ಷನ್‌ ಪುಣೆ, ಪನ್ವೇಲ್‌, ಕಲ್ಯಾಣ್‌ ಜಂಕ್ಷನ್‌ ಮೂಲಕ ಸಂಚರಿಸಲಿದೆ.

ಹಝ್ರತ್‌ ನಿಝಾಮುದ್ದೀನ್‌ ಎರ್ನಾಕುಲಂ ಜಂಕ್ಷನ್‌(ತುರಂತೊ ಸಾಪ್ತಾಹಿಕ ರೈಲು) ಹಝ್ರತ್‌ ನಿಝಾಮುದ್ದೀನ್‌ ರೈಲು ನಿಲ್ದಾಣದಿಂದ ಆ.15ರಂದು ಮತ್ತು ಎರ್ನಾಕುಲಂ ಜಂಕ್ಷನ್‌ ಹಝ್ರತ್‌ ನಿಝಾಮುದ್ದೀನ್‌ ತುರಂತೊ ಸಾಪ್ತಾಹಿಕ ರೈಲು ಎರ್ನಾಕುಲಂ ಜಂಕ್ಷನ್‌ ನಿಲ್ದಾಣದಿಂದ ಆ.11, 18ರಂದು ಜೋಳಾರಪೇಟೆ ಜಂಕ್ಷನ್‌, ಗುಂಡ್ಕಲ್‌, ಪುಣೆ ಮಾರ್ಗವಾಗಿ ಸಂಚರಿಸಲಿದೆ.

ಶಿವಮೊಗ್ಗ-ರಾಣೆಬೆನ್ನೂರು, ಬೆಳಗಾವಿ-ಧಾರವಾಡ ರೈಲು ಮಾರ್ಗ ಶೀಘ್ರ

ತಿರುವನಂತಪುರ ಸೆಂಟ್ರಲ್‌, ಲೋಕಮಾನ್ಯ ತಿಲಕ್‌ ಡೈಲಿ ಸ್ಪೆಶಲ್‌ ರೈಲು ಆ.20ರ ತನಕ ಸಂಚರಿಸುವುದಿಲ್ಲ. ವಾರದಲ್ಲಿ ಮೂರು ದಿನ ಹೊಸದಿಲ್ಲಿಯಿಂದ ಹೊರಡುವ ಹೊಸದಿಲ್ಲಿ ತಿರುವನಂತಪುರ ಸೆಂಟ್ರಲ್‌ ರಾಜಧಾನಿ ಸೂಪರ್‌ ಫಾಸ್ಟ್‌ ಸ್ಪೆಶಲ್‌ ರೈಲು ಆ.11, 12,16, 18ರಂದು ಸಂಚರಿಸುವುದಿಲ್ಲ.

ಕಿಸಾನ್ ರೈಲಿಗೆ ರಾಜ್ಯ ಪ್ರಸ್ತಾವ ಸಲ್ಲಿಸಿದರೆ ಪರಿಶೀಲನೆ: ಸಚಿವ ಸುರೇಶ್ ಅಂಗಡಿ

ತಿರುವನಂತಪುರ ಹೊಸದಿಲ್ಲಿ ರಾಜಧಾನಿ ಸೂಪರ್‌ ಫಾಸ್ಟ್‌(ವಾರದಲ್ಲಿ ಮೂರು ದಿನ ಮಾತ್ರ) ತಿರುವನಂತಪುರದಿಂದ ಆ.11, 13,14,18,20ರಂದು ಹೊಸದಿಲ್ಲಿಗೆ ಸಂಚರಿಸದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ