ಆ್ಯಪ್ನಗರ

ಕುಂದಾಪುರದಲ್ಲಿ ಮಳೆ: ನಿಟ್ಟುಸಿರು ಬಿಟ್ಟ ನಾಗರಿಕರು

ಕೆಲ ದಿನಗಳಿಂದ ಬಿಸಿಲ ಧಗೆಗೆ ಕಂಗೆಟ್ಟಿದ್ದ ನಾಗರಿಕರು ಮಂಗಳವಾರ ಸುರಿದ ಮಳೆಯಿಂದ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Vijaya Karnataka 1 May 2019, 5:00 am
ಕುಂದಾಪುರ : ಕೆಲ ದಿನಗಳಿಂದ ಬಿಸಿಲ ಧಗೆಗೆ ಕಂಗೆಟ್ಟಿದ್ದ ನಾಗರಿಕರು ಮಂಗಳವಾರ ಸುರಿದ ಮಳೆಯಿಂದ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
Vijaya Karnataka Web rain


ಮಂಗಳವಾರ ಬೆಳಗ್ಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಪರಿಸರದಲ್ಲಿ ತಂಪಿನ ವಾತಾವರಣವಿದೆ. ಸೋಮವಾರ ತಡರಾತ್ರಿ 3ರಿಂದ ಕಾಣಿಸಿಕೊಂಡ ಮಳೆ ಬೆಳಗ್ಗಿನ ಜಾವದ ತನಕ ಒಂದೇ ಸವನೆ ಸುರಿದಿದೆ. 38 ಡಿಗ್ರಿ ಉಷ್ಣಾಂಶದಿಂದ ಬೆಂದು ಹೋಗಿದ್ದ ನಾಗರಿಕರಗೆ ಮಳೆ ಕೊಂಚ ನೆಮ್ಮದಿ ನೀಡಿದೆ.

ಚತುಷ್ಪಥ ಹೆದ್ದಾರಿಯ ಹಲವೆಡೆ ನಿಂತ ನೀರು: ಗುಡುಗು ಸಹಿತ ಮಳೆಗೆ ಅಲ್ಲಲ್ಲಿ ನೀರು ನಿಂತಿದೆ. ಚತುಷ್ಪಥ ಹೆದ್ದಾರಿಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಮೋಡ ಕವಿದ ವಾತಾವರಣ ತಾಲೂಕಿನಾದ್ಯಂತ ನೆಲೆಸಿದ್ದು, ಮಂಗಳವಾರ ಬೆಳಗ್ಗೆ ಕುಂದಾಪುರ ಪರಿಸರದಲ್ಲಿ ತುಂತುರು ಮಳೆಯೊಂದಿಗೆ ವರುಣನ ಛಾಯೆ ಮುಂದುವರಿದಿದೆ.

ಮಳೆಯ ನಿರೀಕ್ಷೆಯಲ್ಲಿ ನಾಗರಿಕರು:
ವಾತಾವರಣದಲ್ಲಿನ ಉಷ್ಣಾಂಶ ಏರಿಕೆ, ನದಿ ಸಹಿತ ಜಲಮೂಲಗಳ ಬತ್ತುವಿಕೆಯಿಂದ ಕಂಗೆಟ್ಟಿರುವ ನಾಗರಿಕರಿಗೆ ಅನಿರೀಕ್ಷಿತ ಮಳೆ ನೆಮ್ಮದಿ ಮೂಡಿಸಿರುವುದಲ್ಲದೆ ಮಳೆ ಮುಂದುವರಿಯಲಿ ಎಂಬ ಆಶಯ ಹೊರಗೆಡಹಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ