ಆ್ಯಪ್ನಗರ

ಕುಂಜಾಲು ಯಕ್ಷೋತ್ಸವದಲ್ಲಿ 16 ಯೋಧರಿಗೆ ಸನ್ಮಾನ

ನೀಲಾವರ ಕ್ರಾಸ್‌ ಫ್ರೆಂಡ್ಸ್‌ ಕುಂಜಾಲು ಆಂಡ್‌ ರೋಟರಿ ರೋಯಲ್‌ ಬ್ರಹ್ಮಾವರ ಇದರ ಸಹಭಾಗಿತ್ವದಲ್ಲಿ ನಡೆದ ಯಕ್ಷೋತ್ಸವ ಕಾರ್ಯಕ್ರಮದ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ 16 ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

Vijaya Karnataka 25 Dec 2018, 5:00 am
ಮಂದಾರ್ತಿ : ನೀಲಾವರ ಕ್ರಾಸ್‌ ಫ್ರೆಂಡ್ಸ್‌ ಕುಂಜಾಲು ಆಂಡ್‌ ರೋಟರಿ ರೋಯಲ್‌ ಬ್ರಹ್ಮಾವರ ಇದರ ಸಹಭಾಗಿತ್ವದಲ್ಲಿ ನಡೆದ ಯಕ್ಷೋತ್ಸವ ಕಾರ್ಯಕ್ರಮದ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ 16 ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
Vijaya Karnataka Web kunjalu


ಯೋಧರನ್ನು ಸನ್ಮಾನಿಸಿದ ಶಾಸಕ ಕೆ ರಘುಪತಿ ಭಟ್‌ ಮಾತನಾಡಿ, ಯೋಧರನ್ನು ಗುರುತಿಸಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತಹ ಕಾರ್ಯವನ್ನು ಮಾಡಿದ್ದಕ್ಕೆ ಸಂಘಟಕರನ್ನು ಶ್ಲಾಘಿಸಿದರು. ಶಾಸಕರು ಯಾವುದೇ ಕಾರ್ಯಕ್ರಮದಲ್ಲಿ ದೇಶಭಕ್ತಿಯ ವಿಚಾರವನ್ನು ತಂದರೆ ಭಾರತದಲ್ಲಿ ಜನ್ಮ ಪಡೆದ ಸಾರ್ಥಕತೆ ತಂದು ಕೊಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಭೋಜ ಶೆಟ್ಟಿ , ಕೀರ್ತಿನಗರ , ಕೆ. ಶಿವರಾಮ ಮಂಜ ಕನ್ನಾರು, ಜಯರಾಮದೇವ ಮಧ್ಯಸ್ಥ ನೀಲಾವರ ಶ್ರೀನಿವಾಸ ಗಾಣಿಗ, ಶಾಂತಾರಾಮ ಪಾಟೀಲ್‌, ವೆಂಕಟೇಶ ಪ್ರಭು, ರತ್ನಾಕರ ಸಾಮಂತ ಸೂರೆಬೆಟ್ಟು, ಶೇಖರ ನಾಯ್ಕ, ಪಾರ್ತಿಬೆಟ್ಟು, ಅಬ್ದುಲ್‌ ಸಲೀಂ, ಶಂಬು ನಾಯ್ಕ, ಜಯರಾಮ ನಾಯ್ಕ ನೀಲಾವರ ಗುಡ್ಡೆ (ಬಿ.ಎಸ್‌.ಎಫ್‌.), ಸತೀಶ ಪೂಜಾರಿ ನೀಲಾವರ, ಆನಂದ ನಾಯ್ಕ, ಭಾಸ್ಕರ ದೇವಾಡಿಗ ಬೆನಗಲ್‌, ರಾಮದಾಸ ಕುಂಜಾಲು , ಸೀತಾರಾಮ ಪ್ರಭು ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯರಾದ ಮಾರಾಳಿ ಪ್ರತಾಪ್‌ ಹೆಗ್ಡೆ, ಸ್ಥಳೀಯ ಪಂಚಾಯತ್‌ ಸದಸ್ಯರಾದ ನಾರಾಯಣ ನಾಯ್ಕ್‌, ಯಶಪಾಲ ಸುವರ್ಣ, ಉದ್ಯಮಿ ಯತೀಶ್‌ ಕರ್ಕೇರ, ರಾಘವೇಂದ್ರ ಸಾಮಗ ಸಹಿತ ಇನ್ನಿತರ ಗಣ್ಯರು ಭಾಗವಹಿಸಿದ್ದರು.

ಜನ ನಿವೃತ್ತ ಯೋಧರಿಗೆ ಸನ್ಮಾನ ನಡೆಸಲಾಯಿತು ಫೋಟೋ ಕ್ಯಾಪ್ಷನ್‌ ಯಕ್ಷೋತ್ಸವ ಸಮಾರೋಪ ಸಮಾರಂಭದಲ್ಲಿ ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ