ಆ್ಯಪ್ನಗರ

ಲಯನ್ಸ್‌ ಜಿಲ್ಲೆ 317ಸಿ ನೂತನ ಸಂಪುಟ ಪದಗ್ರಹಣ ಸಮಾರಂಭ ಶ್ರೇಷ್ಠ ಸಂಪನ್ನ

ನಮ್ಮ ಚಿಂತನೆಯಲ್ಲಿ ಸ್ಪಷ್ಟತೆ, ಹೃದಯಲ್ಲಿ ಪರಿಶುದ್ಧತೆ ಹಾಗೂ ನಾಲಗೆಯಲ್ಲಿ ಪವಿತ್ರತೆ ಇದ್ದರೆ ನಾವು ಮಾಡುವ ಎಲ್ಲಾ ಕೆಲಸಗಳು ಶ್ರೇಷ್ಠವಾಗುತ್ತವೆ, ಪರಿಪೂರ್ಣವಾಗುತ್ತವೆ ಎಂದು ಲಯನ್ಸ್‌ ಜಿಲ್ಲೆ 317ಸಿ ನೂತನ ಗವರ್ನರ್‌ ವಿ.ಜಿ.ಶೆಟ್ಟಿ ಹೇಳಿದರು.

Vijaya Karnataka 26 Jul 2019, 5:00 am
ಉಡುಪಿ: ನಮ್ಮ ಚಿಂತನೆಯಲ್ಲಿ ಸ್ಪಷ್ಟತೆ, ಹೃದಯಲ್ಲಿ ಪರಿಶುದ್ಧತೆ ಹಾಗೂ ನಾಲಗೆಯಲ್ಲಿ ಪವಿತ್ರತೆ ಇದ್ದರೆ ನಾವು ಮಾಡುವ ಎಲ್ಲಾ ಕೆಲಸಗಳು ಶ್ರೇಷ್ಠವಾಗುತ್ತವೆ, ಪರಿಪೂರ್ಣವಾಗುತ್ತವೆ ಎಂದು ಲಯನ್ಸ್‌ ಜಿಲ್ಲೆ 317ಸಿ ನೂತನ ಗವರ್ನರ್‌ ವಿ.ಜಿ.ಶೆಟ್ಟಿ ಹೇಳಿದರು.
Vijaya Karnataka Web lions


ಅವರು ಗುರುವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಲಯನ್ಸ್‌ ಜಿಲ್ಲೆ 317ಸಿ ಸಂಪುಟ ಪದಗ್ರಹಣ ಸಮಾರಂಭ 'ಶ್ರೇಷ್ಠ 'ದಲ್ಲಿ ತಮ್ಮ ನೂತನ ಸಂಪುಟವನ್ನು ಸಭೆಗೆ ಪರಿಚಯಿಸಿ ಮಾತನಾಡಿದರು.

ನಾವು ಜವಾಬ್ದಾರಿ ವಹಿಸಿಕೊಳ್ಳುವಾಗ ಗುರಿ ಮುಟ್ಟಲು ಹೇಗೆ ಶ್ರಮಿಸುತ್ತೇವೆಯೋ ಹಾಗೆಯೇ ಅಲ್ಲಿಂದ ನಿರ್ಗಮಿಸುವಾಗ, ಅಲ್ಲಿ ಬಿಟ್ಟು ಹೋದ ಮೌಲ್ಯಗಳು, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಿರಬೇಕು. ಈ ನಿಟ್ಟಿನಲ್ಲಿ 100 ವರ್ಷಗಳ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಲಯನ್ಸ್‌ ಸಂಸ್ಥೆಯ ಆದರ್ಶ, ಧ್ಯೇಯ ಹಾಗೂ ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ವಿಸ್ತರಿಸುವ ಸಂಕಲ್ಪವನ್ನು ನಾವು ತೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಸಂಪುಟ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್‌ ಅಂತಾರಾಷ್ಟ್ರೀಯ ನಿಕಟಪೂರ್ವ ಅಧ್ಯಕ್ಷ ಬೆರ್ರಿ ಜೆ. ಪಾಲ್ಮರ್‌ ಸಾಕ್ಷಿಯಾದರು. ಲಯನ್ಸ್‌ ವಿಜಯ ಕುಮಾರ್‌ ರಾಜು ವೆಜೆಸ್ನ ಪದಗ್ರಹಣವನ್ನು ನೆರವೇರಿಸಿದರು. ಜಿಲ್ಲಾ ಡೈರೆಕ್ಟರಿಯನ್ನು ವಿ. ವಿ. ಕೃಷ್ಣ ರೆಡ್ಡಿ ಬಿಡುಗಡೆ ಮಾಡಿದರು.

ಪದಗ್ರಹಣ ಸಮಾರಂಭವನ್ನು ಲಯನ್ಸ್‌ ಪ್ರಥಮ ಮಹಿಳೆ ವಿಲಾಸ ವಿ.ಜಿ.ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್‌ ಜಿಲ್ಲೆ 317ಸಿ ನಿಕಟಪೂರ್ವ ಜಿಲ್ಲಾ ಗವರ್ನರ್‌ ಡಾ.ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಪ್ರಥಮ ಉಪಜಿಲ್ಲಾ ಗವರ್ನರ್‌ ಎನ್‌.ಎಂ.ಹೆಗ್ಡೆ, ದ್ವಿತೀಯ ಉಪ ಜಿಲ್ಲಾ ಗವರ್ನರ್‌ ವಿಶ್ವನಾಥ ಶೆಟ್ಟಿ, ಲಯನ್ಸ್‌ ಪ್ರಮುಖರಾದ ಸೀತಾರಾಮ್‌ ಎಚ್‌. ಟಿ., ಕೆ. ವಂಶಿಧರ್‌ ಬಾಬು, ಜಯಕರ ಶೆಟ್ಟಿ ಇಂದ್ರಾಳಿ, ಸುರೇಶ್‌ ಪ್ರಭು, ಬಸ್ರೂರು ರಾಜೀವ ಶೆಟ್ಟಿ, ರೋನಾಲ್ಡ್‌ ಗೋಮ್ಸ್‌, ಮೊಹಮ್ಮದ್‌ ಮೌಲಾ, ಲಿಯೋ ಅಧ್ಯಕ್ಷ ಫೌಜಾನ ಅಕ್ರಮ್‌, ಕ್ಯಾಬಿನೆಟ್‌ ಇನ್ಸ್ಟಾಲೇಶನ್‌ ಸಮಿತಿಯ ಚೇರ್‌ಮೆನ್‌ ಮನೋಹರ ಶೆಟ್ಟಿ, ಡಾ.ಕೆ.ಮಧುಸೂದನ ಹೆಗ್ಡೆ, ಅನಂತ ಕೆ.ಶೆಟ್ಟಿ , ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜೀವ ಟಿ. ಕರ್ಕೇರ, ಸಂಪುಟ ಕಾರ್ಯದರ್ಶಿ ಜಾರ್ಜ್‌ ಸಾಮ್ಯುವೆಲ್‌, ಡಾ.ನೇರಿ ಕರ್ನೇಲಿಯೋ ಹಾಗೂ ಲಯನ್ಸ್‌ ಪ್ರಥಮ ಮಹಿಳೆ ವಿಲಾಸ ವಿ.ಜಿ.ಶೆಟ್ಟಿ , ಸಂಪುಟದ ಸದಸ್ಯರು, ಲಯನ್ಸ್‌ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಥಮ ಉಪಜಿಲ್ಲಾ ಗವರ್ನರ್‌ ಎನ್‌.ಎಂ.ಹೆಗ್ಡೆ, ದ್ವಿತೀಯ ಉಪ ಜಿಲ್ಲಾ ಗವರ್ನರ್‌ ವಿಶ್ವನಾಥ್‌ ಶೆಟ್ಟಿ, ಲಿಯೋ ಅಧ್ಯಕ್ಷ ಫೌಝನ್‌ ಅಕ್ರಮ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್‌ನ ಸಾಮಾಜಿಕ ಸೇವೆಯ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ 20ವಾಟರ್‌ ಪ್ಯೂರಿಫಯರ್‌ ಹಾಗೂ ಮಹಿಳಾ ಫಲಾನುಭವಿಗಳಿಗೆ 51ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕ್ಯಾಬಿನೆಟ್‌ ಇನ್ಸ್ಟಾಲೇಶನ್‌ ಸಮಿತಿಯ ಚೇರ್‌ಮೆನ್‌ ಮನೋಹರ ಶೆಟ್ಟಿ ಅವರು ಸ್ವಾಗತಿಸಿ, ವಿನ್ಸೆಂಟ್‌ ಆಳ್ವ ಹಾಗೂ ಇಂದಿರಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ಮಧುಸೂದನ ಹೆಗ್ಡೆ ವಂದಿಸಿದರು.

ಶ್ರೇಷ್ಠದ ಅಷ್ಟ ಧ್ಯೇಯಗಳು : ಲಯನ್ಸ್‌ ಜಿಲ್ಲೆ 317ಸಿ ನೂತನ ಗವರ್ನರ್‌ ವಿ.ಜಿ.ಶೆಟ್ಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಂಸ್ಥೆ ಹಮ್ಮಿಕೊಳ್ಳಲಿರುವ ಸಮಾಜ ಸೇವೆಗಳ ಬಗ್ಗೆ ಸ್ಥೂಲ ಪರಿಚಯ ನೀಡಿದರು. ಪ್ರತಿ ಕ್ಲಬ್‌ಗಳ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ನೇತ್ರ ತಪಾಸಣೆ, ಔಷಧಿ, ಶಸ್ತ್ರಕ್ರಿಯೆ, ಕನ್ನಡಕ ವಿತರಣೆ, ಬಡವರಿಗೆ ಪ್ರಸ್ತುತ ಎರಡು ಮನೆ ನಿರ್ಮಿಸಿಕೊಡಲಾಗಿದ್ದು, ಇನ್ನೂ 10 ಮನೆ ನಿರ್ಮಾಣದ ಗುರಿ, ಹಸಿವು ನಿವಾರಣೆ ಯೋಜನೆಯಡಿ ವಿಶೇಷ ಶಾಲೆಗಳ ಮಕ್ಕಳಿಗೆ ಊಟ, ಆಸ್ಪತ್ರೆ ರೋಗಿಗಳಿಗೆ, ಹಸಿದ ಬಡವರಿಗೆ ಆಹಾರ, ಸ್ವಚ್ಛ ಪರಿಸರ ಮತ್ತು ವಾತಾವರಣ ನಿರ್ಮಾಣ, ಗ್ರಾಮೀಣ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡವರಿಗೆ ಧನ ಸಹಾಯ, ಗ್ರಾಮೀಣ ಜನರ ವಿದ್ಯಾರ್ಹತೆ, ಕೌಶಲ್ಯಕ್ಕೆ ಅನುಗುಣವಾಗಿ ತಂಡ ರಚಿಸಿ ವ್ಯಕ್ತಿತ್ವ ವಿಕಸನ, ಸಮಾಜದ ಮುಖ್ಯ ವಾಹಿನಿಗೆ ತರಲು ನೆರವು, ಲಯನ್ಸ್‌ ಸಂಸ್ಥೆಗಳ ಬಲವರ್ಧನೆ, ಮಧುಮೇಹದ ಬಗ್ಗೆ ತಿಳುವಳಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಅಲ್ಲದೆ ಲಯನ್ಸ್‌ ಕಾರ್ಯಕ್ರಮದಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಹಾರ, ತುರಾಯಿ ಸಂಸ್ಕೃತಿಯನ್ನು ಪಾಲಿಸದಿರಲು ನಿರ್ಧರಿಸಲಾಗಿದೆ ಎಂದರು.

ಲಯನ್ಸ್‌ ಕ್ಲಬ್‌ ಕುಂದಾಪುರ ಕ್ರೌನ್‌, ಕುಂದಾಪುರ ಕೋಸ್ಟಲ್‌, ಹಾವಂಜೆ, ಆರಾಡಿ ಬೆಳ್ವೆ ಗೋಳಿದಂಗಡಿ, ಉಡುಪಿ ಮಥುರಾ, ಪೇತ್ರಿ, ಜಡೆ, ತೋಗರ್ಸೆ, ಬಂಟಕಲ್ಲು ಬಿ. ಸಿ. ರೋಡ್‌, ಬನ್ನಾಡಿ ವಡ್ಡರ್ಸೆ ಮೊದಲಾದ 10 ಹೊಸ ಲಯನ್ಸ್‌ ಕ್ಲಬ್‌ಗಳ ರಚನೆಯನ್ನು ಅವರು ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ