Please enable javascript.ಮದ್ದಳೆ ಬಾರಿಸಿ,ಸನ್ಮಾನಕ್ಕೆ ಮದ್ದಳೆಯ ನಾದದಲ್ಲೇ ಕೃತಜ್ಞತೆ ಸಲ್ಲಿಸಿದ ಹಿರಿ ಜೀವ ! - maddale naada - Vijay Karnataka

ಸನ್ಮಾನಕ್ಕೆ ಮದ್ದಳೆಯ ನಾದದಲ್ಲೇ ಕೃತಜ್ಞತೆ ಸಲ್ಲಿಸಿದ ಹಿರಿ ಜೀವ !

Vijaya Karnataka 30 Dec 2018, 5:00 am
Subscribe

ಶತಮಾನದ ಹೊಸ್ತಿಲಲ್ಲಿರುವ ಹಿರಿಯಡ್ಕ ಗೋಪಾಲ ರಾವ್‌ ಸನ್ಮಾನಕ್ಕೆ ಕೃತಜ್ಞತೆಯಾಗಿ ತರುಣನಂತೆ ಮದ್ದಳೆ ಬಾರಿಸಿ ನಾದ ವೈವಿಧ್ಯ ಹೊರಹೊಮ್ಮಿಸಿದರು.

maddale
ಉಡುಪಿ: ಶತಮಾನದ ಹೊಸ್ತಿಲಲ್ಲಿರುವ ಹಿರಿಯಡ್ಕ ಗೋಪಾಲ ರಾವ್‌ ಸನ್ಮಾನಕ್ಕೆ ಕೃತಜ್ಞತೆಯಾಗಿ ತರುಣನಂತೆ ಮದ್ದಳೆ ಬಾರಿಸಿ ನಾದ ವೈವಿಧ್ಯ ಹೊರಹೊಮ್ಮಿಸಿದರು.

ಯಕ್ಷಗಾನ ವಿದ್ವಾಂಸ ಡಾ. ಕೆ.ಎಂ. ರಾಘವ ನಂಬಿಯಾರ್‌ ಅವರು ತಾಳ ಹಾಕಿದರೆ ಗೋಪಾಲ ರಾಯರು ಏಕ ತಾಳದ ನಡೆ ತಾ ತಾ ಕಿಟತಕ , ದದ್ದಿನ್ನ ದದ್ದಿನ್ನತಾಂ ವಿಷಮ ದಸ್ತು ಬಡಿತ ಮಿಡಿತದ ನಾದ ರಸದೌತಣವನ್ನು ಉಣಬಡಿಸಿದರು.

ಅವರು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ತಮಗೆ ಶತಮಾನದ ಹೊಸ್ತಿಲಲ್ಲಿ ಸನ್ಮಾನ, ಬದುಕು ಸಾಧನೆ ವಿಚಾರ ಸಂಕಿರಣ ಹಾಗೂ ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಕರ ಕೌಶಲ್ಯ ಮೆರೆದರು.

ಲಯ ವಿನ್ಯಾಸ ನಡೆಸಿಕೊಟ್ಟ ಗೋಪಾಲ ರಾವ್‌, ಭಾವಕ್ಕನುಸಾರವಾದ ಮಾತು, ಕುಣಿತವೇ ಕಲಾ ಆಸ್ತಿ. ತಂದೆ ಕೊಟ್ಟ ಬಳುವಳಿಯಾದ ಏರು ಮದ್ದಳೆಯನ್ನು ಯಾರಿಗೂ ಕೊಡೋದಿಲ್ಲ, ನಾನೇ ಬಾರಿಸೋದು ಎಂದು ಮದ್ದಳೆಯೊಳಗಿನ ನಾದ ದೇವಿಗೆ ಕೈ ಮುಗಿದರು.

ಭಾಷಣ ಮಾಡಲು ಬರೋದಿಲ್ಲ ಎಂದು ನಾಲ್ಕು ಮಾತನಾಡಿದ ಗೋಪಾಲ ರಾಯರು ಬೇಕಿದ್ದರೆ, ಕಾಲು ಗಂಟೆ ಮದ್ದಳೆ ಬಾರಿಸುತ್ತೇನೆ ಎಂದು ಹೇಳಿ ಯಾವುದೇ ದಣಿವು ಇಲ್ಲದಂತೆ ಮದ್ದಳೆ ನುಡಿಸಿ ಸೈ ಎನಿಸಿಕೊಂಡರು. ನಾದ ವೈವಿಧ್ಯಕ್ಕೆ ನಸು ನಗುವೂ ಹೊರಹೊಮ್ಮಿತು.

ಇಂದ್ರಾಳಿ ಯಕ್ಷಗಾನ ಕೇಂದ್ರದ ಮಕ್ಕಳು ಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಯಕ್ಷಗಾನದ ಪೂರ್ವರಂಗವನ್ನು ಹಿರಿಯಡ್ಕ ಗೋಪಾಲ ರಾಯರ ಪಾದ ಮುಟ್ಟಿ ನಮಸ್ಕರಿಸಿ ಆರಂಭಿಸಿದರು. 4,5ನೇ ತರಗತಿ ಮಕ್ಕಳಾದ ರಾಹುಲ್‌, ಕಾರ್ತಿ ಭಟ್‌ ಭಾಗವತರಾಗಿದ್ದರು.

ಶಮಂತ್‌ ಪೈ(ಮದ್ದಳೆ), ಸಮನ್ವಿ ಮಯ್ಯ(ಚೆಂಡೆ) ಹಾಗೂ ಪ್ರವೀಣ್‌, ಸಂಕೇತ್‌, ಹರ್ಷ, ಕರುಣಾಕರ, ರಾಘವೇಂದ್ರ, ಪ್ರದೀಪ್‌, ನಿಶ್ಚಲ್‌, ಸ್ಕಂದ ಶ್ವೇತ ಕಚ್ಛೆ , ಸೊಂಟಕ್ಕೆ ಕೆಂಪು ಶಾಲು ಸುತ್ತಿ ಕುಣಿದರು. ರಾಮಭದ್ರ ಗೋವಿಂದ ಹರೇ ರಾಮ ಗೋವಿಂದಾ....ರಂಗಯ್ಯ ಮುರಾರೇ ಕೃಷ್ಣಯ್ಯ ಮುರಾರೇ....ಹಾಡಿಗೆ ಮಕ್ಕಳು ಅಭಿನಯಿಸಿದರು.

ಪುಂಗಿ ಬುರುಡೆ ಸರ್ಚ್‌ ಮಾಡಿದರೆ....? : ಯಕ್ಷಗಾನದಲ್ಲಿ ಹಿಂದೆ ಮದ್ದಳೆ ಸ್ಥಾನದಲ್ಲಿ ಪುಂಗಿ ಬುರುಡೆ ಇತ್ತು, ಆದರೆ ನಾ ನೋಡಿಲ್ಲ. ಹೀಗಾಗಿ ಗೂಗಲ್‌ನಲ್ಲಿ ಸರ್ಚ್‌ ಕೊಟ್ಟೆ. ಆದರೆ ಅದು ಪರಸ್ಪರ ಪುಂಗಿ ಊದುವ, ಬುರುಡೆ ಬಿಡುವ ರಾಜಕಾರಣಿಗಳ ಫೋಟೋ ತೋರಿಸಿತು ಎಂದು ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ