ಆ್ಯಪ್ನಗರ

ಸಮ್ಮಿಶ್ರ ಸರಕಾರ ಉರುಳಿದರೆ ಜನರಿಗೆ ಅನುಕೂಲ: ಮಟ್ಟಾರು

ಜನಾದೇಶವಿಲ್ಲದೆ ಹೋದರೂ ಅಧಿಕಾರದ ಆಸೆಗೆ ಕುರ್ಚಿಗೆ ಅಂಟಿಕೊಂಡಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಜಾಪ್ರಭುತ್ವದ ಉಳಿವಿಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕು. ಈ ಸಮ್ಮಿಶ್ರ ಸರಕಾರ ಎಷ್ಟು ಬೇಗ ತೊಲಗುತ್ತದೋ ಅಷ್ಟು ಜನರಿಗೆ ಅನುಕೂಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಲೇವಡಿ ಮಾಡಿದ್ದಾರೆ.

Vijaya Karnataka 10 Jul 2019, 5:00 am
ಉಡುಪಿ: ಜನಾದೇಶವಿಲ್ಲದೆ ಹೋದರೂ ಅಧಿಕಾರದ ಆಸೆಗೆ ಕುರ್ಚಿಗೆ ಅಂಟಿಕೊಂಡಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಜಾಪ್ರಭುತ್ವದ ಉಳಿವಿಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕು. ಈ ಸಮ್ಮಿಶ್ರ ಸರಕಾರ ಎಷ್ಟು ಬೇಗ ತೊಲಗುತ್ತದೋ ಅಷ್ಟು ಜನರಿಗೆ ಅನುಕೂಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಲೇವಡಿ ಮಾಡಿದ್ದಾರೆ.
Vijaya Karnataka Web sammishra


ಅವರು ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಆಗ್ರಹಿಸಿ ಪಕ್ಷದ ಕಚೇರಿ ಮುಂಭಾಗ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರದಲ್ಲಿ ಸಿಎಂ ಸಹಿತ ಯಾರೊಬ್ಬರೂ ವಿಧಾನಸೌಧಕ್ಕೆ ತೆರಳಿ ಕೆಲಸ ಮಾಡುತ್ತಿಲ್ಲ. ಸರಕಾರದ ಉಳಿವಿಗಾಗಿ ಹೋಟೆಲ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಬೇಸತ್ತು 12 ಕ್ಕೂ ಅಧಿಕ ಶಾಸಕರು ರಾಜೀನಾಮೆ ಕೊಟ್ಟಿದ್ದು, ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ಸ್ವೀಕರಿಸುತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೋಲೆ. ಪ್ರಜಾಪ್ರಭುತ್ವದ ಉಳಿವಿಗೆ ಸಿಎಂ ರಾಜೀನಾಮೆ ಅವಶ್ಯವಾಗಿದೆ ಎಂದರು.

ಸರಕಾರ ಅತಂತ್ರ ಪರಿಸ್ಥಿತಿ ಇರುವಾಗಲೇ ರೇವಣ್ಣ 926 ಎಂಜಿನಿಯರ್‌ಗಳ ಪದನ್ನೋತಿಗೆ ಮುಂದಾಗಿದ್ದಾರೆ. ಎಂ.ಬಿ. ಪಾಟೀಲ್‌ ಜಿಂದಾಲ್‌ ಭೂಮಿ ಸಂಬಂಧಿಸಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿ 107 ಶಾಸಕರಿದ್ದರೂ ಸರಕಾರ ರಚನೆಗೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ನೈತಿಕತೆ ಹೊತ್ತು ಅಧಿಕಾರ ತೊರೆಯಲಿ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಇಂತಹ ನಾಚಿಕೆಗೆಟ್ಟಿರುವ ಸಿಎಂ ನಾವು ಕಂಡಿಲ್ಲ. ರಾಜ್ಯವನ್ನು ಗಡಿ ಇಲ್ಲದ ಹೊಲದಂತೆ ಮೇಯುತ್ತಿದ್ದು, ಸ್ವ ಇಚ್ಛೆಯಿಂದ ಇಳಿಯದೆ ಹೋದರೆ ಬಲವಂತವಾಗಿ ಕೆಳಗೆ ಎಳೆದು ಹಾಕಬೇಕೆಂದು ವ್ಯಂಗ್ಯವಾಡಿದರು.

ಈ ಸಂದರ್ಭ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಯಶ್‌ಪಾಲ್‌ ಎ .ಸುವರ್ಣ, ಕುಯಿಲಾಡಿ ಸುರೇಶ್‌ ನಾಯಕ್‌, ಕಪ್ಪೆಟ್ಟು ಪ್ರವೀಣ್‌ ಶೆಟ್ಟಿ, ಗಿರೀಶ್‌ ಅಂಚನ್‌, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಸಂಧ್ಯಾ ರಮೇಶ್‌, ವೀಣಾ ಶೆಟ್ಟಿ, ಶ್ರೀಶ ನಾಯಕ್‌ ಪೆರ್ಣಂಕಿಲ, ಬಾಲಕೃಷ್ಣ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ