ಆ್ಯಪ್ನಗರ

ಮೂಡ್ಲಕಟ್ಟೆ ದೊಡ್ಮನೆ ಕಂಬಳ ಸಂಭ್ರಮ

ಇತಿಹಾಸ ಪ್ರಸಿದ್ಧ ಮೂಡ್ಲಕಟ್ಟೆ ದೊಡ್ಮನೆ ಕಂಬಳ ಮಹೋತ್ಸವ ಭಾನುವಾರ ಅಪರಾಹ್ನ ಜರುಗಿತು. ದೊಡ್ಮನೆಯ ಡಾ.ಜಿ.ಪಿ.ಶೆಟ್ಟಿ ಮತ್ತು ಅನುಸೂಯ ಪಿ.ಶೆಟ್ಟಿ ದಂಪತಿ ಕಂಬಳ ಮಹೋತ್ಸವಕ್ಕೆ ಚಾಲನೆ ನೀಡಿದರು.

Vijaya Karnataka 10 Dec 2018, 5:00 am
ಕುಂದಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಮೂಡ್ಲಕಟ್ಟೆ ದೊಡ್ಮನೆ ಕಂಬಳ ಮಹೋತ್ಸವ ಭಾನುವಾರ ಅಪರಾಹ್ನ ಜರುಗಿತು. ದೊಡ್ಮನೆಯ ಡಾ.ಜಿ.ಪಿ.ಶೆಟ್ಟಿ ಮತ್ತು ಅನುಸೂಯ ಪಿ.ಶೆಟ್ಟಿ ದಂಪತಿ ಕಂಬಳ ಮಹೋತ್ಸವಕ್ಕೆ ಚಾಲನೆ ನೀಡಿದರು.
Vijaya Karnataka Web 15


ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ, ಕಂಬಳ ಗುರಿಕಾರರಾದ ಬಾರಕೂರು ಶಾಂತಾರಾಮ ಶೆಟ್ಟಿ, ವೆಂಕಟ ಪೂಜಾರಿ ಬೈಂದೂರು, ದೊಡ್ಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.

ಹಗ್ಗ ವಿಭಾಗದಲ್ಲಿ 40ಕ್ಕೂ ಮಿಕ್ಕಿ ಜೋಡಿ ಕೋಣಗಳು, ಹಲಗೆ ವಿಭಾಗದಲ್ಲಿ 5ಕ್ಕೂ ಮಿಕ್ಕಿ ಜೋಡಿ ಕೋಣಗಳು ಆಕರ್ಷಕ ಓಟ ಸ್ಪರ್ಧಿಸಿ ಕಂಬಳ ಪ್ರಿಯರ ಉತ್ಸಾಹ ಇಮ್ಮಡಿಗೊಳಿಸಿದವು. ಕಂಬಳ ಉತ್ಸವದಲ್ಲಿ ಪಾಲ್ಗೊಂಡ ಕೋಣಗಳ ಮಾಲೀಕರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಸಹಸ್ರಾರು ಮಂದಿ ಕಂಬಳ ವೀಕ್ಷಿಸಿದರು. ಸಾರ್ವಜನಿಕರಿಗೆ ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಉಪನ್ಯಾಸಕ ಅಕ್ಷ ಯ್‌ ಹೆಗ್ಡೆ ಮೊಳಹಳ್ಳಿ ಮತ್ತು ಮುಖ್ಯ ಶಿಕ್ಷ ಕ ದಿನಕರ ಆರ್‌.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ