ಆ್ಯಪ್ನಗರ

ಮತ ಎಣಿಕೆ ಕೇಂದ್ರ ಪರಿಸರದಲ್ಲಿ ಸಂಚಾರ ಬದಲಾವಣೆ

ಮತ ಎಣಿಕೆ ನಡೆಯುವ ಬ್ರಹ್ಮಗಿರಿಯ ಸೈಂಟ್‌ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೇ 23ರಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

Vijaya Karnataka 21 May 2019, 5:00 am
ಉಡುಪಿ: ಮತ ಎಣಿಕೆ ನಡೆಯುವ ಬ್ರಹ್ಮಗಿರಿಯ ಸೈಂಟ್‌ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೇ 23ರಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
Vijaya Karnataka Web mp election counting
ಮತ ಎಣಿಕೆ ಕೇಂದ್ರ ಪರಿಸರದಲ್ಲಿ ಸಂಚಾರ ಬದಲಾವಣೆ


ಬ್ರಹ್ಮಗಿರಿ ಜಂಕ್ಷ ನ್‌ನಿಂದ ಅಜ್ಜರಕಾಡು ಎಲ್‌ಐಸಿ ಕಚೇರಿವರೆಗೆ ಏಕಮುಖ ಸಂಚಾರ ವ್ಯವಸ್ಥೆ ನಿಷೇಧಿಸಿ, ಮತ ಎಣಿಕೆ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಅಜ್ಜರಕಾಡು ಟೌನ್‌ಹಾಲ್‌ನಿಂದ ಬ್ರಹ್ಮಗಿರಿ ಜಂಕ್ಷ ನ್‌ವರೆಗೆ ಇರುವ ಏಕಮುಖ ಸಂಚಾರದ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಅಜ್ಜರಕಾಡು ಲಾಲ್‌ ಬಹದ್ದೂರ್‌ ಶಾಸ್ತ್ರಿ ರಸ್ತೆಯಿಂದ ಎಲ್‌ಐಸಿ ಕ್ರಾಸ್‌ವರೆಗೆ ಸಾರ್ವಜನಿಕರು ಸೇರಿದಂತೆ ಯಾವುದೇ ವಾಹನಗಳ ಓಡಾಟ ನಿಷೇಧಿಸಿ, ಈ ಮಾರ್ಗವಾಗಿ ಬರುವ ಮತ ಎಣಿಕೆ ಸಿಬ್ಬಂದಿ, ಏಜೆಂಟ್‌, ಅಭ್ಯರ್ಥಿಗಳು, ಮಾಧ್ಯಮದವರು, ಲಘು ಮೋಟಾರು ವಾಹನಗಳಿಗೆ ಸುದರ್ಶನ್‌ ಅಪಾರ್ಟ್‌ಮೆಂಟ್‌ ಹಾಗೂ ಅದರ ಎದುರಿನ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಸೈಂಟ್‌ ಸಿಸಿಲಿಯ ಕಾನ್ವೆಂಟ್‌ ರಸ್ತೆ, ಬ್ರಹ್ಮಗಿರಿ ಮಾರ್ಗವಾಗಿ ಜಗನಾಥ್‌ ನಾಯಕ್‌ ಕ್ರಾಸ್‌ ರಸ್ತೆವರೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳ ಓಡಾಟ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್‌ ನೀಡಲಾಗಿದ್ದು, ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನಾಯಕ್‌ ಕ್ಯಾಂಟೀನ್‌ ಬಳಿಯ ಅಂಬೇಡ್ಕರ್‌ ರಸ್ತೆಯಿಂದ ವಿದ್ಯಾರಣ್ಯ ರಸ್ತೆಯವರೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳ ಓಡಾಟ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್‌ ನೀಡಲಾಗಿದೆ.

ಬ್ರಹ್ಮಗಿರಿಯಿಂದ ಬಾಲಭವನದ ರಸ್ತೆ ಮುಖೇನ ವಿದ್ಯಾರಣ್ಯ ರಸ್ತೆಯಾಗಿ ಅಲಂಕಾರ್‌ ಥಿಯೇಟರ್‌ಗೆ ಬಂದು ಬಸ್‌ ಸ್ಟ್ಯಾಂಡ್‌ಗೆ ಸಾಗಬಹುದಾಗಿದೆ. ಎಲ್‌ಐಸಿ ಜಂಕ್ಷ ನ್‌ನಿಂದ ಹರ್ಷ ಶೋರೂಂ ಮೂಲಕ ಸಿಂಡಿಕೇಟ್‌ ಸರ್ಕಲ್‌ಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ