ಆ್ಯಪ್ನಗರ

ಮುಳ್ಳಿಕಟ್ಟೆ: ಸರಕಾರಿ ಜಾಗಕ್ಕೆ ಆಕಸ್ಮಿಕ ಬೆಂಕಿ

ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಸರ್ಕಾರಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 10 ಎಕರೆಯಷ್ಟು ಭೂಮಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Vijaya Karnataka 17 Jan 2019, 5:00 am
ಕುಂದಾಪುರ: ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಸರ್ಕಾರಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 10 ಎಕರೆಯಷ್ಟು ಭೂಮಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Vijaya Karnataka Web benki


ಇಲ್ಲಿನ ಮುಳ್ಳಿಕಟ್ಟೆಯ ಮುಳೆ ಕೋಡಿ ಕೊಪ್ಪರಿಗೆ ಜಾಗ ಎಂದು ಕರೆಯಲ್ಪಡುವ ಅಂದಾಜು 20 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಸರ್ಕಾರಿ ಜಾಗದಲ್ಲಿ ಸುಮಾರು 10 ಎಕರೆಯಷ್ಟು ಜಾಗಕ್ಕೆ ಬೆಂಕಿ ತಗುಲಿದೆ. ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ಈ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತದನಂತರ ಬೆಂಕಿಯ ಕೆನ್ನಾಲಿಗೆ ಹಬ್ಬುತ್ತಿರುವುದನ್ನು ಗಮನಿಸಿ ಎಚ್ಚೆತ್ತ ಸ್ಥಳೀಯರು ಹಾಗೂ ಯುವಕರು ತಕ್ಷ ಣ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸಂಪರ್ಕಿಸಿ ಬೆಂಕಿ ನಂದಿಸಲು ಮುಂದಾಗಿದ್ದರು.

ಕೊಪ್ಪರಿಗೆ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾಳಿ ಮರಗಳು ಇರುವ ಹಿನ್ನೆಯಲ್ಲಿ ಇವುಗಳಿಂದ ಬಿದ್ದಂತಹ ಎಲೆಗಳ ರಾಶಿಗಳಿಗೆ ಬೆಂಕಿ ತಗುಲಿದೆ. ಇದು ಬೆಂಕಿಯ ತೀವ್ರತೆ ಇನ್ನಷ್ಟು ವ್ಯಾಪಿಸಲು ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ಗಿಡದಿಂದ ಬೆಂಕಿ ನಂದಿಸಲು ಮುಂದಾದರು: ಏರು ತಗ್ಗು ಪ್ರದೇಶಗಳಿಂದ ಕೂಡಿದ ಜಾಗವಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದರೂ ಯಾವುದೇ ಪ್ರಯೋಜನವಾಗದೇ ವಾಹನದೊಂದಿಗೆ ಸ್ಥಳಕ್ಕೆ ತೆರಳಲು ಹರಸಾಹಸ ಪಡುವಂತಾಯಿತು. ಇದರಿಂದಾಗಿ ಪ್ರಯೋಜನವಾಗದೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸಣ್ಣ ಸಣ್ಣ ಗಿಡಗಳನ್ನು ಬಳಸಿ ಬೆಂಕಿ ನಂದಿಸಲು ತೊಡಗಿದರು.

ಸರಿ ಸುಮಾರು ರಾತ್ರಿ 9.30ರ ತನಕ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದ್ದು ನಂತರ ಬೆಂಕಿಯನ್ನು ಒಂದು ಹಂತಕ್ಕೆ ಹತೋಟಿಗೆ ತಂದು ನಿಲ್ಲಿಸಲಾಯಿತು. ಕೊಪ್ಪರಿಗೆ ಪ್ರದೇಶಕ್ಕೆ ತಾಗಿಕೊಂಡೇ ಅಂದಾಜು 20ಕ್ಕೂ ಅಧಿಕ ಮನೆಗಳಿದ್ದು ಬೆಂಕಿಯ ತೀವ್ರತೆ ಹೆಚ್ಚುತ್ತಿರುವಂತೆ ಸ್ಥಳೀಯರು ಭಯಭೀತರಾಗಿದ್ದರು. ತದನಂತರ ಸ್ಥಳೀಯ ಇನ್ನಿತರ ಯುವಕರನ್ನೂ ಕರೆದು ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ