ಆ್ಯಪ್ನಗರ

ನಂದಿಕೂರು-ಕೋಟಿ ಚೆನ್ನಯ ಜೋಡುಕರೆ ಕಂಬಳ

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಅಡ್ವೆ ನಂದಿಕೂರಿನಲ್ಲಿ ನಡೆಯುವ 27ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್‌ ಅವರು ಫೆ.23 ರಂದು ಬೆಳಗ್ಗೆ 8 ಗಂಟೆಗೆ ಉದ್ಘಾಟಿಸುವರು.

Vijaya Karnataka 23 Feb 2019, 5:00 am
ಉಚ್ಚಿಲ: ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಅಡ್ವೆ ನಂದಿಕೂರಿನಲ್ಲಿ ನಡೆಯುವ 27ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್‌ ಅವರು ಫೆ.23 ರಂದು ಬೆಳಗ್ಗೆ 8 ಗಂಟೆಗೆ ಉದ್ಘಾಟಿಸುವರು.
Vijaya Karnataka Web nandikur crore chennaiah jodakare kambala
ನಂದಿಕೂರು-ಕೋಟಿ ಚೆನ್ನಯ ಜೋಡುಕರೆ ಕಂಬಳ


ಎಲ್ಲೂರು ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ವೈ.ಪ್ರಫುಲ್ಲ ಶೆಟ್ಟಿ, ಅಡ್ವೆ ಮಹಾಗಣಪತಿ ದೇವಸ್ಥಾನದ ಜೆನ್ನಿ ಕೃಷ್ಣಮೂರ್ತಿ ಭಟ್‌, ಅಡ್ವೆ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ಸುಂದರ್‌ ಯು.ಸುವರ್ಣ ಪಾಲ್ಗೊಳ್ಳುವರು.

ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ. ಕನೆ ಹಲಗೆ ವಿಭಾಗದಲ್ಲಿ 7.5 ಕೋಲು ಹಾಗೂ 6.5 ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಒಂದು ಮತ್ತು ಅರ್ಧ ಪವನು, ಹಗ್ಗ, ನೇಗಿಲು ಹಿರಿಯ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತ ಕೋಣಗಳಿಗೆ ಪ್ರಥಮ ಒಂದು ಮತ್ತು ದ್ವಿತೀಯ ಅರ್ಧ ಪವನ್‌, ಹಗ್ಗ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತ ಕೋಣಗಳಿಗೆ ಪ್ರಥಮ ಅರ್ಧ, ದ್ವಿತೀಯ ಕಾಲು ಪವನು, ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ಅರ್ಧ ಮತ್ತು ಕಾಲು ಪವನು ಸ್ವರ್ಣ ಬಹುಮಾನಗಳನ್ನು ನೀಡಲಾಗುವುದು.

ಸಂಜೆ ನಡೆಯುವ ಸಭಾ ಕಾರ‍್ಯಕ್ರಮದಲ್ಲಿ ಕಂಬಳ ಮಹಾ ಪೋಷಕ ಬೆಳ್ಮಣ್‌ ಎಸ್‌.ಕೆ. ಸಾಲ್ಯಾನ್‌, ವಿಶ್ವ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸಾಯಿರಾಧ ಗ್ರೂಪ್‌ನ ಮನೋಹರ ಶೆಟ್ಟಿ ದಂಪತಿ ಅವರನ್ನು ಸನ್ಮಾನಿಸಲಾಗುವುದು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

* ಹಗ್ಗ ಹಿರಿಯ ವಿಭಾಗದಲ್ಲಿ ವಿಜೇತ ಕೋಣ ಓಡಿಸಿದವರಿಗೆ ನಡು ಮಗೇರಗುತ್ತು ದಿ. ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನು ಬಹುಮಾನ ವಿತರಿಸಲಾಗುವುದು. ಅಂದು ಸಂಜೆ 7 ಗಂಟೆಗೆ ಕಂಬಳಾಭಿಮಾನಿಗಳು ಹಾಗೂ ಸಾರ್ವಜನಿಕರು ಸೇರಿ ದೀಪ ಪ್ರಜ್ವಲಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ‍್ಯಕ್ರಮ ಆಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ