ಆ್ಯಪ್ನಗರ

ನ್ಯಾಯಾಲಯದಲ್ಲಿ ಅಸ್ತಿತ್ವ ಕಳೆದುಕೊಂಡ ಶೀರೂರು ಶ್ರೀ ಕೇವಿಯೆಟ್‌

ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೇವಿಯೆಟ್ ಅಸ್ತಿತ್ವ ಕಳೆದುಕೊಂಡಿದೆ.

Vijaya Karnataka Web 23 Jul 2018, 12:16 pm
ಉಡುಪಿ: ಉಡುಪಿ ಶ್ರೀಕೃಷ್ಣನನ್ನು ಆರಾಧಿಸುವ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೇವಿಯೆಟ್ ಅಸ್ತಿತ್ವ ಕಳೆದುಕೊಂಡಿದೆ.
Vijaya Karnataka Web shiroor shri


ಉಡುಪಿಯ ಹಿರಿಯ ಹಾಗೂ ಕಿರಿಯ ವಿಭಾಗೀಯ ಸಿವಿಲ್ ನ್ಯಾಯಾಲಯದಲ್ಲಿ ಜು. 4ರಂದು ಶೀರೂರುಶ್ರೀ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಕೇವಿಯೆಟ್ ಸಲ್ಲಿಸಿದ್ದರು.

ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಹೊರತು ಆರು ಮಠಗಳ ಎಂಟು ಯತಿಗಳು ತಮ್ಮ ವಿರುದ್ಧ ಯಾವುದೇ ದಾವೆ ಹೂಡಿ ಮಧ್ಯಂತರ ಆದೇಶ ಪಡೆದುಕೊಳ್ಳದಂತೆ ಕೇವಿಯೆಟ್ ಸಲ್ಲಿಸಿದ್ದರು. ಯಾವುದೇ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪಡೆವ ಕೇವಿಯೆಟ್ ಮೂರು ತಿಂಗಳು ಅಸ್ತಿತ್ವದಲ್ಲಿರುತ್ತದೆ.

ಶೀರೂರು ಶ್ರೀಪಾದರು ಜು. 19ರಂದು ನಿಧನರಾಗಿದ್ದಾರೆ. ಹೀಗಾಗಿ ಕೇವಿಯೆಟ್ ಅಸ್ತಿತ್ವ ಕಳೆದುಕೊಂಡಿದೆ. ತಮ್ಮ ವಿರುದ್ಧ ಆರು ಮಠಗಳ ಎಂಟು ಯತಿಗಳು ಇಲ್ಲಾ ಯಾರಾದರೊಬ್ಬರು ದಾವೆ ಹೂಡಿದರೆ ನ್ಯಾಯಾಲಯವು ಏಕಪಕ್ಷೀಯವಾಗಿ ಮಧ್ಯಂತರ ಆದೇಶ ನೀಡದೆ ತಮ್ಮ ವಾದವನ್ನೂ ಆಲಿಸಬೇಕೆನ್ನುವುದು ಶೀರೂರುಶ್ರೀ ಪರ ವಾದವಾಗಿದೆ.

45ವರ್ಷಗಳಿಂದ ಯತಿಯಾಗಿ ಶ್ರೀಕೃಷ್ಣನ ಪೂಜೆಯ ಮೂರು ಪರ್ಯಾಯ ನೆರವೇರಿಸಿದ ಶೀರೂರು ಶ್ರೀಗಳು ಯತಿ ಧರ್ಮ ಪಾಲಿಸದ ಕಾರಣಕ್ಕೆ ಶಿಷ್ಯ ಸ್ವೀಕಾರ ಮಾಡದಿದ್ದರೆ ಪಟ್ಟದ ದೇವರನ್ನು ನೀಡದಿರುವ ಆರು ಮಠಗಳ ಎಂಟು ಯತಿಗಳ ನಿರ್ಧಾರದ ಹಿನ್ನೆಲೆಯಲ್ಲಿ ಮೊದಲ ಹೆಜ್ಜೆಯಾಗಿ ನ್ಯಾಯಾಲಯದಲ್ಲಿ ಕೇವಿಯೆಟ್ ಸಲ್ಲಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ