ಆ್ಯಪ್ನಗರ

ಕಳ್ಳತನ ಕಡಿವಾಣಕ್ಕೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಉಡುಪಿ ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಕಳ ಪೊಲೀಸ್‌ ಇಲಾಖೆ ಪ್ರತಿ ದೇವಸ್ಥಾನ ಹಾಗೂ ದೈವಸ್ಥಾನದ ಮುಖ್ಯಸ್ಥರಿಗೆ ನೊಟೀಸ್‌ ಜಾರಿಗೊಳಿಸಿದೆ.

Vijaya Karnataka 7 Aug 2018, 5:00 am
ಕಾರ್ಕಳ: ಉಡುಪಿ ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಕಳ ಪೊಲೀಸ್‌ ಇಲಾಖೆ ಪ್ರತಿ ದೇವಸ್ಥಾನ ಹಾಗೂ ದೈವಸ್ಥಾನದ ಮುಖ್ಯಸ್ಥರಿಗೆ ನೊಟೀಸ್‌ ಜಾರಿಗೊಳಿಸಿದೆ.
Vijaya Karnataka Web notice to precaution for theft
ಕಳ್ಳತನ ಕಡಿವಾಣಕ್ಕೆ ಮುನ್ನೆಚ್ಚರಿಕೆ ವಹಿಸಲು ಸೂಚನೆ


ಕ್ರಮಗಳ ವಿವರ:

* ರಾತ್ರಿ ಸಮಯ ದೇವಸ್ಥಾನದ ಭದ್ರತೆಗಾಗಿ ಕಡ್ಡಾಯವಾಗಿ ಕಾವಲುಗಾರರನ್ನು ನೇಮಿಸಬೇಕು.

* ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಬೆಲೆಬಾಳುವ ಸೊತ್ತುಗಳನ್ನು ಸೂಕ್ತ ಲಾಕರ್‌ಗಳಲ್ಲಿ ಇರಿಸಬೇಕು.

* ದೇವಸ್ಥಾನದ ಹುಂಡಿ, ಕಾಣಿಕೆ ಡಬ್ಬಿಗಳನ್ನು ಕಾಲ, ಕಾಲಕ್ಕೆ ತೆರೆದು ವಿಲೇವಾರಿ ಮಾಡಬೇಕು. ಹಣವನ್ನು ಹುಂಡಿ ಮತ್ತು ಕಾಣಿಕೆ ಡಬ್ಬಿಯಲ್ಲಿ ಹೆಚ್ಚಿಗೆ ಇರದಂತೆ ನೋಡಿಕೊಳ್ಳಬೇಕು.

* ದೇವಸ್ಥಾನದ ಮುಖ್ಯ ಸ್ಥಳಗಳಲ್ಲಿ ಸೂಕ್ತ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಆ ಸಿ.ಸಿ. ಕ್ಯಾಮರಾಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.

* ದೇವಸ್ಥಾನಕ್ಕೆ ಭೇಟಿ ನೀಡುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಸೂಕ್ತ ನಿಗಾ ವಹಿಸಿ ಅನುಮಾನ ಬಂದಲ್ಲಿ ತಕ್ಷ ಣ ಠಾಣೆಗೆ ಮಾಹಿತಿ ನೀಡಬೇಕು.


* ನಿರ್ಲಕ್ಷ ್ಯ ಸಲ್ಲದು

ಧಾರ್ಮಿಕ ಕೇಂದ್ರಗಳಲ್ಲಿ ಭದ್ರತಾದೃಷ್ಟಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಂಬಂಧಿಸಿದವರಿಗೆ ಈಗಾಗಲೇ ಸೂಚಿಸಿದ್ದೇವೆ. ಈ ಬಗ್ಗೆ ಯಾರೂ ನಿರ್ಲಕ್ಷಿಸಬಾರದು.

- ಜೋಯ್‌ ಅಂತೋನಿ, ವೃತ್ತ ನಿರೀಕ್ಷ ಕ ಕಾರ್ಕಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ