ಆ್ಯಪ್ನಗರ

ಬೀಡಿ ಕಾರ್ಮಿಕರ ಪಿಎಫ್‌ ಅರ್ಜಿ ಆನ್‌ಲೈನ್‌ ಬೇಡ: ಕೇಂದ್ರಕ್ಕೆ ಸಿಐಟಿಯು ಮನವಿ

ಬೀಡಿ ಕಾರ್ಮಿಕರ ಪಿ.ಎಫ್‌ ಅರ್ಜಿಯನ್ನು ಆನ್‌ಲೈನ್‌ ಮೂಲಕ ಕಳುಹಿಸಬೇಕು ಎಂಬ ಕೇಂದ್ರ ಸರಕಾರದ ನಿರ್ಧಾರ ಹಿಂಪಡೆಯಬೇಕು ಎಂದು ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌(ಸಿಐಟಿಯು) ಒತ್ತಾಯಿಸಿದೆ.

Vijaya Karnataka 20 Dec 2018, 5:00 am
ಉಡುಪಿ: ಬೀಡಿ ಕಾರ್ಮಿಕರ ಪಿ.ಎಫ್‌ ಅರ್ಜಿಯನ್ನು ಆನ್‌ಲೈನ್‌ ಮೂಲಕ ಕಳುಹಿಸಬೇಕು ಎಂಬ ಕೇಂದ್ರ ಸರಕಾರದ ನಿರ್ಧಾರ ಹಿಂಪಡೆಯಬೇಕು ಎಂದು ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌(ಸಿಐಟಿಯು) ಒತ್ತಾಯಿಸಿದೆ.
Vijaya Karnataka Web news/udupi/online
ಬೀಡಿ ಕಾರ್ಮಿಕರ ಪಿಎಫ್‌ ಅರ್ಜಿ ಆನ್‌ಲೈನ್‌ ಬೇಡ: ಕೇಂದ್ರಕ್ಕೆ ಸಿಐಟಿಯು ಮನವಿ


ಈ ಬಗ್ಗೆ ಸಂಘಟನೆ ನಿಯೋಗ ಉಡುಪಿ ಪಿ.ಎಫ್‌ ಕಮಿಷನರ್‌ ಅವರಿಗೆ ಬುಧವಾರ ಮನವಿ ಅರ್ಪಿಸಿತು.

ಅವಿದ್ಯಾವಂತರಾದ ಬಡ ಬೀಡಿ ಕಾರ್ಮಿಕರಿಗೆ ಪ್ರಾವಿಡೆಂಡ್‌ ಫಂಡ್‌ ತೆಗೆಯಲು ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಬರೋದಿಲ್ಲ. ಅದನ್ನು ತಿದ್ದುಪಡಿ ಮಾಡಿ ಮೊದಲು ಇದ್ದ ಕ್ರಮದಲ್ಲಿಯೇ ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.

ಬೀಡಿ ಕಾರ್ಮಿಕ ಪಿಂಚಣಿದಾರರ ವಯಸ್ಸು ಹೆಚ್ಚು ಕಮ್ಮಿಗೆ ಸಂಬಂಧಿಸಿದಂತೆ ತಿಂಬಾ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಶಾಲೆ ಸರ್ಟಿಫಿಕೇಟು ನೀಡಿದರೂ, ತಹಶೀಲ್ದಾರ್‌ರಿಂದ ಜನನ ಪ್ರಮಾಣ ಪತ್ರ ನೀಡಬೇಕು ಎಂದು ತಿಳಿಸುತ್ತಾರೆ. ಆದ್ದರಿಂದ ಶಾಲಾ ದಾಖಲಾತಿ ಮೂಲಕ ಪಿಂಚಣಿ ಅರ್ಜಿಯಲ್ಲಿ ವರ್ಷ ತಿದ್ದುಪಡಿ ಮಾಡಿಕೊಡಬೇಕು. ಪಿ.ಎಫ್‌. ಹಿಂಪಡೆಯಲು ಅರ್ಜಿ ಸರಳಗೊಳಿಸಬೇಕು. ಆಧಾರ್‌ ಕಡ್ಡಾಯ ಮಾಡಬಾರದು ಎಂಬ ಬೇಡಿಕೆಯನ್ನು ಅದು ಮನವಿಯಲ್ಲಿ ತಿಳಿಸಿದೆ.

ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್‌, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬೀಡಿ ಫೆಡರೇಶನ್‌ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಕಾರ್ಯದರ್ಶಿ ಉಮೇಶ್‌ ಕುಂದರ್‌, ಮಲ್ಪೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ನಳಿನಿ ಎಸ್‌., ಬ್ರಹ್ಮಾವರ ಸಂಘದ ಕಾರ್ಯದರ್ಶಿ ವಿಠಲ ಪೂಜಾರಿ, ಕುಂದಾಪುರ ಸಂಘದ ಕಾರ್ಯದರ್ಶಿ ಬಿಲ್ಕಿಸ್‌ಭಾನು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ