ಆ್ಯಪ್ನಗರ

ಪಡುಕರೆ: ಅಲೆಗಳ ರಭಸಕ್ಕೆ ಮಗುಚಿದ ದೋಣಿ ಒಬ್ಬ ಮೀನುಗಾರ ಮೃತ್ಯು, ಇನ್ನೊಬ್ಬ ನಾಪತ್ತೆ

ಉಡುಪಿ ಜಿಲ್ಲೆಯ ಮಲ್ಪೆ ಪಡುಕರೆ ಸಮೀಪ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಬೃಹತ್‌ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ದೋಣಿ ಮುಗುಚಿ ಒಬ್ಬ ಮೀನುಗಾರ ಮೃತಪಟ್ಟಿದ್ದು, ಇನ್ನೊಬ್ಬ ಸಮುದ್ರ ಪಾಲಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

Vijaya Karnataka 26 Jul 2018, 3:35 pm
ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಪಡುಕರೆ ಸಮೀಪ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಬೃಹತ್‌ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ದೋಣಿ ಮುಗುಚಿ ಒಬ್ಬ ಮೀನುಗಾರ ಮೃತಪಟ್ಟಿದ್ದು, ಇನ್ನೊಬ್ಬ ಸಮುದ್ರ ಪಾಲಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
Vijaya Karnataka Web nithesh


ಉದ್ಯಾವರ ಪಿತ್ರೋಡಿ ಶೇಖರ್‌ ಸಾಲಿಯಾನ್‌ ಎಂಬವರ ಪುತ್ರ ನಿತೇಶ್‌ (28) ಮೃತಪಟ್ಟಿದ್ದು, ನೆರೆಮನೆಯ ಸುರೇಶ್‌ ಎಂಬವರ ಪುತ್ರ ನಿಶಾಂತ್‌ (24) ನೀರುಪಾಲಾಗಿದ್ದಾರೆ. ಅಸ್ವಸ್ಥರಾಗಿದ್ದ ರಾಜೇಶ್‌ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಮಧುಕರ (30) ಎಂಬವರಿಗೆ ಸೇರಿದ ಹನುಮ ದೀಕ್ಷಾ ದೋಣಿಯಲ್ಲಿ ಮಧುಕರ ಸಹಿತ 8 ಮಂದಿ ಬುಧವಾರ ಬೆಳಗ್ಗೆ 7 ಗಂಟೆಗೆ ಮೀನುಗಾರಿಕೆಗೆ ತೆರಳಿದಿದ್ದರು. 200 ಮೀ. ದೂರ ತೆರಳಿದ ವೇಳೆ ವಿಪರೀತ ಅಲೆಯಿಂದಾಗಿ ದೋಣಿಯು ಮುಗುಚಿದ್ದು, ದೋಣಿಯಿಂದ ಎಲ್ಲರೂ ನೀರಿಗೆ ಬಿದ್ದಿದ್ದರು.

ಕೆಲವರು ಈಜಿ ದಡ ಸೇರಿದ್ದು, ನಿಶಾಂತ್‌ (24), ನಿತೇಶ್‌ (28) ಹಾಗೂ ರಾಜೇಶ್‌ ನೀರಿನಲ್ಲಿ ಮುಳುಗಿದ್ದರು. ಕೂಡಲೇ ಮಧುಕರ ಹಾಗೂ ಇತರರು ಸೇರಿಕೊಂಡು ರಾಜೇಶ್‌ ಹಾಗೂ ನಿತೇಶ್‌ನನ್ನು ದಡಕ್ಕೆ ಕರೆದುಕೊಂಡು ಬಂದರೆ, ನಿಶಾಂತ್‌ ನಾಪತ್ತೆಯಾಗಿದ್ದಾರೆ. ನಿತೇಶ್‌ ಹಾಗೂ ರಾಜೇಶ್‌ನನ್ನು ಚಿಕಿತ್ಸೆಗಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ನಿತೇಶ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನಿತೇಶ್‌ಗೆ 7 ತಿಂಗಳ ಹಿಂದಷ್ಟೇ ವಿವಾಹವಾಗಿದೆ ಎನ್ನಲಾಗಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ