ಆ್ಯಪ್ನಗರ

ಅಸ್ಪೃಶ್ಯತೆಗೆ ಬಾಲ್ಯದಲ್ಲೇ ಸವಾಲು ಹಾಕಿದ್ದ ಪೇಜಾವರ ಶ್ರೀಗಳು!

ಪೇಜಾವರ ಶ್ರೀಗಳು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದರು. ಬಾಲ್ಯದಲ್ಲೇ ಅಸ್ಪೃಶ್ಯತೆಗೆ ಸವಾಲು ಹಾಕಿದ್ದರು. ಈ ಬಗ್ಗೆ ಸ್ವತ: ಶ್ರೀಗಳೇ ಒಮ್ಮೆ ಹೇಳಿಕೊಂಡಿದ್ದರು. ಈ ಕುರಿತು ವಿವರ ನೀಡಲಾಗಿದೆ.

Vijaya Karnataka Web 29 Dec 2019, 10:41 am
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ತಮ್ಮ ಬಾಲ್ಯದಿಂದಲೇ ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದರು. ಅಸ್ಪೃಶ್ಯತೆಯ ಇರುವಿಕೆಯ ಬಗ್ಗೆ ಬಾಲ್ಯದಿಂದಲೇ ಅವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಶ್ರೀಗಳ ಮನದಾಳದ ಮಾತುಗಳನ್ನು ನೀಡಲಾಗಿದೆ.
Vijaya Karnataka Web vishwesha-theertha-swamiji


ಪುತ್ತೂರಿನ ರಾಮಕುಂಜದಲ್ಲಿರುವ ತಮ್ಮ ಮನೆ ಬಳಿಯ ಕೆರೆ ನೀರಿಗೆ ಅಕ್ಕನ ಜತೆ ಹೋದಾಗ ಬಿದ್ದೆ. ತಳದಲ್ಲಿ ಮಲಗಿದ್ದೆ(ಈಜು ಗೊತ್ತಿರಲಿಲ್ಲ) ಬೊಬ್ಬೆ ಹಾಕಿದಾಗ ಮನೆ ಕೆಲಸದ ದಲಿತನೂ ಅಯ್ಯಾ ಭಂಡಾರೇ...ಅಂತ ಬೊಬ್ಬೆ ಹಾಕುತ್ತಿದ್ದನೇ ಹೊರತು ಸಹಾಯಕ್ಕೆ ಬರಲು ಅಸ್ಪೃಶ್ಯತೆ ಅಡ್ಡಿಯಾಗಿತ್ತು.

ಪೂರ್ವಾಶ್ರಮದ ತಂದೆ ಓಡಿ ಬಂದು ಬಚಾವ್‌ ಮಾಡಿದರು. ಮಾವನನ್ನು ಕೊರಗ ಅಂತ ಅಡ್ಡ ಹೆಸರಿಂದ ಕರೀತಿದ್ದರು. ಈ ಕೊರಗ ಒಳಬರಬಹುದಾದರೆ ಆ ಕೊರಗ(ದಲಿತ) ಯಾಕೆ ಒಳ ಬರಬಾರದು ಎನ್ನುವುದು ನನ್ನ ಪ್ರಶ್ನೆ. 5, 6ರ ಹರಯದಲ್ಲಿ ಶಾಲೆಗೆ ಬಿಲ್ಲವ ಹುಡುಗಿಯ ಜತೆ ಹೋಗುತ್ತಿದ್ದೆ.

ಪುತ್ತೂರಿನ ರಾಮಕುಂಜದಿಂದ ಉಡುಪಿಗೆ ಬಂದ ವೆಂಕಟರಮಣ: ಶ್ರೀಕೃಷ್ಣನ ಕ್ಷೇತ್ರದಿಂದ ರಾಷ್ಟ್ರಮಟ್ಟಕ್ಕೆ ಬೆಳೆದ `ಪೇಜಾವರ'

ನಮ್ಮನ್ನು ಮುಟ್ಟಬಾರದು ಅಂತಿದ್ದಳು, ಯಾಕೆ ಮುಟ್ಟಬಾರದು ಅಂತ ಮುಟ್ಟುತ್ತಿದ್ದೆ. ಮನೆಗೆ ತಿಳಿಸುವುದಾಗಿ ಬೇರೆ ಹೆದರಿಸುತ್ತಿದ್ದಳು. ಅಂದಿನಿಂದಲೇ ಅಸ್ಪೃಶ್ಯತೆ ಯಾಕೆನ್ನುವ ಪ್ರಶ್ನೆ ನನ್ನನ್ನು ಕಾಡಿತ್ತು. ದಲಿತರಿಗೂ ಸಾಮಾಜಿಕ ಸ್ಥಾನಮಾನ ಕೊಡಬೇಕೆಂಬ ನಿರ್ಧಾರ ಕೈಗೊಂಡಿದ್ದೆ ಎನ್ನುವುದು ಪೇಜಾವರಶ್ರೀ ಮನದಾಳದ ಮಾತು.

Pejavara shree no more Live Update - ಕೃಷ್ಣೈಕ್ಯರಾದ ವಿಶ್ವೇಶತೀರ್ಥ ಶ್ರೀಗಳು

ಪೇಜಾವರ ಶ್ರೀಗಳ ಬಗ್ಗೆ 1968ರಲ್ಲಿ ವರಕವಿ ದರಾ ಬೇಂದ್ರೆ ಹೇಳಿದ್ದೇನು ಗೊತ್ತೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ