ಆ್ಯಪ್ನಗರ

ಬಂಟಕಲ್ಲು ಎಂಜಿನಿಯರ್‌ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಸ್ವಸ್ತಿಕ ಸನಿಲ್‌, ಕುಮಾರಿ ಸ್ವಾತಿ ಜಿ., ಕುಮಾರಿ ಪವಿತ್ರ ಮತ್ತು ಪ್ರಗತಿ ಎಂ.ಕೆ. ಅವರು ಸಹಾಯಕ ಪ್ರಾಧ್ಯಾಪಕರಾದ ಶ್ರೀನಿವಾಸ್‌ ನಾಯಕ್‌ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್‌ ವಿಜಿಲೆನ್ಸ್‌ ಮತ್ತು ಪೈನ್ಸ್‌ಅಟೋಮೇಶನ್‌ ಎಂಬ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ವಿನೂತನ ಯೋಜನೆಯನ್ನು ಅಭಿವೃಧಿದ್ಧಿಪಡಿಸಿದ್ದಾರೆ ಇದೊಂದು ವಿನೂತನ ವಿಧಾನವಾಗಿದ್ದು ಇದು ವಾಹನ ಚಾಲನೆಯಲ್ಲಿ ಆಗುವ ತಪ್ಪುಗಳನ್ನು ಮತ್ತು ಸಾರಿಗೆ ನಿಯಮ ಉಲ್ಲಂಘನೆಗಳನ್ನು ಕಂಡುಹಿಡಿದು ರಸೆ ್ತಅಪಘಾತವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.

Vijaya Karnataka 12 Jun 2019, 5:00 am
ಕಟಪಾಡಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಸ್ವಸ್ತಿಕ ಸನಿಲ್‌, ಕುಮಾರಿ ಸ್ವಾತಿ ಜಿ., ಕುಮಾರಿ ಪವಿತ್ರ ಮತ್ತು ಪ್ರಗತಿ ಎಂ.ಕೆ. ಅವರು ಸಹಾಯಕ ಪ್ರಾಧ್ಯಾಪಕರಾದ ಶ್ರೀನಿವಾಸ್‌ ನಾಯಕ್‌ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್‌ ವಿಜಿಲೆನ್ಸ್‌ ಮತ್ತು ಪೈನ್ಸ್‌ಅಟೋಮೇಶನ್‌ ಎಂಬ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ವಿನೂತನ ಯೋಜನೆಯನ್ನು ಅಭಿವೃಧಿದ್ಧಿಪಡಿಸಿದ್ದಾರೆ ಇದೊಂದು ವಿನೂತನ ವಿಧಾನವಾಗಿದ್ದು ಇದು ವಾಹನ ಚಾಲನೆಯಲ್ಲಿ ಆಗುವ ತಪ್ಪುಗಳನ್ನು ಮತ್ತು ಸಾರಿಗೆ ನಿಯಮ ಉಲ್ಲಂಘನೆಗಳನ್ನು ಕಂಡುಹಿಡಿದು ರಸೆ ್ತಅಪಘಾತವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.
Vijaya Karnataka Web 111


ಈ ವ್ಯವಸ್ಥೆಯಲ್ಲಿ ವಾಹನದ ಮುಂದಿನ ಗಾಜಿಗೆ ಆರ್‌ಎಫ್‌ಡಿಐ ಟ್ಯಾಗ್‌ನ್ನು ಅಳವಡಿಸಲಾಗಿರುತ್ತದೆ. ರಸ್ತೆಯಲ್ಲಿ ವಾಹನಗಳು ತಪ್ಪು ದಿಕ್ಕಿನಲ್ಲಿ ಚಲಿಸಿದಾಗ ರಸ್ತೆಯ ಓವರ್‌ಹೆಡ್‌ನಲ್ಲಿ ಇರಿಸಲಾಗಿರುವ ಆರ್‌ಎಫ್‌ಡಿ ಐರೀಡರ್‌ನ ಮೂಲಕ ಕಂಡುಹಿಡಿಯಲಾಗುತ್ತದೆ. ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನೋಂದಣಿ ಮಾಡುವ ಸಮಯದಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಉಪಯೋಗಿಸಿ ಅಂತಹ ವಾಹನಗಳನ್ನು ದಂಡವನ್ನು ಹೇರಬಹುದುದಾಗಿದೆ .ಚಾಲಕರು ವಾಹನಗಳ ನೊಂದಣಿಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೋಡುಬಹುದು ಮತ್ತು ಅವರು ಮಾಡಿದ ನಿಯಮಗಳ ಉಲ್ಲಂಘನೆಯ ವಿವರಗಳನ್ನು ಕೂಡ ನೋಡಬಹುದು. ಪ್ರತಿ ನಿಯಮ ಉಲ್ಲಂಘನೆಗೂ ವಿಧಿಸಲಾಗುವದಂಡದ ಮೊತ್ತವೂ ಇಲ್ಲಿ ಲಭ್ಯವಿದ್ದು, ಪ್ರತೀ ನಿಯಮ ಉಲ್ಲಂಘನೆಯ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ದಂಡದ ಮೊತ್ತವನ್ನು ಚಾಲಕನ ಖಾತೆಯಿಂದ ಕಡಿತಗೊಳಿಸುವ ವ್ಯವಸ್ಥೆಯೂ ಇದರಲ್ಲಿದೆ.

* ನಮ್ಮ ದೈನಂದಿನ ಜೀವನದಲ್ಲಿ ಸಾರಿಗೆ ವ್ಯವಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ದೇಶದ ಸಾರಿಗೆ ವ್ಯವಸ್ಥೆಯು ವಾಹನಗಳ ಸುಗಮ ಚಾಲನೆ ಮತ್ತು ಚಲನೆಗೆ ಅನುವಾಗಲು ಹಲವಾರು ಸಂಚಾರಿ ನಿಯಮಗಳನ್ನು ಹೊಂದಿದ್ದು ಉದಾಹರಣೆಗೆ ವೇಗದ ಮಿತಿ, ಸರಿಯಾದ ದಿಕ್ಕಿನಲ್ಲಿ ಚಾಲನೆ, ಟ್ರಾಫಿಕ್‌ ಸಿಗ್ನಲ್‌, ಮುಂತಾದ ನಿಯಮಗಳನ್ನು ಹೊಂದಿದೆ. ಈ ನಿಯಮಗಳ ಉಲ್ಲಂಘನೆಯು ತೀವ್ರವಾದ ಅಪಘಾತಗಳಿಗೆ ಕಾರಣವಾಗುತ್ತದೆ ಮತ್ತು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ಲೆಯಲ್ಲಿ ಈ ಸಂಶೋಧನೆ ಮಹತ್ವವನ್ನು ಪಡೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ