ಆ್ಯಪ್ನಗರ

ಪ್ರಧಾನಿ ಮೋದಿಯಿಂದ ಪೇಜಾವರ ಶ್ರೀ ಆರೋಗ್ಯ ವಿಚಾರಣೆ: ನಾಳೆ ಉಡುಪಿಗೆ ಅಮಿತ್‌ ಶಾ ಭೇಟಿ?

ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅನಾರೋಗ್ಯಕ್ಕೀಡಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ವೆಂಟಿಲೇಟರ್‌ ಅಳವಡಿಕೆಯಾಗಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

Vijaya Karnataka Web 20 Dec 2019, 12:40 pm
ಉಡುಪಿ: ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅನಾರೋಗ್ಯಕ್ಕೀಡಾಗಿದ್ದು, ಶ್ರೀಪಾದರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿದ್ದಾರೆ. ಅಲ್ಲದೆ, ಉಡುಪಿ ಜಿಲ್ಲೆಗೆ ನಾಳೆ ಅಮಿತ್‌ ಶಾ ಭೇಟಿ ನೀಡುವ ಸಾಧ್ಯತೆ ಇದೆ.
Vijaya Karnataka Web vishwesha-theertha-swamiji


ಮಣಿಪಾಲದ ಕಸ್ತೂರ್‌ ಬಾ ಆಸ್ಪತ್ರೆಗೆ ದಾಖಲಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯವನ್ನು ಪ್ರಧಾನಿ ಮೋದಿ ಶುಕ್ರವಾರ ವಿಚಾರಿಸಿದ್ದಾರೆ. ಅಲ್ಲದೆ ಪೇಜಾವರ ಮಠದ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಮೋದಿ ಹಾರೈಸಿದ್ದಾರೆ.

ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ ಟಿ. ಪಿ. ಅನಂತ್ ಅವರಿಗೆ ದೂರವಾಣಿ ಕರೆ ಮೂಲಕ ಪೇಜಾವರ ಶ್ರೀಪಾದರ ಆರೋಗ್ಯದ ಸ್ಥಿತಿಗತಿಯ ವಿವರವನ್ನು ಪ್ರಧಾನಿ ಮೋದಿ ಕೇಳಿದ್ದಾರೆ. ಅಲ್ಲದೆ, ಮೋದಿ ಉಡುಪಿ ಭೇಟಿಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Pejawar Seer Health: ಶ್ರೀಗಳ ಸ್ಥಿತಿ ಗಂಭೀರ, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ್ದು ಶನಿವಾರ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಭದ್ರತಾ ಪೂರ್ವ ತಯಾರಿಗೂ ಜಿಲ್ಲಾ ಪೊಲೀಸ್‌ ಆಡಳಿತ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಪೇಜಾವರ ಶ್ರೀಗಳ ಆರೋಗ್ಯ ಸ್ಥಿರ, ವೈದ್ಯರಿಂದ ಆಶಾದಾಯಕ ಮಾತು: ಸಚಿವ ಕೋಟ


ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆಗೆ ಕೆಎಂಸಿಯ ಐಸಿಯುಗೆ ದಾಖಲು ಮಾಡಲಾಗಿದೆ. ಕಫ‌ ಸಮಸ್ಯೆ ಜತೆಗೆ ನ್ಯುಮೋನಿಯಾ ಕೂಡ ತಗುಲಿದೆ ಎಂದು ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣು ತಿಳಿಸಿದ್ದಾರೆ.

ಮುಖ್ಯಮಂತ್ರಿಯಿಂದ ಉಡುಪಿ ಪರ್ಯಾಯ ಪುರಪ್ರವೇಶ ಆಮಂತ್ರಣ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ