ಆ್ಯಪ್ನಗರ

ಉಡುಪಿ: ಕೇವಲ 2 ಗಂಟೆಯಲ್ಲೇ 4 ಕಡೆ ಸುಲಿಗೆ..! ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿ ಬಂಧನ

ಒಬ್ಬಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಮಣಿಪಾಲ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಕೆಲವೇ ಗಂಟೆಗಳಲ್ಲಿ ಸುಲಿಗೆ ನಡೆಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

Vijaya Karnataka Web 27 Sep 2020, 9:32 pm
ಉಡುಪಿ: ಒಬ್ಬಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಮಣಿಪಾಲ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಕೆಲವೇ ಗಂಟೆಗಳಲ್ಲಿ ಸುಲಿಗೆ ನಡೆಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
Vijaya Karnataka Web police arrests man accused of robbery case in udupi
ಉಡುಪಿ: ಕೇವಲ 2 ಗಂಟೆಯಲ್ಲೇ 4 ಕಡೆ ಸುಲಿಗೆ..! ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿ ಬಂಧನ


ಕಾಪು ತಾಲೂಕಿನ ಮಲ್ಲಾರು ಕೊಂಬಗುಡ್ಡೆ ನಿವಾಸಿ ಮೊಹಮ್ಮದ್ ಆಶಿಕ್ (19) ಬಂಧಿತ. ಶನಿವಾರ ಉಡುಪಿ-ಮಣಿಪಾಲ ಪರಿಸರದಲ್ಲಿ ಸುಲಿಗೆ ನಡೆಸಲು ಸ್ಕೇಚ್ ರೂಪಿಸಿ ಸುತ್ತಾಡುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಭಾನುವಾರ ನಗರದ ಎಸ್‌ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19, ಬೆಳಗ್ಗಿನ ಜಾವ 4 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ಸುಲಿಗೆ ನಡೆಸಿದ್ದ. ಆರೋಪಿ ಆಶಿಕ್‍ನ ಮೇಲೆ 5 ಪ್ರಕರಣಗಳಿದ್ದು, ಆಶಿಕ್ ಮೇಲೆ 4 ಸುಲಿಗೆ (ಮಣಿಪಾಲ 3, ಉಡುಪಿ 1) ಪ್ರಕರಣಗಳಲ್ಲಿ ಭಾಗಿಯಾದ ಮೇಲೆ ಕಾಪುವಿನಲ್ಲಿ ವರದಿಯಾದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕೃತ್ಯಕ್ಕೆ ಬಳಸಿದ ಯಮಹಾ ಬೈಕ್, ಸ್ಕ್ರೂಡ್ರೈವರ್, ಚೂರಿ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.

ರೌಡಿಶೀಟರ್ ಕೊಲೆ: 36 ಗಂಟೆಯಲ್ಲೇ ಐವರ ಬಂಧನ, ಆರೋಪಿಗಳು ಪೊಲೀಸ್ ಕಸ್ಟಡಿಗೆ

ಬೆಂಗಳೂರಿನಲ್ಲಿ ಕದ್ದ ಬುಲೆಟ್ ವಶಕ್ಕೆ
ಬಂಧಿತ ಆರೋಪಿ ಆಶಿಕ್‍ನಿಂದ ಬೆಂಗಳೂರಿನ ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿರುವ 2 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್‍ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿ ಜತೆಗಿದ್ದ ಇನ್ನೋರ್ವ ಆರೋಪಿಯ ಬಂಧನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ. ಈ ಕೃತ್ಯದ ಹಿಂದಿರುವವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದರು.

ಉಡುಪಿ: ಕಟಪಾಡಿ ನೇಕಾರ ಲಕ್ಷ್ಮಣ್‌ ಶೆಟ್ಟಿಗಾರ್ ವೈರಲ್‌ ಸುದ್ದಿಗೆ ಸಚಿವೆ ಸ್ಮೃತಿ ಇರಾನಿ ಸ್ಪಂದನೆ

ಟೀಂ ಗರುಡದ ನಾಯಕ!ಸುಲಿಗೆ, ಕೊಲೆ ಯತ್ನ ಪ್ರಕರಣದ ಆರೋಪಿ ಕೊಂಬಗುಡ್ಡೆಯ ಮೊಹಮ್ಮದ್ ಆಶಿಕ್ ಟೀಂ ಗರುಡ ಎನ ಪಡ್ಡೆ ಹುಡುಗರ ಗ್ಯಾಂಗ್ ಕಟ್ಟಿಕೊಂಡಿದ್ದ. ಈ ತಂಡದ ನಾಯಕತ್ವವನ್ನು ಆಶಿಕ್ ವಹಿಸಿಕೊಂಡಿದ್ದು, ಮೋಜು, ಮಸ್ತಿ ಮಾಡುವುದು, ರಾತ್ರಿ ಅನಾವಶ್ಯಕ ತಿರುಗಾಡುವುದು ಮಾಡುತ್ತಿದ್ದ. ಬಂಧಿತ ಆಶಿಕ್‍ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಇಂತಹ ಕೃತ್ಯ ಬೇರೆಡೆ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದೆಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ