ಆ್ಯಪ್ನಗರ

ಟ್ರೋಲ್ ವಾಸಣ್ಣಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

ಮುಗ್ಧ ವಾಸು ಅವರಿಂದ ಇಂತಹದ್ದನ್ನು ಮಾಡಿಸುತ್ತಿದ್ದ ಕಿಡಿಗೇಡಿಗಳ ವಿರುದ್ಧ ಇಂತಹ ಕ್ರಮ ಕೈಗೊಳ್ಳದೇ, ವಾಸು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ​​

Vijaya Karnataka Web 18 Mar 2019, 11:13 am
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ವಾಸಣ್ಣ ಎಂದೇ ಪ್ರಸಿದ್ಧಿ ಪಡೆದಿದ್ದ ಮಲ್ಪೆ ವಾಸು ಎಂಬವರಿಗೆ ಪೊಲೀಸರು ಕಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.
Vijaya Karnataka Web Vasu Malpe


ಸೆನ್‌ (ಸೈಬರ್‌, ಆರ್ಥಿಕ ಹಾಗೂ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧ ಠಾಣೆ) ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸೀತಾರಾಮ್‌ ಭಾನುವಾರ ಠಾಣೆಗೆ ವಾಸು ಅವರನ್ನು ಕರೆಯಿಸಿ ಕೆಟ್ಟ ಶಬ್ದದಿಂದ ನಿಂದನೆ ಮಾಡದಂತೆ ಎಚ್ಚರಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಬಾರಿ ವೈರಲ್‌ ಆಗುತ್ತಿದ್ದ ವಾಸು ಅವರ ರಾಜಕೀಯ ಪ್ರೇರಿತ ಮಾತುಗಳು, ಪಕ್ಷದ ನಿಂದನೆ, ರಾಜಕೀಯ ನಾಯಕರನ್ನು ಅಪಹಾಸ್ಯ ಮಾಡಿರುವ ಸಾಕಷ್ಟು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಾಸು ಅವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ಕೊಟ್ಟಿದ್ದೇವೆ. ಅದರ ಜತೆಗೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಒಂದಿಬ್ಬರನ್ನು ಕರೆಯಿಸಿಕೊಂಡಿದ್ದೇವೆ ಎಂದು ಸೆನ್‌ ಇನ್ಸ್‌ಪೆಕ್ಟರ್‌ ತಿಳಿಸಿದ್ದಾರೆ.

ವಾಸು ಅವರಲ್ಲಿ, ಫೇಸ್‌ಬುಕ್‌ ಖಾತೆಗಳಲಿಲ್ಲ. ಮೊಬೈಲ್ ಕೂಡ ಇಲ್ಲ ಆದರೆ ಕೆಲ ಕಿಡಿಗೇಡಿಗಳು ಅವರಿಗೆ ಮದ್ಯ, ಹಣದ ಆಮಿಷವೊಡ್ಡಿ ಈ ಕೃತ್ಯ ಎಸಗುತ್ತಿದ್ದಾರೆ. ಇದುವರೆಗೆ ಸುಮಾರು 12 ಕ್ಕೂ ಅಧಿಕ ಖಾತೆಗಳನ್ನು ಡಿಲೀಟ್‌ ಮಾಡಿದ್ದೇವೆ ಎಂದು ಅವರು, ಮುಂದಿನ ಇಂತಹ ವೀಡಿಯೋ ಚಿತ್ರೀಕರಣ ಮಾಡಿ ಶೇರ್‌ ಮಾಡುವವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮೋದಿ ಅವರ ಕಟ್ಟಾ ಅಭಿಮಾನಿಯಾಗಿರುವ ವಾಸುವಿನಿಂದ ಕಿಡಿಗೇಡಿಗಳು ಮೋದಿ ಪರವಾಗಿ ಮತ್ತು ಇತರ ಪಕ್ಷಗಳ ವಿರುದ್ಧವಾಗಿ ಅವಹೇಳನಕಾರಿಯಾಗಿ ಮಾತನಾಡಿಸುತ್ತಿದ್ದರು. ಬಳಿಕ ಅದನ್ನು ವಾಟ್ಸ್ಆ್ಯಪ್, ಫೇಸ್‌ಬುಕ್‌ಗಳಲ್ಲಿ ಹರಿಯ ಬಿಡುತ್ತಿದ್ದರು. ಮುಗ್ಧ ವಾಸು ಅವರಿಂದ ಇಂತಹದ್ದನ್ನು ಮಾಡಿಸುತ್ತಿದ್ದ ಕಿಡಿಗೇಡಿಗಳ ವಿರುದ್ಧ ಇಂತಹ ಕ್ರಮ ಕೈಗೊಳ್ಳದೇ, ವಾಸು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ