ಆ್ಯಪ್ನಗರ

ಆಟೋ ಚಾಲಕರ ಜೀವನಕ್ಕೆ ಭದ್ರತೆ ಅಗತ್ಯ: ಪ್ರಮೋದ್‌

ದಿನದ 24 ಗಂಟೆಗಳ ಕಾಲವೂ ಸೇವಾ ಮನೋಭಾವನೆಯಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವ ಆಟೋ ರಿಕ್ಷಾ ಚಾಲಕರ ಜೀವನಕ್ಕೆ ಭದ್ರತೆ ನೀಡುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಭವಿಷ್ಯ ನಿಧಿ, ಆರೋಗ್ಯ ವಿಮೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Vijaya Karnataka 18 Feb 2019, 5:00 am
ಉಡುಪಿ : ದಿನದ 24 ಗಂಟೆಗಳ ಕಾಲವೂ ಸೇವಾ ಮನೋಭಾವನೆಯಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವ ಆಟೋ ರಿಕ್ಷಾ ಚಾಲಕರ ಜೀವನಕ್ಕೆ ಭದ್ರತೆ ನೀಡುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಭವಿಷ್ಯ ನಿಧಿ, ಆರೋಗ್ಯ ವಿಮೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.
Vijaya Karnataka Web UDP-17AA AUTO


ಉಡುಪಿ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘಟನೆ ವತಿಯಿಂದ ಮಾಸ್‌ ಇಂಡಿಯಾ ಮಾಹಿತಿ ಸೇವಾ ಸಮಿತಿ ಹಾಗೂ ಸಿದ್ಧಿ ವಿನಾಯಕ ಆಟೋ ಟ್ರಾವೆಲ್ಸ್‌ ಮತ್ತು ಏಜೆನ್ಸಿ ಸಹಯೋಗದೊಂದಿಗೆ ಚಿಟ್ಪಾಡಿ ದೇವಾಡಿಗರ ಸಂಘದ ಏಕನಾಥೇಶ್ವರಿ ಸಭಾಭವನದಲ್ಲಿ ಭಾನುವಾರ ನಡೆದ ರಿಕ್ಷಾ ಚಾಲಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಯೋಜನೆ ಮತ್ತು ಭವಿಷ್ಯ ನಿಧಿಯ ಉದ್ಘಾಟನೆ ಹಾಗೂ ಮಾಸ್‌ ಇಂಡಿಯಾ ಅಧ್ಯಕ್ಷರುಗಳಿಗೆ ಗುರುತು ಚೀಟಿ ವಿತರಣೆ ಮತ್ತು ವಲಯ ಒಂದರ ರಿಕ್ಷಾ ಚಾಲಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಆಟೋ ಚಾಲಕರು ರಾತ್ರಿ, ಹಗಲು, ಬಿಸಿಲು ಮಳೆ ಲೆಕ್ಕಿಸದೆ ಜನರಿಗೆ ಪ್ರಾಮಾಣಿಕ ಸೇವೆ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಆಟೋ ರಿಕ್ಷಾ ಚಾಲಕರಿಗೂ ಗೌರವಯುತ ಹಾಗೂ ಜೀವನ ಭದ್ರತೆ ನೀಡಬೇಕು ಎಂದು ಸಲಹೆ ನೀಡಿದರು.

ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ, ಪ್ರಾಮಾಣಿಕ ಸೇವಾ ಮನೋಭಾವನೆಯಲ್ಲಿ ಕೆಲಸ ಮಾಡಿದಾಗ ಪ್ರತಿಯೊಬ್ಬರ ಜೀವನ ಸುಂದರವಾಗಿರುತ್ತದೆ. ಇದಕ್ಕೆ ಹೆಚ್ಚಿನ ಫಲ ಸಿಗಬೇಕಾದರೆ ದೇವರ ಅನುಗ್ರಹ ಅಗತ್ಯ. ಭಗವಂತನ ನಾಮಸ್ಮರಣೆವಿದ್ದಾಗ ವಿಶಿಷ್ಟ ಶಕ್ತಿ ಜಾಗೃತವಾಗುತ್ತದೆ. ಶ್ರದ್ಧೆ ಹಾಗೂ ನಂಬಿಕೆವಿದ್ದಾಗ ಭಗವಂತನ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದರು.

ಉದ್ಯಮಿ ಮನೋಹರ್‌ ಶೆಟ್ಟಿ, ವಕೀಲ ಉಮೇಶ್‌ ಶೆಟ್ಟಿ ಕಳತ್ತೂರು, ಮಾಸ್‌ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟಿಯಾರ್‌, ನಂದಾ ಜಿ. ಕೋಟಿಯಾರ್‌, ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘಟನೆಯ ಅಧ್ಯಕ್ಷ ರಾಜೇಶ್‌ ಬಿ. ಶೆಟ್ಟಿ, ಸಿದ್ದಿವಿನಾಯಕ ಆಟೋ ಟ್ರಾವೆಲ್ಸ್‌ನ ಮಾಲೀಕ ವಿಠಲ ಜತ್ತನ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ