ಆ್ಯಪ್ನಗರ

ಉಡುಪಿಯಲ್ಲಿ ಕಡಿಮೆಯಾದ ಮಳೆ, ತಗ್ಗಿದ ನೆರೆ, ನಿಲ್ಲದ ಆತಂಕ

ಸೋಮವಾರ ಮಳೆ ತುಸು ಕಡಿಮೆಯಾಗಿದ್ದರೂ ನಗರದ ಪರಿಸ್ಥಿತಿ ಮಾತ್ರ ಸಹಜ ಸ್ಥಿತಿಗೆ ಮರಳಿಲ್ಲ. ನೆರೆ ಸ್ಚಲ್ಪ ಇಳಿದಿದ್ದರಿಂದ ಸೋಮವಾರ ಮನೆ, ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಚ್ಛತಾ ಕಾರ್ಯ, ವಸ್ತುಗಳ ಜೋಡಣೆಯಲ್ಲಿ ತಲ್ಲೀನರಾಗಿದ್ದಾರೆ.

Vijaya Karnataka 21 Sep 2020, 1:57 pm
ಉಡುಪಿ: ಕಳೆದೆರಡು ದಿನಗಳಿಂದ ಆರ್ಭಟಿಸಿದ್ದ ವರುಣನ ಅಬ್ಬರಕ್ಕೆ ಅಸ್ತವ್ಯಸ್ಥಗೊಂಡಿದ್ದ ನಗರದ ಜನಜೀವನ ಸೋಮವಾರ ಯಥಾಸ್ಥಿತಿಗೆ ಮರಳಲು ಹರಸಾಹಸ ಪಡುತ್ತಿದೆ. ನೆರೆ ನುಗ್ಗಿ ಅವಾಂತರ ಸೃಷ್ಟಿಸಿದ ಕುರುಹುಗಳು ಮಾತ್ರ ಜನರನ್ನು ಬೆಚ್ಚಿ ಬೀಳಿಸುವಂತಿದೆ‌.
Vijaya Karnataka Web Udupi Rain


ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಅಂಗಡಿ ಮುಂಗಟ್ಟು, ಗೋದಾಮು, ಮನೆ ಸೇರಿದಂತೆ ವಾಣಿಜ್ಯ ಮಳಿಗೆಗಳಲ್ಲಿ ಅವಾಂತರ ಸೃಷ್ಟಿಯಾಗಿತ್ತು. ನೆರೆಗೆ ಕೋಟ್ಯಾಂತರ ರೂಪಾಯಿ ನಷ್ಟವೂ ಸಂಭವಿಸಿದೆ.

ಉಡುಪಿ ಪ್ರವಾಹ; ವಿಶ್ವವಿಖ್ಯಾತ ಕಾಪು ಲೈಟ್‌ಹೌಸ್‌ ಸಂಪರ್ಕಿಸುವ ಕಾಲು ದಾರಿ ಕಡಿತ..!

ನೆರೆ ಇಳಿದಿದ್ದರಿಂದ ಸೋಮವಾರ ಮನೆ, ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಚ್ಛತಾ ಕಾರ್ಯ, ವಸ್ತುಗಳ ಜೋಡಣೆಯಲ್ಲಿ ತಲ್ಲೀನರಾಗಿದ್ದಾರೆ. ನೆರೆ ತಗ್ಗಿದ್ದರೂ ನೆರೆಯ ಭೀತಿ ಮಾತ್ರ ಇನ್ನೂ ಮರೆಯಾಗಿಲ್ಲ.

ಸೋಮವಾರ ಮಳೆ ತುಸು ಕಡಿಮೆಯಾಗಿದ್ದರೂ ನಗರದ ಪರಿಸ್ಥಿತಿ ಮಾತ್ರ ಸಹಜ ಸ್ಥಿತಿಗೆ ಮರಳಿಲ್ಲ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡುವಲ್ಲಿ ನಿರತರಾಗಿದ್ದಾರೆ.

ವರುಣನ ಅಬ್ಬರಕ್ಕೆ ತತ್ತರಿಸಿದ ಉಡುಪಿ: 50 ಕುಟುಂಬಗಳ ರಕ್ಷಣೆ, ಮಲ್ಪೆಯಲ್ಲಿ 3 ಬೋಟ್ ಮುಳುಗಡೆ!

ಶನಿವಾರದ ನೆರೆಗೆ 50 ವರ್ಷದ ಹಳೆಯ ಮನೆಯೊಂದು ಕುಸಿದು ಬಿದ್ದಿದ್ದು, ವೃದ್ಧರು ಆಕ್ರಂದನ ಮನ ಕಲುವಂತಿತ್ತು. ಶನಿವಾರ ತಡರಾತ್ರಿಯಿಂದ ಬಿರುಸುಗೊಂಡಿದ್ದ ವರುಣನ ಅಬ್ಬರಕ್ಕೆ ಜಿಲ್ಲೆಯ 70 ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ