ಆ್ಯಪ್ನಗರ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಆಯ್ಕೆ

ಪತ್ರಕರ್ತರ ಸಂಘದ 2021-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಅಲೆವೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐಎಂಎ ಭವನದಲ್ಲಿ ಫೆ.16ರಂದು ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪಕ್ರಿಯೆ ನಡೆಸಲಾಯಿತು.

Vijaya Karnataka Web 16 Feb 2021, 5:53 pm
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2021-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಅಲೆವೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಅಜ್ಜರಕಾಡಿನ ಐಎಂಎ ಭವನದಲ್ಲಿ ಫೆ.16ರಂದು ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪಕ್ರಿಯೆ ನಡೆಸಲಾಯಿತು.
Vijaya Karnataka Web ರಾಜೇಶ್ ಶೆಟ್ಟಿ, ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ
ರಾಜೇಶ್ ಶೆಟ್ಟಿ, ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ


ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪೊಲ್ಯ, ಉಪಾಧ್ಯಕ್ಷರಾಗಿ ಆರ್.ಬಿ.ಜಗದೀಶ್, ವಿನಯ್ ಪಾಯಸ್, ಬಾಲಕೃಷ್ಣ ಪೂಜಾರಿ, ಕೋಶಾಧಿ ಕಾರಿಯಾಗಿ ಉಮೇಶ್ ಮಾರ್ಪಳ್ಳಿ, ಸಹ ಕಾರ್ಯದರ್ಶಿಯಾಗಿ ರಾಜೇಶ್ ಗಾಣಿಗ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಎರ್ಮಾಳ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮೋದ್ ಸುವರ್ಣ, ಹರಿಪ್ರಸಾದ್ ನಂದಳಿಕೆ, ಗಣೇಶ್ ಸೈಬ್ರರಕಟ್ಟೆ, ಸಂಜೀವ ಆರ್ಡಿ, ಸಂತೋಷ್ ನಾಯಕ್, ಉದಯ ಕುಮಾರ್ ತಲ್ಲೂರು, ಹರ್ಷಿಣಿ ಅವರನ್ನು ಆಯ್ಕೆ ಮಾಡಲಾಯಿತು.

ಚುನಾವಣಾ ಪ್ರಕ್ರಿಯೆಯನ್ನು ವಾರ್ತಾಧಿಕಾರಿ ಬಿ.ಮಂಜುನಾಥ್ ನಡೆಸಿ ಕೊಟ್ಟರು. ವಾರ್ತಾ ಇಲಾಖೆಯ ಶಿವಕುಮಾರ್ ಸಹಕರಿಸಿದರು. ನಿರ್ಗಮನ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮನ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ವರದಿ ವಾಚಿಸಿದರು. ನಿರ್ಗಮನ ಕೋಶಾಧಿಕಾರಿ ದಿವಾಕರ ಭಂಡಾರಿ ಲೆಕ್ಕಪತ್ರ ಮಂಡಿಸಿದರು. ರಾಕೇಶ್ ಕುಂಜೂರು ಕಾರ್ಯ ಕ್ರಮ ನಿರೂಪಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ