ಆ್ಯಪ್ನಗರ

ದೋಣಿ ಸಹಿತ ಮೀನುಗಾರರ ಪತ್ತೆಗೆ ಡಿಸಿಗೆ ಮನವಿ

ಮಲ್ಪೆ ಬಂದರಿನಿಂದ ಡಿ.13ರಂದು ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಆಳ ಸಮುದ್ರ ಯಾಂತ್ರಿಕ ಮೀನುಗಾರಿಕಾ ದೋಣಿ ಸಹಿತ ಏಳು ಮಂದಿ ಮೀನುಗಾರರು ಡಿ. 15ರಿಂದ ಕಾಣೆಯಾಗಿದ್ದು ಕೂಡಲೇ ಪತ್ತೆ ಹಚ್ಚಿಕೊಡುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದೆ.

Vijaya Karnataka 2 Jan 2019, 5:00 am
ಉಡುಪಿ: ಮಲ್ಪೆ ಬಂದರಿನಿಂದ ಡಿ.13ರಂದು ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಆಳ ಸಮುದ್ರ ಯಾಂತ್ರಿಕ ಮೀನುಗಾರಿಕಾ ದೋಣಿ ಸಹಿತ ಏಳು ಮಂದಿ ಮೀನುಗಾರರು ಡಿ. 15ರಿಂದ ಕಾಣೆಯಾಗಿದ್ದು ಕೂಡಲೇ ಪತ್ತೆ ಹಚ್ಚಿಕೊಡುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದೆ.
Vijaya Karnataka Web request dc to find boat fishermen
ದೋಣಿ ಸಹಿತ ಮೀನುಗಾರರ ಪತ್ತೆಗೆ ಡಿಸಿಗೆ ಮನವಿ


ಮೀನುಗಾರರು ಹಾಗೂ ದೋಣಿ ನಾಪತ್ತೆಯಿಂದ ಮೊಗವೀರ ಸಮಾಜವೇ ಕಂಗಾಲಾಗಿದ್ದು ಜಿಲ್ಲೆಯ ಇತಿಹಾಸದಲ್ಲೇ ಇದು ಮೊದಲ ಘಟನೆಯಾಗಿದೆ. ಮೀನುಗಾರರಲ್ಲಿ ಆತಂಕ ತಂದೊಡ್ಡಿದ್ದು ಕಾಣೆಯಾದ ಮೀನುಗಾರರ ಕುಟುಂಬ ಆಘಾತದಿಂದ ಚೇತರಿಸಿಕೊಳ್ಳದ ಸ್ಥಿತಿಯಲ್ಲಿದೆ ಎಂದು ಮನವಿಯಲ್ಲಿ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ತಿಳಿಸಿದ್ದಾರೆ.

ಹೆಜಮಾಡಿ ಬಂದರು ಕಾಮಗಾರಿ ಆರಂಭಿಸಿ ಮೀನುಗಾರರ ಬಹುಕಾಲದ ಬೇಡಿಕೆಯಾದ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು ಕೂಡಲೇ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಬಂದರಿನ ಕಾಮಗಾರಿ ಆರಂಭಿಸಲು ರಾಜ್ಯ ಸಚಿವ ಸಂಪುಟದ ಅನುಮೋದನೆಗಾಗಿ ಬೇಕಾದ ದಾಖಲೆಗಳನ್ನು ಒದಗಿಸಬೇಕು. ಶೀಘ್ರವೇ ಕೆಲಸ ಆರಂಭವಾದರೆ ಮೀನುಗಾರರ ಬಹುಕಾಲದ ಕನಸು ನನಸಾಗಲಿದೆ, ದೋಣಿಗಳ ಒತ್ತಡ ಕಡಿಮೆಯಾಗಲಿದೆ, ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ಜಯ ಸಿ. ಕೋಟ್ಯಾನ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ