ಆ್ಯಪ್ನಗರ

ಕೋಡಿ ಬೀಚ್ ಬಳಿ ಕಂಡ ನೂರಕ್ಕೂ ಅಧಿಕ ಕಡಲಾಮೆ ಮೊಟ್ಟೆ, ತೀರದಲ್ಲೇ ಹ್ಯಾಚರಿ ನಿರ್ಮಾಣ

ಕುಂದಾಪುರ ತಾಲೂಕು ಕೋಡಿ ಗ್ರಾಮದ ಲೈಟ್‌ಹೌಸ್‌ ಬಳಿ ಕಡಲತೀರದಲ್ಲಿ ಶುಕ್ರವಾರ ಬೆಳಗ್ಗೆ 100ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಸ್ಥಳೀಯರ ಕಣ್ಣಿಗೆ ಬಿದ್ದಿದ್ದು, ಇವುಗಳ ಸಂರಕ್ಷಣೆಗಾಗಿ ತೀರದಲ್ಲೇ ಹ್ಯಾಚರಿ ರೂಪಿಸಲಾಗಿದೆ.

Vijaya Karnataka Web 23 Jan 2021, 1:39 pm
ಕುಂದಾಪುರ: ಕೋಡಿ ಗ್ರಾಮದ ಲೈಟ್‌ಹೌಸ್‌ ಬಳಿ ಕಡಲತೀರದಲ್ಲಿ ಶುಕ್ರವಾರ ಬೆಳಗ್ಗೆ 100ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದು, ಇವುಗಳ ಸಂರಕ್ಷಣೆಗಾಗಿ ತೀರದಲ್ಲೇ ಹ್ಯಾಚರಿ ರೂಪಿಸಲಾಗಿದೆ.
Vijaya Karnataka Web sea turtle eggs


ಸ್ಥಳೀಯ ಬಾಬು ಮೊಗವೀರ ಮತ್ತು ಗಣಪತಿ ಖಾರ್ವಿ ಮೊಟ್ಟೆಗಳನ್ನು ಗುರುತಿಸಿದ್ದು, ಕಡಲಾಮೆ ಸಂರಕ್ಷಣೆಯಲ್ಲಿತೊಡಗಿಸಿಕೊಂಡಿರುವ ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಹಕಾರದಿಂದ ಮೊಟ್ಟೆಗಳನ್ನು ರಕ್ಷಿಸಲಾಗಿದೆ.

ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಂಯೋಜಕರಾದ ದಿನೇಶ್‌ ಸಾರಂಗ, ವೆಂಕಟೇಶ್‌ ಶೇರುಗಾರ್‌, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ನ ಭರತ್‌, ಸಂದೀಪ್‌ ಕೋಡಿ, ಉದಯ ಖಾರ್ವಿ, ಅನಿಲ್‌ ಖಾರ್ವಿ, ದಿನೇಶ್‌ ಕೋಡಿ ಅವರು ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ಎಸಿಎಫ್‌ ಲೋಹಿತ್‌, ಆರ್‌ಎಫ್‌ಒ ಪ್ರಭಾಕರ ಕುಲಾಲ್‌, ಸ್ಥಳೀಯ ಅರಣ್ಯ ಸಿಬ್ಬಂದಿ ಹಸ್ತ ಶೆಟ್ಟಿ ಮಾರ್ಗದರ್ಶನದಲ್ಲಿ ಮೊಟ್ಟೆಗಳ ಸಂರಕ್ಷಣೆ ಕಾರ‍್ಯ ನಡೆಸಲಾಗಿದೆ.

ಮೀನಿನ ಬದಲು ಬಲೆಗೆ ಬೀಳುತ್ತಿವೆ ಜೆಲ್ಲಿಫಿಶ್‌; ಮೀನುಗಾರರು ಕಂಗಾಲು!

ಕಠಿಣ ಕ್ರಮ ಎಚ್ಚರಿಕೆ: 2017ರ ಬಳಿಕ ಕೋಡಿಯಲ್ಲಿ ಪ್ರಥಮ ಬಾರಿಗೆ ಅಪರೂಪದ ಆಲಿವ್‌ ರಿಡ್ಲೇ ಜಾತಿಗೆ ಸೇರಿದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಮೊಟ್ಟೆಗಳ ಸಂರಕ್ಷಣೆ ಮತ್ತು ಬೆಳವಣಿಗೆ ಉದ್ದೇಶದಿಂದ ತೀರದಲ್ಲೇ ಹ್ಯಾಚರಿ ಮಾಡಲಾಗಿದೆ. ದಿನದ 24 ಗಂಟೆಯೂ ಹ್ಯಾಚರಿ ವಿಚಕ್ಷಣೆ ನಡೆಸಲಾಗುತ್ತದೆ. ಹ್ಯಾಚರಿ ಅಥವಾ ಮೊಟ್ಟೆಗಳಿಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ ನಡೆದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕುಂದಾಪುರ ಡಿಎಫ್‌ಒ ಆಶೀಶ್‌ ರೆಡ್ಡಿ ಹೇಳಿದರು.

ಕಡಲಾಮೆ ಜೀವಕ್ಕೆ ಮೀನು ಬಲೆಗಳೇ ಕಂಟಕ, ರಕ್ಷಣೆಗೆ ರೂಪಿಸಿದ ಯೋಜನೆಯ ಅನುಷ್ಠಾನವೇ ಇಲ್ಲ

ವಿಳಂಬವಾದರೂ ಸಂತಸ: ದಶಕಗಳಿಂದ ಕಡಲತೀರದಲ್ಲಿಕಡಲಾಮೆ ಮೊಟ್ಟೆಗಳ ಸಂರಕ್ಷಣೆ ಕಾರ‍್ಯ ನಡೆಸಿಕೊಂಡು ಬರುತ್ತಿದ್ದೇವೆ. ಸ್ವಾಭಾವಿಕವಾಗಿ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆ ಇಡುವ ಸಂಪ್ರದಾಯ ಇಟ್ಟುಕೊಂಡಿದ್ದವು. ಈ ಬಾರಿ ವಿಳಂಬವಾಗಿದ್ದರೂ ಕೋಡಿಯಲ್ಲಿನೂರಕ್ಕೂ ಹೆಚ್ಚು ಮೊಟ್ಟೆ ಇಟ್ಟಿರುವುದು ಸಂತಸ ತಂದಿದೆ. ಮೊಟ್ಟೆಯೊಡೆದು ಮರಿ ಹೊರ ಬರುವ ಕುತೂಹಲ ಹೆಚ್ಚಾಗಿದೆ. ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿಸುವ ತನಕ ಕಾವಲು ಕಾಯಲಿದ್ದೇವೆ.
-ದಿನೇಶ್‌ ಸಾರಂಗ ಎಫ್‌ಎಸ್‌ಎಲ್‌ ಇಂಡಿಯಾ ಸಂಯೋಜಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ