ಆ್ಯಪ್ನಗರ

ಕೊಲ್ಲೂರು: ಶಿಲಾಯುಗ ಕಾಲದ ಆದಿಮ ಚಿತ್ರಗಳು ಪತ್ತೆ, ಶೋಧ ಮುಂದುವರಿಕೆ

ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಸಮೀಪ, ಅವಲಕ್ಕಿ ಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ ್ಮ ಶಿಲಾಯುಗ ಕಾಲದ ಮಾನವ ಬೇಟೆಯ ಚಿತ್ರಗಳು ಪತ್ತೆಯಾಗಿವೆ.

Vijaya Karnataka 26 Feb 2019, 8:57 pm
ಕುಂದಾಪುರ : ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಸಮೀಪ, ಅವಲಕ್ಕಿ ಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ ್ಮ ಶಿಲಾಯುಗ ಕಾಲದ ಮಾನವ ಬೇಟೆಯ ಚಿತ್ರಗಳು ಪತ್ತೆಯಾಗಿವೆ.
Vijaya Karnataka Web shasan


ಹಂದಿ ಬೇಟೆ, ಹಕ್ಕಿ ಬೇಟೆ, ಕಾಡುಗೂಳಿಗಳ ಬೇಟೆ, ಜಿಂಕೆ ಬೇಟೆಯ ವಿವಿಧ ಆದಿಮ ಚಿತ್ರಗಳು ಕಂಡು ಬಂದಿವೆ. ಬೇಟೆಯ ನಾನಾ ಭಾವ-ಭಂಗಿಗಳಲ್ಲಿ ನಿಂತ ಮಾನವರ ಹಾಗೂ ಪ್ರಾಣಿಗಳ ಚಿತ್ರಗಳು ತಮ್ಮ ನೈಜತೆಯಿಂದ ಆಕರ್ಷಕವಾಗಿವೆ. ಈ ಚಿತ್ರಗಳಲ್ಲಿ ಪ್ರಧಾನವಾದ ಚಿತ್ರ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಆಕೆಯ ಚಿತ್ರವನ್ನು ಆದಿಮ ಕಾಲದ ಜನರು ಆರಾಧಿಸುತ್ತಿದ್ದರು ಎಂದು ನಂಬಲಾಗಿದೆ. ಒಟ್ಟು ನಾನಾ ರೀತಿಯ 20 ಚಿತ್ರಗಳು ಪ್ರಸ್ತುತ ಪತ್ತೆಯಾಗಿದೆ.

ಶೋಧ ಮುಂದುವರಿಯಲಿದೆ: ಕೊಲ್ಲೂರಿನ ಆವಲಕ್ಕಿಪಾರೆ ಎಂಬಲ್ಲಿ ಆದಿಮ ಚಿತ್ರಗಳ ಶೋಧ ಮುಂದುವರೆಸಲಾಗುವುದು ಎಂದು ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ. ಈ ಚಿತ್ರಗಳ ಶೋಧದ ಮೊದಲು ಕರ್ನಾಟಕದ ಕರಾವಳಿಯಲ್ಲಿ ಡಾ. ಕೆ.ಬಿ. ಶಿವತಾರಕ್‌, ಪಿ. ರಾಜೇಂದ್ರನ್‌ ಹಾಗೂ ಎಲ್‌.ಎಸ್‌.ರಾವ್‌ ರವರು ಸೂಕ್ಷ ್ಮಶಿಲಾಯುಗದ ನೆಲೆಗಳನ್ನು, ಉಪ್ಪಿನಂಗಡಿ, ಮಾಣಿ, ಕಾರ್ಕಳ, ಮಸಿಕೆರೆ ಮುಂತಾದ ಸ್ಥಳಗಳಲ್ಲಿ ಶೋಧಿಸಿದ್ದರು. ಆದರೆ, ಇದೇ ಪ್ರಥಮ ಬಾರಿ ಆ ಸಂಸ್ಕೃತಿಗೆ ಸಂಬಂಧಿಸಿದ ಆದಿಮ ಚಿತ್ರಗಳು ಕೆಂಪು ಮುರಕಲ್ಲಿನ ಮೇಲೆ ಕುಟ್ಟಿ-ಉಜ್ಜಿ ಮಾಡಿರುವುದು ಕಂಡು ಬಂದಿದೆ. ಸರಿಸುಮಾರು, ಕ್ರಿ.ಪೂ. 10.000 ದಿಂದ 3000 ವರ್ಷಗಳ ಕಾಲಾವಧಿಯನ್ನು ಸೂಕ್ಷ ್ಮ ಶಿಲಾಯುಗ ಕಾಲ ಎಂದು ಡಾ. ಅ. ಸುಂದರ ಅವರು ತರ್ಕಿಸಿದ್ದು, ಸರಿಸುಮಾರು ಅದೇ ಕಾಲದ ಚಿತ್ರಗಳೆಂದು ಅವಲಕ್ಕಿ ಪಾರೆಯ ಚಿತ್ರಗಳ ಕಾಲವನ್ನು ತತ್ಕಾಲಿಕವಾಗಿ ಭಾವಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ