ಆ್ಯಪ್ನಗರ

Karandlaje - ಭಾರತವನ್ನು ಎಲ್ಲಿ ವಿಭಜಿಸಿದ್ದೀರೋ ಅಲ್ಲೇ ಭಾರತ್ ಜೋಡೋ ಮಾಡಿ: ಕಾಂಗ್ರೆಸ್ ಗೆ ಶೋಭಾ ತಾಕೀತು

ದಶಕಗಳ ಹಿಂದೆ ಭಾರತವನ್ನು ಒಡೆದಿದ್ದು ಕಾಂಗ್ರೆಸ್. ಅಂಥವರು ಈಗ ಭಾರತ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗ ನೆಹರೂ ಅವರು, ಹಿಮಾಲಯದಲ್ಲಿ ಒಂದು ಹುಲುಕಡ್ಡಿಯೂ ಬೆಳೆಯುವುದಿಲ್ಲ ಎಂದಿದ್ದರು. ಹಾಗಾಗಿ, ಹಿಮಾಲಯದ ಕೆಲವು ಭಾಗಗಳನ್ನು ಬೇರೆ ದೇಶದವರಿಗೆ ಬಿಟ್ಟುಕೊಡಬೇಕಾಯಿತು. ಆನಂತರ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸಿಗರು ತೀನ್ ಬಿಘಾವನ್ನು ಬಿಟ್ಟುಕೊಟ್ಟರು. ಅಂಥ ಕಾಂಗ್ರೆಸ್ಸಿಗರು ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ಅವರು ಚೀನಾ, ಪಾಕಿಸ್ತಾನದ ಗಡಿ ಭಾಗದಲ್ಲಿ ಹೋಗಿ ಮಾಡಲಿ ಎಂದು ತಾಕೀತು ಮಾಡಿದರು ಶೋಭಾ ಕರಂದ್ಲಾಜೆ.

Edited byಚೇತನ್ ಓ.ಆರ್. | Vijaya Karnataka Web 30 Sep 2022, 5:52 pm
ಉಡುಪಿ: ಇವತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿಸಿದೆ. ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದರೋ ಅಲ್ಲಿ ಭಾರತ್ ಜೋಡೋ ಮಾಡಿ ಎಂದು ಟೀಕೆ ಮಾಡಿದ್ದಾರೆ.
Vijaya Karnataka Web shobha karandlaje on Bharat Jodo
ಕೇಂದ್ರ ಸಚಿವೆ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)


ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ, 'ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ನೆಹರು ಹೇಳಿದ್ದರು. ಹಾಗಾಗಿ ಹಿಮಾಲಯವನ್ನು ಬಿಟ್ಟುಕೊಡಲಾಯಿತು. ತೀನ್ ಭಿಗಾದಲ್ಲಿ ಭಾರತ ಜೋಡೋ ಮಾಡಿ. ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡೋ ಮಾಡುವ ಅಗತ್ಯವಿಲ್ಲ' ಎಂದು ವ್ಯಂಗ್ಯವಾಡಿದರು.

ಪಾಕಿಸ್ತಾನ , ಚೀನಾ, ಬಾಂಗ್ಲಾ ಗಡಿಯಲ್ಲಿ ನಿಮ್ಮ ಯಾತ್ರೆ ಮಾಡಿ ಎಂದ ಸಚಿವೆ, ಪಾಕಿಸ್ತಾನ ಜಿಂದಾಬಾದ್ ಅಂದವರ ಜೊತೆ ಯಾತ್ರೆ ಮಾಡುತ್ತಾ ಇದ್ದೀರಿ. ಭಾರತ್ ಜೋಡೋ ಮಾಡ್ತಾ ಇದ್ದೀರಾ ? ಭಾರತ್ ತೋಡೋ ಮಾಡ್ತಾ ಇದ್ದೀರಾ? ಸ್ಪಷ್ಟಪಡಿಸಿ ಎಂದು ಹೇಳಿದ್ದಾರೆ.

‘ಶೋಭಕ್ಕ ಕಂಡರೆ ಸೆಲ್ಫಿ ತೆಗೆದು ಕಳುಹಿಸುವ 5 ಮಂದಿಗೆ ತಲಾ 5 ಸಾವಿರ ಬಹುಮಾನ!’ ಕಾಂಗ್ರೆಸ್‌ನಿಂದ ಘೋಷಣೆ
ಬಿಜೆಪಿಯಲ್ಲಿ ನೋಡಿ ಕಲಿಯಲಿ: ಪ್ರತಾಪ್ ಸಿಂಹ
ಅತ್ತ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಕೂಡ, ಕಾಂಗ್ರೆಸ್ ಭಾರತ್ ಜೋಡೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತ ಜೋಡಿಸುವುದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಈ ಬಗ್ಗೆ ಮಾತಾಡಿದ ಅವರು, ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ಮೋದಿ ಕಾಲದಲ್ಲಿ ದೇಶದಲ್ಲಿ ರಸ್ತೆ, ವಿಮಾನ, ರೈಲು ಸಂಪರ್ಕ ಆಗ್ತಿದೆ. ಭಾರತವನ್ನು ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ‘ಭಾರತ ತೋಡೋ’ ತಂಡದ ಸಹವಾಸವನ್ನು ಬಿಡಲಿ ಎಂದರು.

‘ದಸರಾ ಹೊಸ್ತಿಲಲ್ಲಿ ರಾಹುಲ್ ಗಾಂಧಿ ಮೈಸೂರಿಗೆ ಬರುತ್ತಿದ್ದು, ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು. ಹಾಗೆಯೇ ಬರುವಾಗ ಮೈಸೂರು ಏರ್ಪೋರ್ಟ್ ನೋಡಿಕೊಂಡು ಬನ್ನಿ. ಮೈಸೂರು - ಬೆಂಗಳೂರು ಹೆದ್ದಾರಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮೋದಿ ಸರ್ಕಾರ ಹೇಗೆ ಭಾರತವನ್ನು ಜೋಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ ಎಂದರು.

ಕ್ಷೇತ್ರದ ಸಮಸ್ಯೆ ಬಗೆಹರಿಸದೆ ಕಾಣೆಯಾಗಿರೋದಾಗಿ ಶೋಭಾ ಕರಂದ್ಲಾಜೆ ಬಗ್ಗೆ ದೂರು ದಾಖಲಿಸಲು ನಿರ್ಧಾರ!
‘ಐದು ವರ್ಷ ನಂತರ ಮತ್ತೊಂದು ಯಾತ್ರೆ ಮಾಡಿ’

ಮುಂದಿನ ಐದು ವರ್ಷಗಳ ಬಳಿಕ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ದೆಹಲಿ ಅಥವಾ ಇಟಲಿಯಿಂದ ನೇರ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು. ಅಂಥ ವ್ಯವಸ್ಥೆಯು ಸಾಧ್ಯವಾಗಲಿದೆ. ಇನ್ನು ಕಾಂಗ್ರೆಸ್ ಗೆ 25 ವರ್ಷ ಭವಿಷ್ಯವಿಲ್ಲ, ಅಲ್ಲಿವರೆಗೆ ಬಿಜೆಪಿ ಸರ್ಕಾರ ಇರುತ್ತೆ. ಮತ ಪ್ರಚಾರಕ ಪಾದ್ರಿಯನ್ನು ಭೇಟಿ ಮಾಡಿ ಆರಂಭವಾದ ಪಾದಯಾತ್ರೆ ಇದು. ಜೀಸಸ್ ಒಬ್ಬನೇ ದೇವರು ಎನ್ನುವವನನ್ನ ನೀವು ಕೇರಳದಲ್ಲಿ ಭೇಟಿ ಮಾಡಿದ್ದು, ಇದರಿಂದ ನಿಮ್ಮ ಉದ್ದೇಶ ಏನು ಎಂಬುದು ಗೊತ್ತಾಗಿದೆ. ಪಾದ್ರಿಯನ್ನು ಬದಿಗಿಟ್ಟು ಚಾಮುಂಡಿಗೆ ನಮಸ್ಕರಿಸಿ‌, ನಾಡಹಬ್ಬ ದಸರಾದಲ್ಲಿ ಭಾಗಿಯಾಗಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ