ಆ್ಯಪ್ನಗರ

ದಾಸ ಸಾಹಿತ್ಯದಿಂದ ಮಾನಸಿಕ ಸಂಸ್ಕಾರದ ಜಾಗೃತಿ: ಶ್ರೀವಿದ್ಯಾಪ್ರಸನ್ನ

ವಾಕ್‌ ಶುದ್ಧಿ, ಮಾನಸಿಕ ಸಂಸ್ಕಾರದ ಜಾಗೃತಿ, ಸಾತ್ವಿಕತೆಗೆ ದಾಸ ಸಾಹಿತ್ಯ ಪೂರಕ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

Vijaya Karnataka 6 Feb 2019, 5:00 am
ಉಡುಪಿ: ವಾಕ್‌ ಶುದ್ಧಿ, ಮಾನಸಿಕ ಸಂಸ್ಕಾರದ ಜಾಗೃತಿ, ಸಾತ್ವಿಕತೆಗೆ ದಾಸ ಸಾಹಿತ್ಯ ಪೂರಕ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web sri madhwa purandarotsava
ದಾಸ ಸಾಹಿತ್ಯದಿಂದ ಮಾನಸಿಕ ಸಂಸ್ಕಾರದ ಜಾಗೃತಿ: ಶ್ರೀವಿದ್ಯಾಪ್ರಸನ್ನ


ಶ್ರೀ ಮಧ್ವ ಪುರಂದರೋತ್ಸವ ಅಂಗವಾಗಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಆಶೀರ್ವಚನ ನೀಡಿದರು.

ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡದಿದ್ದರೆ ಕೆಟ್ಟ ಪರಂಪರೆ, ದುರಂತ ಎದುರಾದೀತು. ಜನ್ಮದಲ್ಲಿ ಬ್ರಾಹ್ಮಣರಾದರೂ ಸವಕಲು ನಾಣ್ಯವಾಗದೆ ಬದುಕಿನ ಮೌಲ್ಯ ವೃದ್ಧಿ ಮಾಡಿಕೊಳ್ಳಬೇಕು. ವೃದ್ಧ ಬ್ರಾಹ್ಮಣನಿಗೆ ಸವಕಲು ನಾಣ್ಯ ಕೊಟ್ಟ ಪುರಂದರದಾಸರು ಸಮಾಜಕ್ಕೆ ನೀಡಿದ ದಾಸ ಸಾಹಿತ್ಯ ಇಂದಿಗೂ, ಎಂದೆಂದಿಗೂ ಮಹತ್ವ, ಮೌಲ್ಯ ಹೊಂದಿದೆ. ವೇದ, ಉಪನಿಷತ್‌ ಸೂರ್ಯನಾದರೆ ಪುರಂದರ ದಾಸರಲ್ಲಿ ಸೂರ್ಯ, ಚಂದ್ರರಿದ್ದಾರೆ. ವ್ಯಾಸ, ದಾಸ ಸಾಹಿತ್ಯದ ಸಮ್ಮಿಲನವಾಗಿದೆ ಎಂದರು.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶಾಸ್ತ್ರಗಳ ಸಾರವನ್ನು ಜೇನಿನಂತೆ ಸಮಾಜಕ್ಕೆ ನೀಡಿದ ಮಧ್ವರ ಸರ್ವಮೂಲ ಗ್ರಂಥ ಸರ್ವರೋಗ ಪರಿಹಾರಕ. ಶಾಸ್ತ್ರದ ದರ್ಪಣವೇ ದಾಸ ಸಾಹಿತ್ಯ. ವೇದಗಳ ವ್ಯಾಖ್ಯಾನ ರೂಪ. ಭಗವಂತನದ್ದು ಜ್ಞಾನ, ಆನಂದಮಯ ಪಾದ ಎನ್ನುವ ಅನುಸಂಧಾನವನ್ನು ನಾವು ಮಾಡಬೇಕು. ಇನ್ನೂ ಬೇಕೆನ್ನುವ ದುರಾಸೆಯ ಲಂಕೆಯನ್ನು ಸುಡಬೇಕು ಎಂದು ಹೇಳಿದರು.

ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ