ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಉಡುಪಿ ವಲಯದಲ್ಲಿ 3,797 ವಿದ್ಯಾರ್ಥಿಗಳು ಹಾಜರ್‌

ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯಾದ್ಯಂತ ಗುರುವಾರ ಆರಂಭಗೊಂಡಿದ್ದು, ಉಡುಪಿ ವಲಯದಲ್ಲಿ ಒಟ್ಟು 15 ಕೇಂದ್ರಗಳಲ್ಲಿ ಗುರುವಾರ ಪರೀಕ್ಷೆ ನಡೆಯಿತು.

Vijaya Karnataka 22 Mar 2019, 5:00 am
ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯಾದ್ಯಂತ ಗುರುವಾರ ಆರಂಭಗೊಂಡಿದ್ದು, ಉಡುಪಿ ವಲಯದಲ್ಲಿ ಒಟ್ಟು 15 ಕೇಂದ್ರಗಳಲ್ಲಿ ಗುರುವಾರ ಪರೀಕ್ಷೆ ನಡೆಯಿತು.
Vijaya Karnataka Web sslc exam
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಉಡುಪಿ ವಲಯದಲ್ಲಿ 3,797 ವಿದ್ಯಾರ್ಥಿಗಳು ಹಾಜರ್‌


ಪ್ರಥಮ ಭಾಷೆಯಾದ ಕನ್ನಡ, ಹಿಂದಿ, ಸಂಸ್ಕೃತ, ಉರ್ದು ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಬರೆದರು. ಉಡುಪಿ ವಲಯದಲ್ಲಿ 3,797 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 71 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಖಾಸಗಿಯಾಗಿ ಒಟ್ಟು 181 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ.

ಉಡುಪಿ ನಗರ ವಲಯದ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ 240, ಸೈಂಟ್‌ ಸಿಸಿಲಿ ಪ್ರೌಢಶಾಲೆಯಲ್ಲಿ 191, ಸರಕಾರಿ ಪ.ಪೂ. ಕಾಲೇಜಿನಲ್ಲಿ (ಬೋರ್ಡ್‌ ಹೈಸ್ಕೂಲ್‌) 205, ಮಲ್ಪೆ ಸರಕಾರಿ ಪ.ಪೂ. ಕಾಲೇಜಿನಲ್ಲಿ 207, ಕಡಿಯಾಳಿ ಕಮಲಾ ಬಾೖ ಪ್ರೌಢಶಾಲೆಯಲ್ಲಿ 249, ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ 330, ಉಡುಪಿ ಕ್ರಿಶ್ಚಿಯನ್‌ ಪ್ರೌಢಶಾಲೆಯಲ್ಲಿ 341 ಮಂದಿ ಪರೀಕ್ಷೆ ಬರೆದಿದ್ದಾರೆ. ಮಾ.25ರಂದು ಗಣಿತ ಪರೀಕ್ಷೆ ನಡೆಯಲಿದೆ.

ಸಿಸಿ ಟಿವಿ ಕಣ್ಗಾವಲು: ಉಡುಪಿ ವಲಯದಲ್ಲಿ ನಡೆದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟವಿ ಅಳವಡಿಸಲಾಗಿತ್ತು. ಜತೆಗೆ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಉತ್ತರ ಪತ್ರಿಕೆಯನ್ನು ಉಡುಪಿ ಕ್ರಿಶ್ಚಿಯನ್‌ ಪ್ರೌಢಶಾಲೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಪರೀಕ್ಷಾ ನಡೆಯುವ ಶಾಲೆಗಳ ಸುತ್ತಮುತ್ತಲಿನ 200 ಮೀ. ಪರಿಸರದಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ 12 ವಿಶೇಷಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಮಕ್ಕಳನ್ನು ಕರೆದುಕೊಂಡು ಬಂದ ಹೆತ್ತವರು, ಪರೀಕ್ಷೆ ಮುಗಿಯುವವರೆಗೂ ಶಾಲೆಯಲ್ಲಿಯೇ ಕುಳಿತು ವಾಪಸ್‌ ಕರೆದುಕೊಂಡು ಹೋಗಿದ್ದಾರೆ. ಅಶ್ವತ್‌ ಪರ ಪ್ರಥಮ ಪಿಯುಸಿಯ ವಿಜಯ ಪರೀಕ್ಷೆ ಬರೆದಿದ್ದಾರೆ. ವಯಸ್ಕ ಮಹಿಳೆಯರು ಹಾಗೂ ಪುರುಷರು ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ.

ಉಡುಪಿ ವಲಯದಲ್ಲಿ ಪ್ರಥಮ ಭಾಷಾ ಪÜರೀಕ್ಷೆ ಯಾವುದೇ ಗೊಂದಲ, ಸಮಸ್ಯೆಗಳಿಲ್ಲದೆ ನಡೆದಿದೆ ಎಂದು ಉಡುಪಿ ಬಿಇಒ ಮಂಜುಳಾ ಕೆ. ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಕನ್ನಡ ಪ್ರಶ್ನಾಪತ್ರಿಕೆ ಸ್ವಲ್ಪ ಕಠಿಣವಾಗಿತ್ತು. ಒಟ್ಟಾರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದಿದ್ದೇನೆ. ಧಿ-ಭಾಗ್ಯಶ್ರೀ, ಬೋರ್ಡ್‌ ಹೈಸ್ಕೂಲ್‌ ಉಡುಪಿ

ಕನ್ನಡ ಗ್ರಾಮರ್‌ ಕಷ್ಟ ಎನಿಸಿತು. 2-3 ವಾಕ್ಯಗಳಲ್ಲಿ ಉತ್ತರಿಸುವ ಪ್ರಶ್ನೆಗಳು ಸ್ವಲ್ಪ ಕಠಿಣವಾಗಿದ್ದವು. ನನ್ನ ಬುದ್ಧಿಮತ್ತೆಗೆ ತಕ್ಕಂತೆ ಉತ್ತರ ಬರೆದಿದ್ದೇನೆ. ಪಾಸ್‌ ಆಗುವ ಧೈರ್ಯವಿದೆ. -ಸಾಹಿಲ್‌, ವಿದ್ಯಾ ಟ್ಯುಟೋರಿಯಲ್‌ ಕಾಲೇಜು, ಉಡುಪಿ

ಮನೆಯ ಸಮಸ್ಯೆಯಿಂದ 7ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿ, ಸಂಸ್ಥೆಯೊಂದರಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಪೂರ್ತಿ ಓದಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ ನನಗೆ ಪರೀಕ್ಷೆ ಕಷ್ಟ ಎಂದೆನಿಸಿತು. ಪಾಸ್‌ ಆಗುವ ಧೈರ್ಯವಿದೆ. -ಸಂತೋಷ್‌ ನೇಜಾರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ