ಆ್ಯಪ್ನಗರ

ಕೋಟದಲ್ಲಿ ಸುಕೃತೀಂದ್ರ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವ

ಗುರುಗಳು ಜ್ಞಾನದ ಜತೆಯಲ್ಲಿ ಜೀವನವನ್ನು ಸುಖ ಸಮೃದ್ಧಿಯಿಂದ ಮುನ್ನಡೆಸಲು ನಮಗೆ ಅನುಗ್ರಹಿಸುತ್ತಾರೆ. ದೇವರ ನಿಜ ದರ್ಶನ ಗುರುಗಳ ಮೂಲಕ ಸಾಧ್ಯ ಎಂದು ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 22 Jul 2019, 5:00 am
ಕೋಟ: ಗುರುಗಳು ಜ್ಞಾನದ ಜತೆಯಲ್ಲಿ ಜೀವನವನ್ನು ಸುಖ ಸಮೃದ್ಧಿಯಿಂದ ಮುನ್ನಡೆಸಲು ನಮಗೆ ಅನುಗ್ರಹಿಸುತ್ತಾರೆ. ದೇವರ ನಿಜ ದರ್ಶನ ಗುರುಗಳ ಮೂಲಕ ಸಾಧ್ಯ ಎಂದು ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web UDP-21cb3


ಕೋಟ ಕಾಶೀ ಮಠದ ಶ್ರೀ ಮುರಳೀಧರಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆದ ಶ್ರೀ ಕಾಶೀ ಮಠದ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆರಾಧನಾ ಮಹೋತ್ಸವದ ಗುರುಗುಣಗಾನದಲ್ಲಿ ಆಶೀರ್ವದಿಸಿದರು.

ಈ ಸಂದರ್ಭ ಯುವಕ ಸಮಾಜದವರಿಂದ ಗುರುವರ್ಯರಿಗೆ ಪಾದಪೂಜೆ ನಡೆಯಿತು. ವೇದಮೂರ್ತಿ ದೇವದತ್ತ ಭಟ್‌, ವೇದಮೂರ್ತಿ ಸುಧಾಕರ ಭಟ್‌, ವೇದಮೂರ್ತಿ ಶ್ರೀಕಾಂತ್‌ ಭಟ್‌ ಸುಕೃತೀಂದ್ರ ತೀರ್ಥರ ಮಹತ್ವವನ್ನು ದೃಷ್ಟಾಂತದ ಮೂಲಕ ಹೇಳಿದರು. ಅಲ್ಲದೇ ನಮ್ಮೆಲ್ಲರ ಪ್ರಾತ ಸ್ಮರಣೀಯ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಶಿಷ್ಯರಾಗಿ ಸ್ವೀಕರಿಸಿ ನಮ್ಮೆಲ್ಲರನ್ನೂ ಅನುಗ್ರಹಿಸಿದ ಮಾಹಾನ್‌ ಚೇತನ ಎಂದರು.

ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ರಮೇಶ ಪಡಿಯಾರ್‌, ಅಧ್ಯಕ್ಷ ರಾಧಾಕೃಷ್ಣ ನಾಯಕ್‌, ದೇವಳದ ಅರ್ಚಕರಾದ ಕಪಿಲದಾಸ ಭಟ್‌, ಅರವಿಂದ ಭಟ್‌, ಕಾರ್ಯದರ್ಶಿ ವೇದವ್ಯಾಸ ಪೈ, ಯುವಕ ಸಮಾಜದ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ