ಆ್ಯಪ್ನಗರ

ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಇಂಗ್ಲಿಷ್‌ ಶಿಕ್ಷ ಣಕ್ಕೆ ಒತ್ತು ನೀಡಬೇಕು: ಕೋಟ

ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷ ಣಕ್ಕೆ ಒತ್ತು ನೀಡಬೇಕು. ಈ ಬಗ್ಗೆ ಸದನದಲ್ಲೇ ಮುಖ್ಯಮಂತ್ರಿಗಳ ಗಮನಸೆಳೆದಿದ್ದೇನೆ. ಅಗತ್ಯ ಸೌಕರ‍್ಯಗಳನ್ನು ನೀಡಿದರೆ ಸರಕಾರಿ ಶಾಲೆಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Vijaya Karnataka 7 Jan 2019, 5:00 am
ಬ್ರಹ್ಮಾವರ: ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷ ಣಕ್ಕೆ ಒತ್ತು ನೀಡಬೇಕು. ಈ ಬಗ್ಗೆ ಸದನದಲ್ಲೇ ಮುಖ್ಯಮಂತ್ರಿಗಳ ಗಮನಸೆಳೆದಿದ್ದೇನೆ. ಅಗತ್ಯ ಸೌಕರ‍್ಯಗಳನ್ನು ನೀಡಿದರೆ ಸರಕಾರಿ ಶಾಲೆಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Vijaya Karnataka Web 3


ಅವರು ಜ.5ರಂದು ನಡೆದ ಸಾೖಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು,

ನಿವೃತ್ತ ಯೋಧ ವಿಜಯ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೀನ (ಜೋಜ ಪಾಣ) ನಿವೃತ್ತ ಶಿಕ್ಷ ಕಿ ಭವಾನಿ, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ಶ್ರೀನಿವಾಸ್‌, ನಿಖಿತಾ ಅವರನ್ನು ಸನ್ಮಾನಿಸಲಾಯಿತು.

ದಾನಿಗಳಾದ ಅಶೋಕ್‌ ಕಿಣಿ ಅವರ ಸಹಕಾರದಲ್ಲಿ ನಿರ್ಮಿಸಿದ ಶಾಲೆ ಊಟದ ಸಭಾಂಗಣವನ್ನು ಉದ್ಯಮಿ ಎಂ. ಉಪೇಂದ್ರ ಕಿಣಿ ಉದ್ಘಾಟಿಸಿದರು. ಗರಿಕೆಮಠ ಅರ್ಕಗಣಪತಿ ಕ್ಷೇತ್ರದ ಮುಖ್ಯಸ್ಥ ವೇ.ಮೂ.ರಾಮಪ್ರಸಾದ್‌ ಅಡಿಗ ಆಶೀವರ್ಚನ ನೀಡಿದರು. ಜಿ.ಪಂ. ಸದಸ್ಯ ಪ್ರತಾಪ್‌ ಹೆಗ್ಡೆ ಮಾರಾಳಿ ಶುಭ ಹಾರೈಸಿದರು.

ಬೆಳಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಕೀಲ ಜಯಚಂದ್ರ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಎಸ್‌.ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ್‌ ಆಚಾರ್ಯ ಧ್ವಜಾರೋಹಣ ಮಾಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್‌ ಪ್ರಭು ಸಾೖಬ್ರಕಟ್ಟೆ, ತಾ. ಪಂ. ಸದಸ್ಯ ಅರುಣ್‌ ನಾಯ್ಕ್‌, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ಶಿರಿಯಾರ ಗ್ರಾ.ಪಂ. ಅಧ್ಯಕ್ಷೆ ವಿಶಾಲ, ಶಿಕ್ಷ ಣ ಸಂಯೋಜಕ ರಾಘವ ಶೆಟ್ಟಿ, ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಉಡುಪಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ನಿರಂಜನ್‌ ಹೆಗ್ಡೆ ಅಲ್ತಾರು, ಶಿರಿಯಾರ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್‌ ಬಲ್ಲಾಳ್‌, ಉದ್ಯಮಿ ಸಂಕಯ್ಯ ಶೆಟ್ಟಿ, ಉದ್ಯಮಿ ಬೆರ್ಮಯ್ಯ, ವಕೀಲರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ರಮಾನಂದ ಆಚಾರ‍್ಯ, ರವೀಂದ್ರನಾಥ ಕಿಣಿ ಎಸ್‌.ಡಿ.ಎಂ.ಸಿ.ಅಧ್ಯಕ್ಷ ಭಾಸ್ಕರ್‌ ಆಚಾರ‍್ಯ, ವಿದ್ಯಾರ್ಥಿ ನಾಯಕ ಪ್ರವೀಣ್‌, ಶಾಲೆಯ ಮುಖ್ಯ ಶಿಕ್ಷ ಕ ಸತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ದೈ.ಶಿ.ಶಿಕ್ಷ ಕ ಗಜೇಂದ್ರ ಶೆಟ್ಟಿ ಸ್ವಾಗತಿಸಿದರು. ಶಿಕ್ಷ ಕ ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ