ಆ್ಯಪ್ನಗರ

ಆಲೂರಿನಲ್ಲಿ ಬಲೆಗೆ ಬಿದ್ದ ಚಿರತೆ

ಆಲೂರು ಗ್ರಾಮದ ಹುಯ್ಯಾಣ ಎಂಬಲ್ಲಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ನಡೆಸಿದ ಕಾರಾರ‍ಯಚರಣೆಯಲ್ಲಿ ಬೃಹತ್‌ ಗಾತ್ರದ ಗಂಡು ಚಿರತೆ ಬಲೆಗೆ ಬಿದ್ದಿದೆ.

Vijaya Karnataka 22 Feb 2019, 5:00 am
ಕುಂದಾಪುರ: ಆಲೂರು ಗ್ರಾಮದ ಹುಯ್ಯಾಣ ಎಂಬಲ್ಲಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ನಡೆಸಿದ ಕಾರಾರ‍ಯಚರಣೆಯಲ್ಲಿ ಬೃಹತ್‌ ಗಾತ್ರದ ಗಂಡು ಚಿರತೆ ಬಲೆಗೆ ಬಿದ್ದಿದೆ.
Vijaya Karnataka Web 5555


ಈ ಭಾಗದಲ್ಲಿ ಕೆಲವು ದಿನಗಳಿಂದ ಚಿರತೆ ಕಾಟವಿದ್ದು, ಹುಯ್ಯಾಣದ ಪೊದೆಯೊಂದರಲ್ಲಿ ಅವಿತುಕೊಂಡಿರುತ್ತಿತ್ತು. ಗುರುವಾರ ಪೊದೆ ಸಮೀಪದ ತಂತಿ ಬೇಲಿಗೆ ಸಿಲುಕಿ ಆರ್ಭಟಿಸುತ್ತಿರುವುದನ್ನು ಕಂಡು ಸ್ಥಳೀಯರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಮತ್ತು ಸ್ಥಳೀಯರು ನಡೆಸಿದ ಕಾರಾರ‍ಯಚರಣೆಯಲ್ಲಿ ಚಿರತೆ ಬಲೆಗೆ ಬಿದ್ದಿದೆ. ತಂತಿ ಬೇಲಿಗೆ ಹೊಂದಿಕೊಂಡು ಸುತ್ತಲೂ ಬಲೆ ಹಾಕಿ ತಂತಿ ಅಗಲಿಸಿ ಚಿರತೆ ಹೊರಬರಲು ಅನುವು ಮಾಡಿಕೊಟ್ಟ ಅಧಿಕಾರಿಗಳು ಅದರ ಮೇಲೆ ಬಲೆ ಬೀಸಿ ಒಟ್ಟಾಗಿ ಮುಗಿಬಿದ್ದು ಬಂಧಿಯಾಗುವಂತೆ ಮಾಡಿದ್ದಾರೆ.

ಅಂದಾಜು 9ರ ಹರೆಯದ ಗಂಡು ಚಿರತೆ ಬೃಹತ್‌ ಗಾತ್ರದಾಗಿದ್ದು, ಆರ್ಭಟಕ್ಕೆ ಪರಿಸರ ತಲ್ಲಣಗೊಂಡಿತ್ತು. ಬಲೆಗೆ ಬಿದ್ದ ಚಿರತೆ ಸುರಕ್ಷಿತಾರಣ್ಯಕ್ಕೆ ರವಾನಿಸಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಡಿಆರ್‌ಎಫ್‌ಒಗಳಾದ ಉದಯ, ದಿಲೀಪ್‌, ಹೇಮಾ, ಸಿಬ್ಬಂದಿ ಉದಯ, ಮಂಜುನಾಥ್‌, ಬಸವರಾಜು, ಶಿವು, ಹರಿಪ್ರಸಾದ್‌, ಕೊಲ್ಲೂರು ವನ್ಯಜೀವಿ ವಲಯ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ