ಆ್ಯಪ್ನಗರ

ಗಂಡಸು ಸಂಸದರ ಕೈಯಲ್ಲಿ ಆಗದ ಕೆಲಸ ನಾನು ಮಾಡಿದೆ: ಸಂಸದೆ ಶೋಭಾ ಕರಂದ್ಲಾಜೆ

ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಹುಟ್ಟಿಕೊಂಡಿರುವ ಶೋಭಾ ಗೋ ಬ್ಯಾಕ್ ಅಭಿಯಾನಕ್ಕೆ ಸಂಬಂಧಿಸಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದರು.

Vijaya Karnataka Web 24 Feb 2019, 5:47 pm
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾವ ಗಂಡಸು ಸಂಸದರ ಕೈಯಲ್ಲಿ ಆಗದ ಕೆಲಸವನ್ನು ನಾನು 5 ವರ್ಷದಲ್ಲಿ ಮಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
Vijaya Karnataka Web ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ


ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಹುಟ್ಟಿಕೊಂಡಿರುವ ಶೋಭಾ ಗೋ ಬ್ಯಾಕ್ ಅಭಿಯಾನಕ್ಕೆ ಸಂಬಂಧಿಸಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದರು.

ನಾನು ಹೆದರುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧ ಧ್ವನಿ ಎತ್ತಿದವರ ಕೊಡುಗೆ ಬಿಜೆಪಿಗೆ ಏನಿದೆ? ಕ್ಷೇತ್ರಕ್ಕೆ ನಾನು ಕೊಟ್ಟ ಕೊಡುಗೆ ಯಾವ ಸಂಸದರಿಂದಲೂ ಬಂದಿಲ್ಲ. ಇದು ನನ್ನ ಚಾಲೆಂಜ್ ಎಂದು ಶೋಭಾ ಕರಂದ್ಲಾಜೆ ಸವಾಲೆಸೆದರು.

ಉಡುಪಿಗೆ ಪಾಸ್‌ಪೋರ್ಟ್ ಕಚೇರಿ ತಂದಿದ್ದೇನೆ. ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರಿನಲ್ಲಿದೆ. 2 ಕಡೆಗಳಲ್ಲಿ ಕೇಂದ್ರೀಯ ವಿದ್ಯಾಲಯ ತಂದಿದ್ದೇವೆ. ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ, 550 ಕೋಟಿ ರೂ. ಸಿಆರ್‍ಎಫ್ ಫಂಡ್ ತಂದಿದ್ದೇನೆ. ಎಲ್ಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ ಎಂದು ಸಂಸದರು ತಿಳಿಸಿದರು.

ಕಳೆದ 5 ವರ್ಷದಲ್ಲಿ ಆಗಿರುವ ಬೆಳವಣಿಗೆ ಕಡೆಗೆ ಗಮನ ಹರಿಸಿ ನನ್ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿ ಎಂದು ಅವರು ಕಿಡಿಕಾರಿದರು.

ನನಗೆ ಹಣಬಲ, ಜಾತಿ ಬಲ ಇಲ್ಲದೆ ಇರಬಹುದು. ನನಗೆ ಬಾಹುಬಲ ಇಲ್ಲ, ಬೆಂಬಲ ಸೂಚಿಸುವವರಿಲ್ಲದಿರಬಹುದು. ಆದರೆ ಕೇಂದ್ರದ ಎಲ್ಲಾ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಎಂಪಿ ಟಿಕೆಟ್ ಆಕ್ಷಾಂಕಿಯಾಗಿರುವ ಯಾರೋ ಒಬ್ಬರೂ ನನ್ನನ್ನು ಅವಮಾನಿಸುತ್ತಿದ್ದಾರೆ. 15, 20 ಹುಡುಗರ ಗುಂಪು ಕಟ್ಟಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಸಂಸದರಾದ ಶೋಭಾ ಕರಂದ್ಲಾಜೆ ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ