ಆ್ಯಪ್ನಗರ

ಪುತ್ತಿಗೆ ಶ್ರೀಗಳಿಂದ ನಾಳೆ ಹಿರಿಯಡ್ಕದಲ್ಲಿ ಶಿಷ್ಯ ಸ್ವೀಕಾರ

ದ್ವೈತ ಮತ ಸ್ಥಾಪಕ, ದ್ವಾರಕೆಯಿಂದ ಬಂದ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಅಷ್ಟ ಬಾಲ ಯತಿಗಳಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀಕೃಷ್ಣನ ಪೂಜೆಗೆ ಎರಡು ತಿಂಗಳ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತಂದಿದ್ದು ಪುತ್ತಿಗೆ ಮಠಕ್ಕೆ ಶ್ರೀ ಉಪೇಂದ್ರತೀಥರು ಮೂಲ ಯತಿಯಾಗಿದ್ದಾರೆ.

Vijaya Karnataka Web 21 Apr 2019, 4:16 pm
ಉಡುಪಿ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಏ. 22ರಂದು ಶಿಷ್ಯ ಸ್ವೀಕಾರ ಮಾಡಲಿದ್ದಾರೆ.
Vijaya Karnataka Web Putthige Sri Shishya Sweekar

ಪ್ರಶಾಂತ ಆಚಾರ್ಯ ಸನ್ಯಾಸ ಸ್ವೀಕಾರದೊಂದಿಗೆ ಉಡುಪಿ ಪುತ್ತಿಗೆ ಮಠದ ಉತ್ತರಾಧಿಕಾರಿಯಾಗಲಿದ್ದು ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ಬೆಳಗ್ಗೆ 11.45ಕ್ಕೆ ಧಾರ್ಮಿಕ ಪ್ರಕ್ರಿಯೆ ಸರಳವಾಗಿ ನಡೆಯಲಿದೆ.

ದ್ವೈತ ಮತ ಸ್ಥಾಪಕ, ದ್ವಾರಕೆಯಿಂದ ಬಂದ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಅಷ್ಟ ಬಾಲ ಯತಿಗಳಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀಕೃಷ್ಣನ ಪೂಜೆಗೆ ಎರಡು ತಿಂಗಳ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತಂದಿದ್ದು ಪುತ್ತಿಗೆ ಮಠಕ್ಕೆ ಶ್ರೀ ಉಪೇಂದ್ರತೀಥರು ಮೂಲ ಯತಿಯಾಗಿದ್ದಾರೆ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠದ ಪರಂಪರೆಯಲ್ಲಿ 30ನೇ ಯತಿಯಾಗಿದ್ದು 12ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ವಿಶ್ವದಾದ್ಯಂತ ಮಧ್ವ ಹಿಂದೂ ತತ್ವ ಪ್ರಸಾರದಲ್ಲಿ ತೊಡಗಿ ಏ. 22ಕ್ಕೆ 45 ಸಂವತ್ಸರ ಪೂರೈಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ