ಆ್ಯಪ್ನಗರ

ಶಿರಸಿ: 23ರಂದು ವಿದ್ಯಾಪೋಷಕ್‌ ನಿಧಿ, ವಿದ್ಯಾರ್ಥಿವೇತನ ವಿತರಣೆ

ಜಿ.ಎಸ್‌.ಬಿ. ಸಮಾಜ ಹಿತರಕ್ಷ ಣಾ ವೇದಿಕೆ ಉಡುಪಿ ಜಿಲ್ಲೆ ಹಾಗೂ ಶಿರಸಿ ಜಿ.ಎಸ್‌.ಬಿ. ಸೇವಾವಾಹಿನಿ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರ್ಹ ಜಿ.ಎಸ್‌.ಬಿ. ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್‌ ನಿಧಿ, ವಿದ್ಯಾರ್ಥಿವೇತನ ವಿತರಣೆ, ಶೈಕ್ಷ ಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಶಿರಸಿಯ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಜೂನ್‌. 23ರಂದು ನಡೆಯಲಿದೆ.

Vijaya Karnataka 20 Jun 2019, 5:00 am
ಕಾರ್ಕಳ: ಜಿ.ಎಸ್‌.ಬಿ. ಸಮಾಜ ಹಿತರಕ್ಷ ಣಾ ವೇದಿಕೆ ಉಡುಪಿ ಜಿಲ್ಲೆ ಹಾಗೂ ಶಿರಸಿ ಜಿ.ಎಸ್‌.ಬಿ. ಸೇವಾವಾಹಿನಿ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರ್ಹ ಜಿ.ಎಸ್‌.ಬಿ. ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್‌ ನಿಧಿ, ವಿದ್ಯಾರ್ಥಿವೇತನ ವಿತರಣೆ, ಶೈಕ್ಷ ಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಶಿರಸಿಯ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಜೂನ್‌. 23ರಂದು ನಡೆಯಲಿದೆ.
Vijaya Karnataka Web news/udupi/vidyaposhak
ಶಿರಸಿ: 23ರಂದು ವಿದ್ಯಾಪೋಷಕ್‌ ನಿಧಿ, ವಿದ್ಯಾರ್ಥಿವೇತನ ವಿತರಣೆ


ಉದ್ಘಾಟನೆ: ಬೆಳಗ್ಗೆ 9.30ಕ್ಕೆ ಶಿರಸಿ ಅರ್ಬನ್‌ ಬ್ಯಾಂಕಿನ ನಿವೃತ್ತ ಜನರಲ್‌ ಮ್ಯಾನೇಜರ್‌ ಎಂ.ಎಸ್‌. ಪ್ರಭು ಉದ್ಘಾಟಿಸಲಿದ್ದು, ಶ್ರೀ ಮಹಾವಿಷ್ಣು ವೆಂಕಟರಮಣ ದೇವಸ್ಥಾನಗಳ ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಅಧ್ಯಕ್ಷ ತೆ ವಹಿಸುವರು. ಮುಖ್ಯಅತಿಥಿಗಳಾಗಿ ಉದ್ಯಮಿ ಪಿ.ವಾಸುದೇವ ಪ್ರಭು ಉಪಸ್ಥಿತರಿರುವರು.

ಶೈಕ್ಷ ಣಿಕ ಪ್ರೇರಣಾ ಕಾರ್ಯಕ್ರಮ: ಉದ್ಘಾಟನೆ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಗೆ ನಡೆಯುವ ಶೈಕ್ಷ ಣಿಕ ಪ್ರೇರಣಾ ಕಾರಾರ‍ಯಗಾರವನ್ನು ಉಡುಪಿಯ ತೃಶಾ ಶೈಕ್ಷ ಣಿಕ ಸಮೂಹ ಸಂಸ್ಥೆಗಳ ಪ್ರವರ್ತಕರಾದ ಸಿಎ ಗೋಪಾಲಕೃಷ್ಣ ಭಟ್‌ ತಂಡದವರು ನಡೆಸಿಕೊಡುವರು.

ಸಮಾರೋಪ ಸಮಾರಂಭ: ವಿದ್ಯಾರ್ಥಿವೇತನ ವಿತರಣೆ ಹಾಗೂ ಶೈಕ್ಷ ಣಿಕವಾಗಿ ಉನ್ನತ ಸಾಧನೆ ಮಾಡಿದ ಉ.ಕ. ಜಿಲ್ಲೆಯ ಜಿ.ಎಸ್‌.ಬಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜಿ.ಎಸ್‌.ಬಿ. ಸಮಾಜ ಹಿತರಕ್ಷ ಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಕೋಟ ಅಧ್ಯಕ್ಷ ತೆಯಲ್ಲಿ ನಡೆಯಲಿದ್ದು, ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಸಿಎ ಎಸ್‌.ಎಸ್‌. ನಾಯಕ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿ.ಎಸ್‌.ಬಿ. ಸಮಾಜ ಹಿತರಕ್ಷ ಣಾ ವೇದಿಕೆಯ ಸಂಚಾಲಕ ಆರ್‌. ವಿವೇಕಾನಂದ ಶೆಣೈ, ನಿವೃತ್ತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಬಚ್ಚೋಡಿ ದೇವದಾಸ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿ.ಎಸ್‌.ಬಿ. ಸಮಾಜ ಹಿತರಕ್ಷ ಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ ಹಾಗೂ ಜಿ.ಎಸ್‌.ಬಿ. ವಿದ್ಯಾಪೋಷಕ ನಿಧಿ ಸಮಿತಿಯ ಸಂಚಾಲಕ ಶಿರಸಿ ವಾಸುದೇವ ಶ್ಯಾನುಭಾಗ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ