ಆ್ಯಪ್ನಗರ

ವಿದೇಶ ಪ್ರವಾಸ ವೇಳೆ ಮಹಿಳೆ ಸಾವು: ಸಹಾಯ ಹಸ್ತ ಚಾಚಿದ ಜಯಪ್ರಕಾಶ್ ಹೆಗ್ಡೆ

ವಿದೇಶಿ ಪ್ರವಾಸದಲ್ಲಿದ್ದ ಕುಂದಾಪುರದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಿಕರಿಗೆ ಮಾಜಿ ಸಂಸದ ಕೆ...

Vijaya Karnataka Web 18 Jun 2019, 4:29 pm
ಕುಂದಾಪುರ: ವಿದೇಶ ಪ್ರವಾಸದಲ್ಲಿದ್ದ ಕುಂದಾಪುರದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಿಕರಿಗೆ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಸಹಾಯಹಸ್ತ ಚಾಚಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web Jayaprakash Hegde


ಮೂಲತಃ ಕುಂದಾಪುರದವರಾಗಿದ್ದು, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಮೀರಾ ಸತೀಶ್‌ ದಂಪತಿ ವಿದೇಶ ಪ್ರವಾಸ ಸಲುವಾಗಿ ಮೇ 14ರಂದು ಸ್ಪೇನ್‌ ದೇಶಕ್ಕೆ ತೆರಳಿದ್ದರು. ಪ್ರವಾಸದ ಕೊನೆಯ ದಿನವಾದ ಮೇ 24ರಂದು ಬಾರ್ಸಿಲೋನಾದ ಪ್ರವಾಸಿ ಹಡಗಿ(ಕ್ರೂಸರ್‌)ನಲ್ಲಿ ಪ್ರಯಾಣಿಸುತ್ತಿದ್ದಾಗ ಸತೀಶ್‌ ಅವರ ಪತ್ನಿ ಮೀರಾ(55) ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.

ತದನಂತರ ಮೃತದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಿ, ಭಾರತಕ್ಕೆ ಕರೆ ತರಲು, ಅಲ್ಲಿನ ಕಾನೂನು ಮತ್ತು ನಿಯಮದಂತೆ ಅಷ್ಟೊಂದು ಸುಲಭವಾದ ಕೆಲಸವಾಗಿರಲಿಲ್ಲ. ಆ ದೇಶದ ಒಂದೊಂದು ಷರತ್ತುಗಳನ್ನು ಪಾಲನೆ ಮಾಡುವುದು ಮತ್ತು ದಾಖಲಾತಿಗಳನ್ನು ಒದಗಿಸುವುದರೊಳಗಾಗಿ, ಮೀರಾ ಅವರು ಮೃತಪಟ್ಟು ಎಂಟು ದಿನ ಕಳೆದಿತ್ತು.

ಮೃತದೇಹವನ್ನು ಸ್ವಾಧೀನ ಪಡೆಯಲು ವಿಳಂಬವಾಗುತ್ತಿರುವುದನ್ನು ಅರಿತ ಸತೀಶ್‌ ಅವರು ಕುಂದಾಪುರ ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್‌ ಕುಮಾರ್‌ ಅವರ ಮೂಲಕ ಮಾಜಿ ಸಚಿವ, ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅವರನ್ನು ಸಂಪರ್ಕಿಸಿ ತನ್ನ ತೊಂದರೆ ಹೇಳಿಕೊಂಡು ಸಹಾಯಹಸ್ತ ಯಾಚಿಸಿದ್ದರು.

ವಿಷಯದ ಗಂಭೀರತೆ ಅರಿತ ಜಯಪ್ರಕಾಶ್‌ ಹೆಗ್ಡೆ ಅವರು ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ತಕ್ಷ ಣವೇ ಸಂಪರ್ಕಿಸಿ ಅವರ ಮೂಲಕ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಸಹಕಾರದಿಂದ, ಸ್ಪೇನ್‌ ದೇಶದ ಸಂಬಂಧಪಟ್ಟ ಅಧಿಕಾರಿಗಳ ನಿರಂತರ ಸಂಪರ್ಕ ಮತ್ತು ಪ್ರಯತ್ನದ ಫಲವಾಗಿ ಮೃತದೇಹವನ್ನು ಸ್ವಾಧೀನಪಡಿಸಿಕೊಂಡು ಜೂ.2ರಂದು ಮುಂಬಯಿಗೆ ತರುವ ವ್ಯವಸ್ಥೆ ಮಾಡಿಸಿದ್ದಾರೆ. ಮೃತರಿಗೆ ಪತಿ, ಇಬ್ಬರು ಪುತ್ರರಿದ್ದಾರೆ.

ಹೆಗ್ಡೆಯವರ ಸಹಕಾರ ಮರೆಯಲಾಗದು
ನಮ್ಮ ಕುಟುಂಬದ ನೋವು ಮತ್ತು ಸ್ಪೇನ್‌ ದೇಶದ ಕಾನೂನಾತ್ಮಕ ಸಮಸ್ಯೆಗೆ ಸ್ಪಂದಿಸಿದ ಜಯಪ್ರಕಾಶ್‌ ಹೆಗ್ಡೆ ಸಹಕಾರ ಎಂದಿಗೂ ಮರೆಯಲಾಗದು. ಅಚಾನಕ್‌ ಎದುರಾದ ಸಂಕಷ್ಟಕ್ಕೆ ಅವರು ಸ್ಪಂದಿಸಿದ ಪರಿ ಶಬ್ದಗಳಲ್ಲಿ ಹೇಳಲಾಗದು.
-ಸತೀಶ್‌ ಕುಂದಾಪುರ(ಮುಂಬಯಿ ನಿವಾಸಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ