ಆ್ಯಪ್ನಗರ

ಶ್ರೀಕೃಷ್ಣ ಮಠದಲ್ಲಿ ವಿಶ್ವ ಯೋಗ ದಿನಾಚರಣೆ ಯೋಗ ನಮ್ಮ ದಿನಚರಿಯ ಭಾಗವಾಗಿರಲಿ: ಪಲಿಮಾರು ಶ್ರೀ

ಏಕಾದಶಿಯಂತಹ ಹರಿದಿನಗಳಲ್ಲಿ ಆಹಾರವನ್ನಾದರೂ ಬಿಡಬಹುದು, ಆದರೆ ಯೋಗವನ್ನು ಬಿಟ್ಟ ದಿನ ನಮ್ಮ ಬದುಕಿನಲ್ಲಿ ಬಾರದಿರಲಿ.ಯೋಗಾಸನವು ನಮ್ಮ ದಿನಚರಿಯ ಒಂದು ಭಾಗವಾಗಿರಲಿ. ಪತಂಜಲಿ ಸಂಸ್ಥೆಯವರು ಹರಿದ್ವಾರದಲ್ಲಿ ಯೋಗ ಕೇಂದ್ರ ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸಿ ಇಂದು ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 22 Jun 2019, 5:00 am
ಉಡುಪಿ: ಏಕಾದಶಿಯಂತಹ ಹರಿದಿನಗಳಲ್ಲಿ ಆಹಾರವನ್ನಾದರೂ ಬಿಡಬಹುದು, ಆದರೆ ಯೋಗವನ್ನು ಬಿಟ್ಟ ದಿನ ನಮ್ಮ ಬದುಕಿನಲ್ಲಿ ಬಾರದಿರಲಿ.ಯೋಗಾಸನವು ನಮ್ಮ ದಿನಚರಿಯ ಒಂದು ಭಾಗವಾಗಿರಲಿ. ಪತಂಜಲಿ ಸಂಸ್ಥೆಯವರು ಹರಿದ್ವಾರದಲ್ಲಿ ಯೋಗ ಕೇಂದ್ರ ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸಿ ಇಂದು ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web UDP-21UK MATA 1


ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ (ಹರಿದ್ವಾರ) ಜಿಲ್ಲಾ ಘಟಕ, ಶ್ರೀ ಪತಂಜಲಿ ಯೋಗ ಶಿಕ್ಷ ಣ ಸಮಿತಿ ಕರ್ನಾಟಕ (ರಾಜಾಂಗಣ), ಶ್ರೀ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ ಉಡುಪಿ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ, ಸಿದ್ಧ ಸಮಾಧಿಯೋಗ ಉಡುಪಿ, ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಲಾದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಾಲಾಜಿ ರಾಘವೇಂದ್ರ ಆಚಾರ್ಯ ಹಾಗೂ ಸಹಭಾಗಿತ್ವ ವಹಿಸಿದ್ದ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ