ಆ್ಯಪ್ನಗರ

14ರಿಂದ ರಾಜಾಂಗಣದಲ್ಲಿ ಯಕ್ಷ ಅಷ್ಟಾಹ

ಪರ್ಯಾಯ ಪಲಿಮಾರು ಮಠ, ಶ್ರೀ ಕೃಷ್ಣಮಠ, ಕರ್ನಾಟಕ ಜಾನಪದ ಪರಿಷತ್‌ ಉಡುಪಿ ಜಿಲ್ಲಾ ಘಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಸಹಯೋಗದಲ್ಲಿ ಕಿರಿಮಂಜೇಶ್ವರದ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 4ನೇ ವರ್ಷದ ಯಕ್ಷ ಅಷ್ಟಾಹ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜು. 14ರಿಂದ 21ರ ತನಕ ಪ್ರತಿ ದಿನ ಸಂಜೆ 7.30ರಿಂದ ನಡೆಯಲಿದೆ.

Vijaya Karnataka 12 Jul 2019, 5:00 am
ಉಡುಪಿ: ಪರ್ಯಾಯ ಪಲಿಮಾರು ಮಠ, ಶ್ರೀ ಕೃಷ್ಣಮಠ, ಕರ್ನಾಟಕ ಜಾನಪದ ಪರಿಷತ್‌ ಉಡುಪಿ ಜಿಲ್ಲಾ ಘಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಸಹಯೋಗದಲ್ಲಿ ಕಿರಿಮಂಜೇಶ್ವರದ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 4ನೇ ವರ್ಷದ ಯಕ್ಷ ಅಷ್ಟಾಹ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜು. 14ರಿಂದ 21ರ ತನಕ ಪ್ರತಿ ದಿನ ಸಂಜೆ 7.30ರಿಂದ ನಡೆಯಲಿದೆ.
Vijaya Karnataka Web yaksha astaha
14ರಿಂದ ರಾಜಾಂಗಣದಲ್ಲಿ ಯಕ್ಷ ಅಷ್ಟಾಹ


ಉದ್ಘಾಟನೆ: ಜು.14, ಸಂಜೆ 7.30ಕ್ಕೆ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸುವರು. ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು.

ಸಾಯಿರಾಧಾ ಡೆವಲಪರ್ಸ್‌ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಸಿಂಡಿಕೇಟ್‌ ಬ್ಯಾಂಕ್‌ ಸ್ಟಾಫ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಬಾಲ ಗಂಗಾಧರ ರಾವ್‌, ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸಂಜೀವ ಟಿ. ಕರ್ಕೇರ, ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ. ಬಂಗೇರ, ಎಸ್‌.ವಿ. ಉದಯ ಕುಮಾರ್‌ ಶೆಟ್ಟಿ ಮುಖ್ಯಅತಿಥಿಗಳಾಗಿದ್ದಾರೆ.

ಜು. 21, ಸಂಜೆ 7.30ಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಹಾರಾಡಿ ಸರ್ವೋತ್ತಮ ಗಾಣಿಗ ಅವರನ್ನು ಸನ್ಮಾನಿಸಲಾಗುವುದು.

ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ್‌ ಕಲ್ಕೂರ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ತಲ್ಲೂರು ಶಿವರಾಮ ಶೆಟ್ಟಿ, ಪಿ. ಕಿಶನ್‌ ಕುಮಾರ್‌ ಹೆಗ್ಡೆ, ಪ್ರಕಾಶ್‌ ನಾಯಕ್‌ ನರಸಿಂಗೆ, ಹೆಚ್‌. ಜನಾರ್ದನ ಹಂದೆ ಮುಖ್ಯ ಅತಿಥಿಗಳಾಗಿದ್ದಾರೆ.

ಯಾವ ಪ್ರಸಂಗ ಯಾವಾಗ?: ಜು. 14: ಶ್ರೀಕೃಷ್ಣ ಪಾರಿಜಾತ, ಜು. 15: ಭಸ್ಮಾಸುರ ಮೋಹಿನಿ, ಜು. 16: ಗುರು ವಿಶ್ವರೂಪ, ಜು. 17: ಸುದ್ಯುಮ್ನ, ಜು. 18: ಕಬಂಧ ಮೋಕ್ಷ, ಜು. 19: ಖಾಂಡವ ದಹನ, ಜು. 20: ಗರುಡೋದ್ಭವ, ಜು. 21: ರಾವಣ ವಧೆ.

...............................

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ