ಆ್ಯಪ್ನಗರ

20, 21ರಂದು ವಕೀಲರ ರಾಜ್ಯಮಟ್ಟದ ‘ಯಕ್ಷ ಕಲಾ ವೈಭವ-2019’

ಉಡುಪಿ ವಕೀಲರ ಸಂಘದ ವತಿಯಿಂದ ಯಕ್ಷ ಪ್ರಿಯರಿಗಾಗಿ ಹಮ್ಮಿಕೊಂಡಿರುವ ವಕೀಲರ ರಾಜ್ಯಮಟ್ಟದ ತೆಂಕು ಹಾಗೂ ಬಡಗುತಿಟ್ಟಿನ ಯಕ್ಷಗಾನ ಸ್ಪರ್ಧೆ 'ಯಕ್ಷ ಕಲಾ ವೈಭವ-2019' ಮೇ 20, 21ರಂದು ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಯಕ್ಷ ಕಲಾ ವೈಭವದ ಅಧ್ಯಕ್ಷ ವಿಜಯ ಹೆಗ್ಡೆ ತಿಳಿಸಿದ್ದಾರೆ.

Vijaya Karnataka 12 May 2019, 5:00 am
ಉಡುಪಿ : ಉಡುಪಿ ವಕೀಲರ ಸಂಘದ ವತಿಯಿಂದ ಯಕ್ಷ ಪ್ರಿಯರಿಗಾಗಿ ಹಮ್ಮಿಕೊಂಡಿರುವ ವಕೀಲರ ರಾಜ್ಯಮಟ್ಟದ ತೆಂಕು ಹಾಗೂ ಬಡಗುತಿಟ್ಟಿನ ಯಕ್ಷಗಾನ ಸ್ಪರ್ಧೆ 'ಯಕ್ಷ ಕಲಾ ವೈಭವ-2019' ಮೇ 20, 21ರಂದು ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಯಕ್ಷ ಕಲಾ ವೈಭವದ ಅಧ್ಯಕ್ಷ ವಿಜಯ ಹೆಗ್ಡೆ ತಿಳಿಸಿದ್ದಾರೆ.
Vijaya Karnataka Web yaksha kala vaibhava
20, 21ರಂದು ವಕೀಲರ ರಾಜ್ಯಮಟ್ಟದ ‘ಯಕ್ಷ ಕಲಾ ವೈಭವ-2019’


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೇ 20ರಂದು ಬೆಳಗ್ಗೆ 9 ಗಂಟೆಗೆ ಯಕ್ಷ ಕಲಾ ವೈಭವವನ್ನು ಹೈಕೋರ್ಟ್‌ ನ್ಯಾಯಮೂರ್ತಿ, ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎ. ಪಾಟೀಲ ಉದ್ಘಾಟಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಎಚ್‌. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ, ಕರ್ನಾಟಕ ವಕೀಲರ ಪರಿಷತ್‌ನ ಸದಸ್ಯ ಪದ್ಮಪ್ರಸಾದ್‌ ಹೆಗ್ಡೆ ಭಾಗವಹಿಸಲಿದ್ದಾರೆ ಎಂದರು.

ಮೇ 21ರಂದು ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದ್ದು, ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಪೆರ್ಡೂರು ಮೇಳದ ವ್ಯವಸ್ಥಾಪಕ ಕರುಣಾಕರ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸಂಚಾಲಕ ಪಿ. ಕಿಶನ್‌ ಹೆಗ್ಡೆ, ಮಣಿಪಾಲ ಎಂಐಟಿ ಉಪನ್ಯಾಸಕ ಎಸ್‌.ವಿ. ಉದಯ ಕುಮಾರ್‌ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸ್ಪರ್ಧೆಗೆ ಬೆಳ್ತಂಗಡಿ, ಪುತ್ತೂರು, ಮಂಗಳೂರು, ಧಾರವಾಡ, ಹೊನ್ನಾವರ, ಕುಂದಾಪುರ ಹಾಗೂ ಕಾರವಾರದ ತಂಡಗಳು ನೋಂದಣಿ ಮಾಡಿಕೊಂಡಿದ್ದು, ನೋಂದಣಿಗೆ ಇನ್ನೂ ಅವಕಾಶವಿದೆ. ತಂಡಕ್ಕೆ 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪೌರಾಣಿಕ ಪ್ರಸಂಗ ಪ್ರದರ್ಶನಕ್ಕೆ ಅವಕಾಶವಿದ್ದು, ಹಾಸ್ಯ, ಬಣ್ಣದ ವೇಷ, ಸ್ತ್ರೀವೇಷ, ಪುಂಡು ವೇಷ ಹಾಗೂ ಪುರುಷ ವೇಷಕ್ಕೆ 5 ವೈಯಕ್ತಿಕ ಹಾಗೂ ತೆಂಕು ಮತ್ತು ಬಡಗುತಿಟ್ಟಿಗೆ ತಲಾ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುತ್ತದೆ. ಭಾಗವಹಿಸುವ ವಕೀಲರು ರಾಜ್ಯ ವಕೀಲರ ಪರಿಷತ್‌ನಿಂದ ಕೊಟ್ಟಿರುವ ಗುರುತು ಚೀಟಿ ತೋರಿಸಬೇಕು ಎಂದರು.

ಯಕ್ಷ ಕಲಾ ವೈಭವದ ಗೌರವಾಧ್ಯಕ್ಷ ಶ್ರೀಪತಿ ಆಚಾರ್ಯ, ಉಪಾಧ್ಯಕ್ಷ ಗಣೇಶ್‌ ಕುಮಾರ್‌ ಕೆ., ಕಾರ್ಯದರ್ಶಿ ಉದಯ್‌ ಕುಮಾರ್‌ ಎಂ., ಕೋಶಾಧಿಕಾರಿ ಮೋಹನ್‌ ದಾಸ್‌ ಪೈ, ವಕೀಲರ ಸಂಘದ ಕಾರ್ಯದರ್ಶಿ ಎ. ಸಂತೋಷ್‌ ಹೆಬ್ಬಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಅಸದುಲ್ಲಾ ಕಟಪಾಡಿ, ವಕೀಲರಾದ ಸತೀಶ್‌, ಬಿ. ನಾಗರಾಜ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ