Please enable javascript.ಕಾಳಹಸ್ತೇಂದ್ರ ಶ್ರೀಗಳ ಪಟ್ಟಾಭಿಷೇಕ - kalahstendra shree pattabhisheka - Vijay Karnataka

ಕಾಳಹಸ್ತೇಂದ್ರ ಶ್ರೀಗಳ ಪಟ್ಟಾಭಿಷೇಕ

ವಿಕ ಸುದ್ದಿಲೋಕ 9 May 2015, 5:23 am
Subscribe

ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ ಪಂಚಮ ವರ್ಧಂತ್ಯುತ್ಸವ ಮೇ 13ರಂದು ನಡೆಯಲಿದೆ.

kalahstendra shree pattabhisheka
ಕಾಳಹಸ್ತೇಂದ್ರ ಶ್ರೀಗಳ ಪಟ್ಟಾಭಿಷೇಕ
ಕಟಪಾಡಿ: ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ ಪಂಚಮ ವರ್ಧಂತ್ಯುತ್ಸವ ಮೇ 13ರಂದು ನಡೆಯಲಿದೆ.

ಕಾಪು ಬಳಿಯ ಪಡುಕುತ್ಯಾರಿನ ನೂತನ ನಿವೇಶನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಉಡುಪಿ ಶಾಸಕ ಪ್ರಮೋದ್ ಮದ್ವರಾಜ್, ಜಿ.ಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು,ಉಡುಪಿ ಜಿಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸಲಿದ್ದಾರೆ.

ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿದ್ವಾನ್ ವೇ.ಬ್ರ.ಶಂಕರ ಆಚಾರ್ಯ ಕಡ್ಲಾಸ್ಕರ, ಶುಭಕರ ಎನ್. ಆಚಾರ್ಯ ಕೊಯಂಬುತ್ತೂರು, ಜಿ.ಟಿ ಆಚಾರ್ಯ ಮುಂಬೈ, ನಿಟ್ಟೆ ದಾಮೋದರ ಆಚಾರ್ಯ ಮುಂಬೈ, ಹರಿಶ್ಚಂದ್ರ ಎನ್.ಆಚಾರ್ಯ ಬೆಂಗಳೂರು, ಮಲ್ಲಿಕಾರ್ಜುನ ಆಚಾರ್ ಶಿಕಾರಿಪುರ ಇವರು ಶುಭಾಶಂಸನೆಗೈಯಲ್ಲಿದ್ದಾರೆ. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಕರಾವಳಿಯ ವಿಶ್ವಬ್ರಾಹ್ಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರರುಗಳು ಉಪಸ್ಥಿತರಿರುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸುವರು. ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಠದ ವಸಂತ ವೇದ ಶಿಬಿರವು ಇದೇ ದಿನ ಆರಂಭಗೊಳ್ಳಲಿದೆ.

ಸಾಧಕರಿಗೆ ಗೌರವಾರ್ಪಣೆ: ಈ ಸಂದರ್ಭದಲ್ಲಿ ಶ್ರೀಮಠದ ಪುನರ್ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದ ಹಿರಿಯ ಸಮಾಜ ಸೇವಾ ಧುರೀಣರಾದ ಕಡೇಕಾರು ಶ್ರೀನಿವಾಸ ಆಚಾರ್ಯ ಉಡುಪಿ, ವೈ. ಶಾಂತಾರಾಮ ಆಚಾರ್ಯ ಕಾರ್ಕಳ (ಮರಣೋತ್ತರ), ಭುಜಂಗ ಆಚಾರ್ಯ ಕಟಪಾಡಿ, ಸಮಾಜದ ಹಿರಿಯ ವೈದಿಕ ತಂತ್ರಿವರ್ಯ ಮಾಯಿಪ್ಪಾಡಿ ಮಾಧವ ಆಚಾರ್ಯ, ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಇವರನ್ನು ಗೌರವಿಸಲಾಗುವುದು. ಭಾರತೀಯ ಆಡಳಿತ ಸೇವೆಯ ಮುಖ್ಯ ಪರೀಕ್ಷೆ ವಿಜೇತ ಸುಧೇಶ ಪಿ. ಆಚಾರ್ಯ ಪುತ್ತೂರು, ಎಂ.ಎ. ಪ್ರಥಮ ರ‌್ಯಾಂಕ್ ವಿಜೇತೆ ಕುಮಾರಿ ಜ್ಯೋತಿ ಎಚ್.ಆಚಾರ್ಯ ಪಾದೆಬೆಟ್ಟು ಇವರನ್ನು ಅಭಿನಂದಿಸಲಾಗುವುದು.

ಬೆಳಗ್ಗೆ ಕಟಪಾಡಿ ಶ್ರೀ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳ ವಂದಾವನದಲ್ಲಿ ಪೂಜೆ, ನಂತರ ಪಡುಕುತ್ಯಾರಿನಲ್ಲಿ ವಿಶ್ವಕರ್ಮ ಯಜ್ಞ, ದಕ್ಷಿಣಾಮೂರ್ತಿ ಯಜ್ಞ, ರುದ್ರ ಯಜ್ಞ ಹಾಗೂ ಗುರುಪಾದಪೂಜೆ ನಡೆಯಲಿದೆ. ಅದೇ ದಿನ ಪಡುಕುತ್ಯಾರು ಆನೆಗುಂದಿ ಮಠದ ನಿವೇಶನದಲ್ಲಿರುವ ನಾಗಬ್ರಹ್ಮಸ್ಥಾನದಲ್ಲಿ ಪಂಚಶಕ್ತಿಗಳ ಪ್ರತಿಷ್ಠೆ ಹಾಗೂ ಧರ್ಮದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ