ಆ್ಯಪ್ನಗರ

ಉಗ್ರರಿಗೆ ಹೆದರಿ ಯುವಕ ಆತ್ಮಹತ್ಯೆ?

ಉಗ್ರರ ಬೆದರಿಕೆಗೆ ಹೆದರಿ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ ಎಂದು ಆತ ಡೆತ್‌ ನೋಟ್‌ನಲ್ಲಿ ತಿಳಿಸಿದ್ದಾನೆ.

Vijaya Karnataka 16 Oct 2018, 10:46 am
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದ ಮಾರ್ಕೋಡು ಬೊಬ್ಬರಿಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಉಗ್ರರ ಬೆದರಿಕೆಯೇ ಇದಕ್ಕೆ ಕಾರಣ ಎಂದು ಪತ್ರ ಬರೆದಿಟ್ಟಿದ್ದಾನೆ. ವಿವೇಕ್ ಮೊಗವೀರ ( 23 ) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಡೆತ್‌ನೋಟ್‌ ಈ ಪರಿಸರದಲ್ಲಿ ಭಾರಿ ತಲ್ಲಣ ಮೂಡಿಸಿದೆ.
Vijaya Karnataka Web youth suicide


''ನನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ. ಸಂಘಟನೆಯಿಂದ ಕೊಲೆ ಬೆದರಿಕೆ ಇದೆ, ನನ್ನ ಕುಟುಂಬಕ್ಕೂ ಅಪಾಯವಿದೆ. ಆಕಸ್ಮಿಕವಾಗಿ 2 ವರ್ಷ ಹಿಂದೆ ಈ ಸಂಘಟನೆಯ ಪರಿಚಯ ಆಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇವರ ದುಷ್ಕೃತ್ಯ ನಡೆಯುತ್ತಿದೆ'' ಎಂದು ಆತ ಪತ್ರದಲ್ಲಿ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ