ಆ್ಯಪ್ನಗರ

ಉಡುಪಿಯಲ್ಲಿ ಅಂತರ್‌ ರಾಜ್ಯ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟನೆ

ಜಿಲ್ಲಾಡಳಿತ, ನೆಹರು ಯುವ ಕೇಂದ್ರ ಉಡುಪಿ, ನೆಹರು ಯುವ ಕೇಂದ್ರ ಸಂಘಟನೆ ಕರ್ನಾಟಕ ಹಾಗೂ ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ಸಹಭಾಗಿತ್ವದಲ್ಲಿ 'ಅಂತರ್‌ ರಾಜ್ಯ ಯುವ ವಿನಿಮಯ 'ಕಾರ್ಯಕ್ರಮ ಸೋಮವಾರ ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ನಡೆಯಿತು.

Vijaya Karnataka 12 Dec 2018, 5:00 am
ಉಡುಪಿ :ಜಿಲ್ಲಾಡಳಿತ, ನೆಹರು ಯುವ ಕೇಂದ್ರ ಉಡುಪಿ, ನೆಹರು ಯುವ ಕೇಂದ್ರ ಸಂಘಟನೆ ಕರ್ನಾಟಕ ಹಾಗೂ ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ಸಹಭಾಗಿತ್ವದಲ್ಲಿ 'ಅಂತರ್‌ ರಾಜ್ಯ ಯುವ ವಿನಿಮಯ 'ಕಾರ್ಯಕ್ರಮ ಸೋಮವಾರ ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ನಡೆಯಿತು.
Vijaya Karnataka Web vinimaya


ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅವರು ಉದ್ಘಾಟಿಸಿ ಶುಭ ಹಾರೈಸಿದರು.

ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಸುನಿಲ್‌ ಮಲಿಕ್‌ ಅವರು ಮಾತನಾಡಿ ಭೌಗೋಳಿಕ ವಿಭಿನ್ನತೆಯನ್ನು ಮರೆತು ಪರಸ್ಪರರನ್ನು ಅರಿಯುವ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾರೈಸಿದರು.

ಜಿಲ್ಲಾ ಪಂಚಾಯಿತಿ ಅಧಿಕಾರಿ ನಾಗೇಶ್‌ ರಾಯ್ಕರ್‌, ಕಾರ್ಪೋರೇಶನ್‌ ಬ್ಯಾಂಕಿನ ಉಡುಪಿ ವಲಯ ಉಪಮಹಾ ಪ್ರಬಂಧಕಿ ಡೇಲಿಯಾ ಎ.ಡಯಾಸ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಅಶೋಕ್‌ ಹಾಗೂ ಮಮತಾ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್‌ ಡಿಸೋಜಾ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ದುರ್ಗಾ ಪರಮೇಶ್ವರಿ ಫ್ರೆಂಡ್ಸ್‌ ಕ್ಲಬ್‌ ಅಬ್ಬನಡ್ಕ , ನಂದಳಿಕೆ ಹಾಗೂ ಸ್ವಚ್ಛ ಭಾರತ್‌ ಇಂಟೆನ್‌ಶಿಪ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ ಹಾಗೂ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶೆರ್ಲಿನ್‌ ಡಿ.ಅಲ್ಮೇಡಾ ಅವರಿಗೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಸ್ತುತ ಈ ಕಾರ್ಯಕ್ರಮ ಡಿ.21ರವರೆಗೆ ನಡೆಯಲಿದ್ದು, ಉತ್ತರಾಖಂಡದ 50 ಮಂದಿಯ ತಂಡ ಹಾಗೂ ರಾಜ್ಯದ 50 ಮಂದಿಯ ತಂಡ ಪಾಲ್ಗೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ