ಆ್ಯಪ್ನಗರ

ಧೈರ್ಯ ತುಂಬುವ ಕೆಲಸವಾಗಲಿ

ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಪತ್ರಿಕೋದ್ಯಮದಲ್ಲಿಹೊಸ ಹೊಳಪನ್ನು ನೀಡುತ್ತಿರುವ ವಿಜಯ ಕರ್ನಾಟಕಕ್ಕೆ ಅಭಿನಂದನೆಗಳು...

Vijaya Karnataka 30 Oct 2019, 5:00 am
ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಪತ್ರಿಕೋದ್ಯಮದಲ್ಲಿಹೊಸ ಹೊಳಪನ್ನು ನೀಡುತ್ತಿರುವ ವಿಜಯ ಕರ್ನಾಟಕಕ್ಕೆ ಅಭಿನಂದನೆಗಳು. ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳ ಹಾವಳಿ, ಕೂಲಿಕಾರರ ಸಮಸ್ಯೆ, ಅಸ್ಥಿರ ಬೆಲೆ ಇವೆಲ್ಲವುಗಳಿಂದಾಗಿ ಅಡಿಕೆ ಬೆಳೆಗಾರ ಕಂಗಾಲಾಗಿದ್ದಾನೆ. ಅವನಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಇದಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ವಿಜಯ ಕರ್ನಾಟಕ ಎತ್ತಿರುವ ಹಕ್ಕೋತ್ತಾಯಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಾಗಿದೆ. ಆದರೆ ಅಡಿಕೆ ಮಹಾಮಂಡಳಿ ಸ್ಥಾಪನೆಯ ವಿಚಾರದಲ್ಲಿವ್ಯಾಪಕ ಚರ್ಚೆಯಾಗಬೇಕಾಗಿದೆ. ಮಂಡಳಿ ಸ್ಥಾಪನೆಯಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗಬಾರದು. ಇದು ರೈತರ ಮಂಡಳಿಯಾಗಬೇಕು. ಅಧಿಕಾರಿಗಳ ಮಂಡಳಿಯಾಗಬಾರದು. ಈ ಬಗ್ಗೆ ಅಡಿಕೆ ಬೆಳೆಗಾರರರೊಂದಿಗೆ ಚರ್ಚಿಸಿ ಸರಕಾರದ ಮೇಲೆ ಒತ್ತಡ ಹೇರಬೇಕು.
Vijaya Karnataka Web
ಧೈರ್ಯ ತುಂಬುವ ಕೆಲಸವಾಗಲಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ