ಆ್ಯಪ್ನಗರ

ರಕ್ತದಾನ ಒಂದು ಜೀವವನ್ನು ದಾನ ಮಾಡಿದಂತೆ

ರಾಣೇಬೆನ್ನೂರ : ರಕ್ತದಾನವು ಒಂದು ಜೀವವನ್ನು ದಾನ ಮಾಡಿದಂತೆ ಎಂದು ತಾಲೂಕು ಆರ‍್ಯವೈಶ್ಯ ಸಂಘದ ಅಧ್ಯಕ್ಷ ಎಲ್‌.ಜಿ.ಶೆಟ್ರ ಹೇಳಿದರು.

Vijaya Karnataka 26 Apr 2020, 5:00 am
ರಾಣೇಬೆನ್ನೂರ : ರಕ್ತದಾನವು ಒಂದು ಜೀವವನ್ನು ದಾನ ಮಾಡಿದಂತೆ ಎಂದು ತಾಲೂಕು ಆರ‍್ಯವೈಶ್ಯ ಸಂಘದ ಅಧ್ಯಕ್ಷ ಎಲ್‌.ಜಿ.ಶೆಟ್ರ ಹೇಳಿದರು.
Vijaya Karnataka Web  300
ರಕ್ತದಾನ ಒಂದು ಜೀವವನ್ನು ದಾನ ಮಾಡಿದಂತೆ


ನಗರದ ಸಾಯಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಶನಿವಾರ ತಾಲೂಕು ಆರ‍್ಯ ವೈಶ್ಯ ಸಂಘ, ಕರ್ನಾಟಕ ಸಂಘ, ರಾಣೇಬೆನ್ನೂರ ಎಂಜಿನಿಯರ್ಸ್ ಸಂಘ ಹಾಗೂ ರಾಣೇಬೆನ್ನೂರ ಬ್ಲಡ್‌ ಬ್ಯಾಂಕ್‌ ಇವರುಗಳ ಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿಮಾತನಾಡಿದರು. ಕೊರೊನಾ ತಡೆಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ರಕ್ತದ ಅವಶ್ಯಕತೆಯಿದ್ದು, ಲಾಕ್‌ಡೌನ್‌ನಿಂದಾಗಿ ರಕ್ತ ಸಂಗ್ರಹ ಕಡಿಮೆಯಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ರಾಣೇಬೆನ್ನೂರ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಕೆ.ಎನ್‌.ಷಣ್ಮುಖ, ಕೆ.ಎಸ್‌.ಪ್ರಸಾದ, ಶ್ರೀಧರ, ಶ್ರೀನಿವಾಸ ಏಕಬೋಟೆ, ಜಗದೀಶರೆಡ್ಡಿ, ಸೀತಾರಾಂ ಕಣೇಕಲ್‌, ಸಂದೀಪ ರೂಪನಗುಡಿ, ಸತ್ಯನಾರಾಯಣ ವಿಶ್ವರೂಪ, ಚಿದಂಬರ ಜೋಶಿ ಮತ್ತಿತರರಿದ್ದರು.

ಸಾಮಾಜಿಕ ಜಾಲತಾಣದಲ್ಲಿಶಿಬಿರದ ಬಗ್ಗೆ ಮಾಹಿತಿ ಪಡೆದುಕೊಂಡು ಅನೇಕರು ರಕ್ತದಾನ ಮಾಡಿದರು. ಅದರಲ್ಲಿ30, 15, 10 ಬಾರಿ ರಕ್ತದಾನ ಮಾಡಿದವರು ಹಾಗೂ ಐದಾರು ಜನ ಮೊದಲ ಬಾರಿಗೆ ರಕ್ತದಾನ ಮಾಡಿದವರಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ