ಆ್ಯಪ್ನಗರ

ಮುರ್ಡೇಶ್ವರದಲ್ಲಿ10 ಪ್ರವಾಸಿಗರ ರಕ್ಷಣೆ

ಭಟ್ಕಳ : ಮುರ್ಡೇಶ್ವರದಲ್ಲಿಪ್ರವಾಸಕ್ಕೆಂದು ಬಂದು ಈಜಲು ಸಮುದ್ರಕ್ಕೆ ಇಳಿದು ಆಯತಪ್ಪಿ ನೀರುಪಾಲಾಗಲಿದ್ದ 10 ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿರುವ ಘಟನೆ ಕಳೆದ 3 ದಿನಗಳ ಅವಧಿಯಲ್ಲಿನಡೆದಿದೆ.

Vijaya Karnataka 11 Oct 2019, 5:00 am
ಭಟ್ಕಳ : ಮುರ್ಡೇಶ್ವರದಲ್ಲಿಪ್ರವಾಸಕ್ಕೆಂದು ಬಂದು ಈಜಲು ಸಮುದ್ರಕ್ಕೆ ಇಳಿದು ಆಯತಪ್ಪಿ ನೀರುಪಾಲಾಗಲಿದ್ದ 10 ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿರುವ ಘಟನೆ ಕಳೆದ 3 ದಿನಗಳ ಅವಧಿಯಲ್ಲಿನಡೆದಿದೆ.
Vijaya Karnataka Web 37089BKL1_24


ಸೋಮವಾರ ಬೆಂಗಳೂರಿನ ಶಂಕರ ಸೇರಿದಂತೆ ಜತೆಗೆ ಬಂದಿದ್ದ ನಾಲ್ವರನ್ನು ಜೀವ ರಕ್ಷಕ ಸಿಬ್ಬಂದಿಯಾದ ಶಶಿಧರ ನಾಯ್ಕ ಮತ್ತು ಚಂದ್ರಶೇಖರ ದೇವಡಿಗ ರಕ್ಷಿಸಿ ದಡ ಸೇರಿಸಿದ್ದಾರೆ. ಮಂಗಳವಾರ ನಡೆದ ಇನ್ನೊಂದು ಘಟನೆಯಲ್ಲಿಚಿತ್ರದುರ್ಗದ ನಾಲ್ವರನ್ನು ರಕ್ಷಿಸಲಾಗಿದೆ.

ಪ್ರಾಣಾಪಾಯದಿಂದ ಪಾರಾದವರನ್ನು ಚಿತ್ರದುರ್ಗ ಜಿಲ್ಲೆಹೊಸದುರ್ಗದ ಕಾವ್ಯ ತಂದೆ ಜಗದೀಶ (20), ಪಲ್ಲವಿ ಆಂಜನಪ್ಪ (21), ಗದಗ ಜಿಲ್ಲೆಶಿರಹಟ್ಟಿ ತಾಲೂಕಿನ ಚಂದ್ರಶೇಖರ ನಾಗಪ್ಪ (23) ಮತ್ತು ಬಸವರಾಜ್‌ ಪರವಿ ಕೆರೂರ್‌ (22) ಎಂದು ಗುರುತಿಸಲಾಗಿದೆ. ಇವರು 8 ಮಂದಿ ಸಂಬಂಧಿಕರು ಸೇರಿಕೊಂಡು ಮುರ್ಡೇಶ್ವರಕ್ಕೆ ಆಗಮಿಸಿ ಮಂಗಳವಾರ ಮಧ್ಯಾಹ್ನ ಈಜಲು ಸಮುದ್ರಕ್ಕೆ ಇಳಿದಿದ್ದರು ಎಂದು ತಿಳಿದು ಬಂದಿದೆ. ಬುಧವಾರ ಮತ್ತೆ ಇಬ್ಬರನ್ನು ರಕ್ಷಿಸಲಾಗಿದ್ದು, ಅವರನ್ನು ಬೆಂಗಳೂರು ಬಸವನಗುಡಿ ನಿವಾಸಿ ಮನೋಹರ ಎಂ.ಬಿ. (26) ಹಾಗೂ ಆತನ ಸ್ನೇಹಿತ ಬೆಂಗಳೂರು ದೀಪಾಂಜಲಿ ನಗರದ ಜಗದೀಶ ಕೆ.ಟಿ. (27) ಎಂದು ಹೆಸರಿಸಲಾಗಿದೆ. ಬೀಚ್‌ ಸೂಪರ್‌ವೈಸರ್‌ ನರಸಿಂಹ ಮೊಗೇರ, ಜೀವರಕ್ಷಕ ಸಿಬ್ಬಂದಿ ಜೈರಾಮ್‌ ಹರಿಕಾಂತ, ಚಂದ್ರಶೇಖರ ಹರಿಕಾಂತ, ರವಿ ಹರಿಕಾಂತ, ಚಂದ್ರಶೇಖರ ದೇವಡಿಗ ರಕ್ಷಣಾ ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು. ನಂತರ ಅಪಾಯದಿಂದ ಪಾರಾಗಿ ಬಂದ ಪ್ರವಾಸಿಗರನ್ನು ಪೊಲೀಸ್‌ ವಶಕ್ಕೆ ನೀಡಲಾಗಿದ್ದು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ