ಆ್ಯಪ್ನಗರ

ದಾಂಡೇಲಿ: ಒಂದೇ ಕುಟುಂಬದ 12 ಜನರಿಗೆ ಸೋಂಕು

ದಾಂಡೇಲಿಯ ನಗರದ ಟೌನ್‌ಶಿಪ್‌ ರಾಘವೇಂದ್ರ ಮಠದ ಬಳಿ ಒಂದೇ ಕುಟುಂಬದ 12 ಜನರಿಗೆ ಕೊರೊನೊ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಮಾಡಲಾಗಿದೆ.

Vijaya Karnataka Web 14 Jul 2020, 9:47 pm
ದಾಂಡೇಲಿ: ನಗರದಲ್ಲಿ ಮಂಗಳವಾರ ಒಂದೇ ದಿನ 22 ಸೋಂಕು ದೃಢವಾಗಿದೆ. ಅದರಲ್ಲೂ ಒಂದೇ ಕುಟುಂಬದ 12 ಜನರಿಗೆ ಸೋಂಕು ಪತ್ತೆಯಾಗಿದೆ. ಈವರೆಗೆ ಒಟ್ಟು 54 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 11 ಸೋಂಕಿತರು ಗುಣಮುಖರಾಗಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ಸೋಮವಾರ ರಾತ್ರಿ ಮೃತರಾಗಿದ್ದ 46 ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆಯಲ್ಲಿ ಆಕೆಗೆ ಸೋಂಕಿರುವುದು ದೃಢವಾಗಿದೆ. ಈಗಾಗಲೆ ತಹಸೀಲ್ದಾರ್‌ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರು ಸೋಂಕಿತರ ಕುರಿತಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಗರದ ಟೌನ್‌ಶಿಪ್‌ ರಾಘವೇಂದ್ರ ಮಠದ ಬಳಿ ಒಂದೇ ಕುಟುಂಬದ 12 ಜನರಿಗೆ ಕೊರೊನೊ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಮಾಡಲಾಗಿದೆ. ಆ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಗೆ ನಗರ ಸಭೆಯ ವತಿಯಿಂದ ಬ್ಯಾರಿಕೇಡ್‌ ಹಾಗೂ ಬಿದಿರನ್ನು ಕಟ್ಟಿ ರಸ್ತೆ ಬಂದ್‌ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ