ಆ್ಯಪ್ನಗರ

ಜಿಎಸ್‌ಟಿ ವಿನಾಯಿತಿಗೆ ಕೇಂದ್ರಕ್ಕೆ ಒತ್ತಡ

ಶಿರಸಿ : ಕೋಟಿ ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ ಸಹಕಾರಿ ಸಂಘಗಳಿಗೆ ವಿಧಿಸುವ ಜಿಎಸ್‌ಟಿಗೆ ವಿನಾಯಿತಿ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಲಾಗಿದೆ. 1 ಕೋಟಿ ಬದಲಿಗೆ 5 ಕೋಟಿ ರೂ.ವರೆಗಿನ ವಹಿವಾಟಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.

Vijaya Karnataka 14 Sep 2019, 5:00 am
ಶಿರಸಿ : ಕೋಟಿ ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ ಸಹಕಾರಿ ಸಂಘಗಳಿಗೆ ವಿಧಿಸುವ ಜಿಎಸ್‌ಟಿಗೆ ವಿನಾಯಿತಿ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಲಾಗಿದೆ. 1 ಕೋಟಿ ಬದಲಿಗೆ 5 ಕೋಟಿ ರೂ.ವರೆಗಿನ ವಹಿವಾಟಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.
Vijaya Karnataka Web 13 5
ಜಿಎಸ್‌ಟಿ ವಿನಾಯಿತಿಗೆ ಕೇಂದ್ರಕ್ಕೆ ಒತ್ತಡ


ಕ್ಯಾಂಪ್ಕೋ ಸಂಸ್ಥೆ ನಗರದ ಟಿಎಂಎಸ್‌ ಸಭಾಂಗಣದಲ್ಲಿಶುಕ್ರವಾರ ಆಯೋಜಿಸಿದ್ದ ಸದಸ್ಯ ಬೆಳೆಗಾರರ ಪ್ರಾದೇಶಿಕ ಸಭೆಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತಿತರ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ವಾರಾಂತ್ಯದಲ್ಲಿಈ ಸಂಬಂಧ ನಡೆಯಲಿರುವ ಹಿರಿಯ ಅಧಿಕಾರಿಗಳ ಸಭೆಯಲ್ಲೂಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುವ ಭರವಸೆ ದೊರೆತಿದೆ ಎಂದರು.

ಸಹಕಾರಿ ಸಂಘಗಳು ರೈತರ ಸಂಸ್ಥೆಗಳಾಗಿವೆ. ಈ ಹಿನ್ನೆಲೆಯಲ್ಲಿಕೋಟಿ ರೂ.ವಹಿವಾಟು ನಡೆಸಿದರೆ ಶೇ.2ರ ಜಿಎಸ್‌ಟಿ ದಾಖಲಿಸುವುದು ಸರಿಯಲ್ಲ. ಈ ಕಾರಣದಿಂದ ವಿನಾಯಿತಿ ಕೇಳಿದ್ದೇವೆ. ಅವರು ಶೇ.1ರಷ್ಟು ಜಿಎಸ್‌ಟಿ ವಿಧಿಸಿದರೆ ಹೇಗೆ ಎಂದೂ ಕೇಳಿದ್ದಾರೆ. ಆದರೆ ಸಂಪೂರ್ಣ ವಿನಾಯಿತಿಗೂ ಮನವಿ ಮಾಡಿರುವುದಾಗಿ ತಿಳಿಸಿದರು.

ಸಂಸ್ಥೆ ಉಪಾಧ್ಯಕ್ಷ ಶಂಖರ ಖಂಡಿಗೆ ಮಾತನಾಡಿ, ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿಅನೇಕ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ಷೇರು ಇರುವ ಸದಸ್ಯರಿಗೆ ಕಿಡ್ನಿ ಕಸಿಗೆ ಒಂದು ಲಕ್ಷ ರೂ.ನೆರವಾಗುತ್ತಿದ್ದೇವೆ. ಕೃಷಿಯಲ್ಲಿ ಯಂತ್ರಬಳಕೆಗೆ ಆದ್ಯತೆ ನೀಡಿದೆ ಎಂದರು.

ಅಧ್ಯಕ್ಷರೊಂದಿಗೆ ಸಂವಾದ : ಈ ಸಂದರ್ಭದಲ್ಲಿಕ್ಯಾಂಪ್ಕೋ ಅಧ್ಯಕ್ಷರೊಂದಿಗೆ ಸಂವಾದ ನಡೆಯಿತು. ಪಾರಂಪರಿಕ ಅಡಕೆ ಬೆಳೆಗಾರರ ರಕ್ಷಣೆಗೆ ಸಂಸ್ಥೆ ಮುಂದಾಗಬೇಕು. ಅಡಕೆಯ ಒಟ್ಟೂ ಉತ್ಪನ್ನದಲ್ಲಿಶೇ.40 ರಷ್ಟು ಕ್ಯಾಂಪ್ಕೋ ಖರೀದಿಸಬೇಕು ಎಂದು ಸಿದ್ದಾಪುರದ ಟಿಎಂಎಸ್‌ ಅಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ ಒತ್ತಾಯಿಸಿದರು.

ನಾಣಿಕಟ್ಟಾ ಸೊಸೈಟಿ ಅಧ್ಯಕ್ಷ ಎನ್‌.ಬಿ.ಹೆಗಡೆ ಮತ್ತೀಹಳ್ಳಿ, ಜಿ.ಎಂ.ಹೆಗಡೆ ಮುಳಖಂಡ, ಎನ್‌.ಎಸ್‌.ಹೆಗಡೆ ಕುಂದರಗಿ, ಪಿ.ಜಿ.ಭಟ್ಟ ವಡ್ರಮನೆ, ವಿಶ್ವನಾಥ ಶರ್ಮಾ ನಾಡಗುಳಿ, ಜಿ.ಆರ್‌.ಹೆಗಡೆ ಬೆಳ್ಳೆಕೇರಿ, ನರೇಂದ್ರ ಹೊಂಡಗಾಶಿ, ಎನ್‌.ಬಿ.ಹೆಗಡೆ ಮತ್ತೀಹಳ್ಳಿ, ಗೋಪಾಲಕೃಷ್ಣ ವೈದ್ಯ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.

ನಿರ್ದೇಶಕರಾದ ಶಂಭುಲಿಂಗ ಹೆಗಡೆ ನಿಡಗೋಡ, ಎಂ.ಕೆ.ಶಂಕರನಾರಾಯಣ ಭಟ್ಟ, ವ್ಯವಸ್ಥಾಪಕ ಮುರಳೀಧರ, ಪ್ರಾದೇಶಿಕ ವ್ಯವಸ್ಥಾಪಕ ಭರತ ಭಟ್ಟ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ