ಆ್ಯಪ್ನಗರ

13 ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ: ಸೈಲ್

ಕಾರವಾರ:ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಸೇತುವೆಗಳನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಹಣ

ವಿಕ ಸುದ್ದಿಲೋಕ 14 Dec 2016, 5:00 am
ಕಾರವಾರ:ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಸೇತುವೆಗಳನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಹಣ ಮಂಜೂರಿಯಾಗುವ ಭರವಸೆ ಇದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
Vijaya Karnataka Web 13 bridge construction proposal sail
13 ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ: ಸೈಲ್

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಕ್ಷೇತ್ರದಲ್ಲಿ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ನೂರು ಕೋಟಿ ರೂ. ಯೋಜನೆ ರೂಪಿಸಿ ರಾಜ್ಯ ಸರಕಾರಕ್ಕೆ ನೀಡಿದ್ದೇನೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’’ ಎಂದರು.
‘‘ಕಾರವಾರ, ಅಂಕೋಲಾ ತಾಲೂಕಿಗೆ ‘ನಮ್ಮ ಗ್ರಾಮ ನಮ್ಮ ರಸೆ’್ತ ಯೋಜನೆಯಡಿ ಒಟ್ಟು 36 ಕಿ.ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದೇ ಯೋಜನೆಯಲ್ಲಿ ಕೂಡು ರಸ್ತೆಗಳ ಬಳಿ ಸೇತುವೆ ನಿರ್ಮಾಣಕ್ಕೆ ಅವಕಾಶವಿದ್ದು, ಇದಕ್ಕಾಗಿ ಎರಡೂ ತಾಲೂಕಿನಲ್ಲಿ 9 ಕಿರು ಸೇತುವೆ ನಿರ್ಮಾಣಕ್ಕೆ ಸರಕಾರದ ನೆರವು ಕೋರಲಾಗಿದೆ. 2017ರೊಳಗೆ 9 ಸೇತುವೆಗಳು ಪೂರ್ಣಗೊಳ್ಳುವ ವಿಶ್ವಾಸವಿದೆ’’ ಎಂದರು.
‘‘ಕಾರವಾರ ತಾಲೂಕಿನ ಮಂಡೇಬೋಳ-ಕಡಿಯೇ ಮಧ್ಯೆ ಕಿರು ಸೇತುವೆ, ಬೋಡಜೋಗ-ಕರ್ಕಲ್ ಸೇತುವೆ, ಹಿಣಿಬೈಲ್-ಬೇಳೂರು ಕ್ರಾಸ್, ಬರ್ಗಲ್ ಬಳಿ ಸೇತುವೆ, ಅಂಗಡಿ-ಮಕ್ನಾಭಾಗ ಮಧ್ಯೆ ಸೇತುವೆಯೊಂದಿಗೆ ಅಂಕೋಲಾ ತಾಲೂಕಿನ ನವ್ಸಳೆ-ಕೊಂಡಳ್ಳಿ, ಕಮ್ಮಾಣಿ-ಹಳವಳ್ಳಿ, ಬೆಳಂಬಾರ ಕುಂಬಾರಕೇರಿ-ಮುದ್ರಾಣಿ ಮಧ್ಯೆ ಕಿರು ಸೇತುವೆಗಳಿಗೆ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ’’ ಎಂದರು.
‘‘ಕಾಮಗಾರಿ ನಡೆದಿರುವ ಸುಂಕೇರಿ-ಕಡವಾಡ ಸೇತುವೆಗೆ ಹೆಚ್ಚುವರಿ 5 ಕೋಟಿ ರೂ. ಮಂಜೂರಾಗಿದೆ. ಮಲ್ಲಾಪುರ-ಭೈರೆ ಮಧ್ಯದ ಸೇತುವೆಯನ್ನು ಕೈಗಾದ ಎನ್‌ಪಿಸಿಯವರು ನಿರ್ಮಿಸಲಿದ್ದಾರೆ. ಮಲ್ಲಾಪುರ-ಕದ್ರಾ ಮಧ್ಯದ ರಸ್ತೆ ನವೀಕರಣವಾಗುವ ಸಾಧ್ಯತೆಗಳಿವೆ’’ ಎಂದರು.
‘‘ಮಲ್ಲಾಪುರ-ಭೈರೆ ಸೇತುವೆ ನಿರ್ಮಾಣಕ್ಕೆ ಸೇತುವೆ ಕೂಡು ಜಾಗದಲ್ಲಿ ಖಾಸಗಿ ಜಮೀನು ಇರುವುದು ಅಡ್ಡಿಯಾಗಿತ್ತುಘಿ. ಆದರೆ ಉದ್ಯಮಿ ದಿಲೀಪ್ ನಾಯ್ಕ ಅವರ ಪತ್ನಿ 34 ಗುಂಟೆ ಜಮೀನನ್ನು ಉಚಿತವಾಗಿ ಸೇತುವೆ ನಿರ್ಮಾಣಕ್ಕೆ ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದಾರೆ’’ ಎಂದರು.
ಹಾವೇರಿಗೆ ಹಾರಿತ್ತು ಸೇತುವೆ ಯೋಜನೆ
‘‘ಉಳಗಾ-ಕೆರವಡಿ ಸೇತುವೆ ನಿರ್ಮಾಣಕ್ಕೆ ಸರಕಾರ 3.30 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಅಧಿಕಾರಿಗಳ ಕಣ್ತಪ್ಪಿನಿಂದ ಅನುದಾನ ಹಾವೇರಿ ಜಿಲ್ಲೆಗೆ ಹೋಗಿತ್ತು. ಈಗ ಅನುದಾನ ಮರಳಿ ಬಂದಿದೆ. ಆದರೆ ಸೇತುವೆಗೆ 30 ಕೋಟಿ ರೂ.ಬೇಕಿದ್ದು, ಕೇಂದ್ರ ಸರಕಾರದ ಸಿಎ್ಆರ್ ಯೋಜನೆ ಅಡಿ ಅನುದಾನ ನೀಡುವಂತೆ ಕೋರಲಾಗಿದೆ’’ ಎಂದರು.
‘‘ಹಾರವಾಡ ಬೇಲೇಕೇರಿ ಮಧ್ಯೆ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ 10 ಕೋಟಿ ರೂ. ನೀಡಿದೆ. ಸೇತುವೆ ಎತ್ತರಿಸಲು 8 ಕೋಟಿ ರೂ. ಹೆಚ್ಚುವರಿ ಬೇಕಿದ್ದು, ಆ ಹಣವನ್ನು ಸರಕಾರದಿಂದ ತರಲು ಯತ್ನ ನಡೆದಿದೆ’’ ಎಂದರು.
‘‘ಗಂಗಾವಳಿ ನದಿಗೆ ಮಂಜುಗುಣಿ-ಗೋಕರ್ಣ ಮಧ್ಯೆ ಸೇತುವೆ ನಿರ್ಮಾಣವಾಗಬೇಕಿದೆ. ಇದಕ್ಕೆ 30 ಕೋಟಿ ರೂ. ಬೇಕಿದೆ. ಅಚವೆ-ವಿಭೂತಿ ಾಲ್ಸ್ ಮಾರ್ಗದ ವಡ್ಡಿ-ಶಿರಸಿ ರಸ್ತೆಗೆ 5 ಕೋಟಿ ರೂ. ಹಾಗೂ ಕೈಗಾ-ವೈಲವಾಡಕ್ಕೆ ಸಾಗುವ ಇಳಕಲ್ ರಸ್ತೆಗೆ 7 ಕೋಟಿ ರೂ. ಮಂಜೂರಾಗಿದ್ದು ಕಾಮಗಾರಿ ಆರಂಭವಾಗಲಿದೆ’’ ಎಂದರು.

ಸತೀಶ ಸೈಲ್ ೆಟೊ ಹಾಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ