ಆ್ಯಪ್ನಗರ

ಉತ್ತರ ಕನ್ನಡದಲ್ಲಿ4 ಪಾಸಿಟಿವ್‌

ಕಾರವಾರ : ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಜೋಯಿಡಾ ಮತ್ತು ಹೊನ್ನಾವರದ ತಲಾ ಒಬ್ಬರಲ್ಲಿಮಂಗಳವಾರ ಕೊರೋನಾ ಸೋಂಕು ಪತ್ತೆಯಾಗಿದೆ. ಇವರೆಲ್ಲಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.

Vijaya Karnataka 20 May 2020, 5:00 am
ಕಾರವಾರ : ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಜೋಯಿಡಾ ಮತ್ತು ಹೊನ್ನಾವರದ ತಲಾ ಒಬ್ಬರಲ್ಲಿಮಂಗಳವಾರ ಕೊರೋನಾ ಸೋಂಕು ಪತ್ತೆಯಾಗಿದೆ. ಇವರೆಲ್ಲಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.
Vijaya Karnataka Web 4 positives in uttara kannada
ಉತ್ತರ ಕನ್ನಡದಲ್ಲಿ4 ಪಾಸಿಟಿವ್‌


ಈ ಪೈಕಿ ಹೊನ್ನಾವರ ಮತ್ತು ಯಲ್ಲಾಪುರದ ಸೋಂಕಿತರನ್ನು ಜಿಲ್ಲೆಗೆ ಕಾಲಿಡುತ್ತಿದ್ದಂತೆ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಇರಿಸಲಾಗಿತ್ತು. ಅವರ ಜೊತೆ ಕ್ವಾರಂಟೈನ್‌ನಲ್ಲಿಇದ್ದ ಇತರರಲ್ಲಿಕೋವಿಡ್‌ ನೆಗೆಟಿವ್‌ ಬಂದಿದೆ. ಜೋಯಿಡಾದ ಸೋಂಕಿತ ಮಹಿಳೆ ಜಿಲ್ಲೆಗೆ ಬಂದ ಅವಧಿಯಲ್ಲಿಸಾಂಸ್ಥಿಕ ಕ್ವಾರಂಟೈನ್‌ ಪದ್ಧತಿ ಇರಲಿಲ್ಲ, ಇನ್ನು ದಾಂಡೇಲಿಯ ಸೋಂಕಿತ ಲಾರಿ ಚಾಲಕನಾಗಿದ್ದು ಗುಜರಾತದಿಂದ ಮಂಗಳೂರು , ಗೋವಾ, ಅಲ್ಲಿಂದ ಹಳಿಯಾಳದ ಮೂಲಕ ದಾಂಡೇಲಿಗೆ ಬಂದಿದ್ದು ಒಂದು ರಾತ್ರಿ ಮನೆಯಲ್ಲಿಉಳಿದಿದ್ದಾರೆ. ಹಾಗಾಗಿ ಈ ಇಬ್ಬರು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಮಾಡಲಾಗುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ